ಬಿಬಿಎಂಪಿ: ಬಿಜೆಪಿಗಿಲ್ಲ ಅಧಿಕಾರ
ಬಿಜೆಪಿ ಪಾಲಿಗೆ ಬಿಬಿಎಂಪಿ ಅಧಿಕಾರ ಇನ್ನು ದೂರ ದೂರ. ಬಿಬಿಎಂಪಿ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದು ಬೀಗುತ್ತಿದ್ದ ಬಿಜೆಪಿ ಈಗ ಏಕಾಂಗಿ. ಅಧಿಕಾರ ಹಿಡಿಯಲು ಬಿಜೆಪಿಗೆ ಇದ್ದಂಥ ಎಲ್ಲಾ ದಾರಿಗಳೂ ಬಂದ್ ಆಗಿದ್ದು, ಅದಕ್ಕೀಗ ಉಳಿದಿರುವುದು ಪ್ರತಿಪಕ್ಷ ಸ್ಥಾನ ಮಾತ್ರ...

ಬೆಂಗಳೂರು: ಬಿಜೆಪಿ ಪಾಲಿಗೆ ಬಿಬಿಎಂಪಿ ಅಧಿಕಾರ ಇನ್ನು ದೂರ ದೂರ. ಬಿಬಿಎಂಪಿ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದು ಬೀಗುತ್ತಿದ್ದ ಬಿಜೆಪಿ ಈಗ ಏಕಾಂಗಿ. ಅಧಿಕಾರ ಹಿಡಿಯಲು ಬಿಜೆಪಿಗೆ ಇದ್ದಂಥ ಎಲ್ಲಾ ದಾರಿಗಳೂ ಬಂದ್ ಆಗಿದ್ದು, ಅದಕ್ಕೀಗ ಉಳಿದಿರುವುದು ಪ್ರತಿಪಕ್ಷ ಸ್ಥಾನ ಮಾತ್ರ. ಹೀಗಾಗಿ ಪಕ್ಷದ ನಾಯಕರು ಇನ್ನೂ ಏನಾದರೂ ಮಾಡಲು ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಚಿಂತನೆ ಶುರು ಮಾಡಿದ್ದಾರೆ.
ಅಷ್ಟೇ ಅಲ್ಲ. ಕೊನೆಯ ಹಂತದಲ್ಲಿ ಏನಾದರೂ ಪ್ರಯತ್ನ ಮಾಡಲು ಸಾಧ್ಯವೇ ಎನ್ನುವ ಆಲೋಚನೆ ಪ್ರಾರಂಭವಾಗಿದೆ. ಬಿಬಿಎಂಪಿ ಚುನಾವಣೆಯ ಇಡೀ ರಂಗವನ್ನು ಕೇವಲ 14 ಸ್ಥಾನಗಳನ್ನು ಪಡೆ- ದಿರುವ ಜೆಡಿಎಸ್ ನಿರ್ಧರಿಸು-ವಂತಾಗಿದ್ದು ನಿಜಕ್ಕೂ ಅನಿರೀಕ್ಷಿತ. ಅದರಲ್ಲೂ ಬಿಜೆಪಿ 100 ಸದಸ್ಯರನ್ನು ಪಡೆದಿದ್ದರೂ, 76 ಸದಸ್ಯರ ಬಲದ ಕಾಂಗ್ರೆಸ್ ಪಕ್ಷೇತರ 6 ಮಂದಿಯನ್ನು ಹಿಡಿದಿಟ್ಟುಕೊಂಡಿದ್ದರೂ ಜೆಡಿಎಸ್ ನಿರ್ಧಾರವೇ ರಂಗವನ್ನು ಅಂತಿಮಗೊಳಿಸಬೇಕಾಯಿತು.
ಅಂದರೆ ಚುನಾವಣೆ ನಂತರದಲ್ಲಿ ಜೆಡಿಎಸ್‍ನ ರಾಜಕೀಯ ನಡೆಗಳನ್ನು ತಿಳಿಯುವಲ್ಲಿ ಸೋತಿದ್ದು ಕೂಡ ಬಿಜೆಪಿ ವೈಫಲ್ಯಕ್ಕೆ ಕಾರಣ. ಇದೆಲ್ಲದರಿಂದಾಗಿ ಪಕ್ಷೇತರರು ಅಥವಾ ಜೆಡಿಎಸ್ ನೆಚ್ಚಿಕೊಂಡು ಅಧಿಕಾರ ಹಿಡಿಯುವ ಬಿಜೆಪಿಯ ಆಸೆ ಸಂಪೂರ್ಣ ಕಮರಿ ಹೋಗಿದ್ದು, ಈಗ ಬಹುತೇಕ ಸೋಲು ಒಪ್ಪಿಕೊಳ್ಳುವ ಹಂತಕ್ಕೆ ಬಂದಿದೆ ಎಂಬುದು ಅವರದೇ ಪಕ್ಷದವರು ಹೇಳುವ ಮಾತು. ಇರುವ ಕೊನೆಯ ಐದಾರು ದಿನಗಳಲ್ಲಿ ಎದುರಾಳಿ ಪಕ್ಷಗಳಿಗೆ ಹೇಗಾದರೂ ಅಧಿಕಾರ ತಪ್ಪಿಸಲು ಸಾಧ್ಯವೇ ಎನ್ನುವ ಚಿಂತನೆಯೂ ನಡೆದಿದೆ. ಪಕ್ಷದ ಮುಖಂಡರು ಹಾಗೂ ಕೆಲವು ಪಾಲಿಕೆ ಸದಸ್ಯರು ನಾಮಕರಣ ಸದಸ್ಯರಿಗೆ ಮತ ಚಲಾಯಿಸುವ ಹಕ್ಕಿಲ್ಲ ಎನ್ನುವ ವಿಚಾರ ಮುಂದಿಟ್ಟುಕೊಂಡು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇ ರೀತಿ ಸಾಧ್ಯವಿ ರುವ ಎಲ್ಲಾ ಕರಸತ್ತುಗಳನ್ನು ನಡೆಸಲು ಗುರುವಾರ ಮುಖಂಡರ ಸಭೆಯನ್ನೂ ನಡೆಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


