ನಗರದಲ್ಲಿ ಬಂದ್ ಠುಸ್
ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರುವುದಕ್ಕೆ ವಿರೋಧ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆದಿದ್ದ ಭಾರತ್ ಬಂದ್‍ಗೆ ಕೆ.ಆರ್. ಪುರ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು...

ಬೆಂಗಳೂರು: ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರುವುದಕ್ಕೆ ವಿರೋಧ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆದಿದ್ದ ಭಾರತ್ ಬಂದ್‍ಗೆ ಕೆ.ಆರ್. ಪುರ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಮುಂಜಾನೆಯಿಂದ ಆರಂಭವಾಗಿ ಮ. 12ರವರೆಗೆ ವ್ಯಾಪಾರಿಗಳು ಅಂಗಡಿ ಮುಂಗಟ್ಟು ಮುಚ್ಚಿ ಬಂದ್‍ಗೆ ಬೆಂಬಲ ಸೂಚಿಸಿದರು. ನಂತರ ಎಂದಿನಂತೆ ಮಳಿಗೆಗಳು ತೆರೆದವು. ಬಿಎಂಟಿಸಿ, ಕೆಎಸ್ ಆರ್‍ಟಿಸಿ ಬಸ್ಸುಗಳು ರಸ್ತೆಗಿಳಿಯದೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ನಂತರ ಕೆಲವು ಖಾಸಗಿ ಬಸ್ಸು ಹಾಗೂ ಕ್ಯಾಬ್‍ಗಳು ಎಂದಿನಂತೆ ಸಂಚರಿಸಿದ್ದರಿಂದ ಸಾರ್ವ ಜನಿಕರಿಗೆ ಅನುಕೂಲವಾಯಿತು.
ಬಂದ್ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲಿಸರು ಮುಜಾಗ್ರತೆ ವಹಿಸಿದ್ದು, ಬಿಗಿ ಭದ್ರತೆ ಕೈಗೊಂಡಿದ್ದರು. ಖಾಸಗಿ ಶಾಲಾ ಕಾಲೇಜುಗಳು ಘೋಷಿತ ಹಾಗೂ ಸರ್ಕಾರಿ ಶಾಲೆ ಕಾಲೇಜು-ಗಳು ಅಘೋಷಿತ ರಜೆಯಲ್ಲಿ ದ್ದವು. ಬ್ಯಾಂಕ್, ಜೀವವಿಮಾ ನಿಗಮದ ಕಚೇರಿ, ಇತಿಹಾಸ ಪ್ರಸಿದಟಛಿ ಕೆ.ಆರ್. ಪುರ ಸಂತೆಯಲ್ಲಿ ಕೂಡ ವಹಿವಾಟು ಸ್ಥಗಿತಗೊಂಡಿತ್ತು.
ಬಸ್ಸು ಇಲ್ಲದ್ದರಿಂದ ಆಟೋ ಮೊರೆ ಹೋದವರಿಗೂ ನಿರಾಶೆ ಕಾದಿತ್ತು. ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಎಲ್ಲಿಯೂ ಆಟೋ ಸಂಚಾರ ಕಂಡುಬರಲಿಲ್ಲ. ಮೋದಿಯಿಂದ ಗುಲಾಮಗಿರಿ ಬೆಂಗಳೂರು: ಕಾರ್ಪೊರೇಟ್ ಕಂಪನಿಗಳ ಏಳಿಗೆಗಾಗಿ ನೀತಿ-ನಿಯಮಗಳನ್ನು ರೂಪಿಸು ತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಬಡ ಕಾರ್ಮಿಕರನ್ನು ಕಂಪನಿಗಳ ಗುಲಾ ಮರನ್ನಾಗಿಸಲು ಹೊರಟಿದ್ದಾರೆ ಎಂದು ಆಲ್ ಇಂಡಿಯಾ ಟ್ರೇಡ್ ಯುನಿಯನ್ ಕಾಂಗ್ರೆಸ್ (ಎಐಟಿಯುಸಿ) ಕಾರ್ಯದರ್ಶಿ ಅನಂತ ಸುಬ್ಬರಾವ್ ಟೀಕಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


