ಜಿಲ್ಲಾ ಸುದ್ದಿ

ಎಲೆಕ್ಟ್ರಾನಿಕ್ ಸಿಟಿಗೆ ಹೆಚ್ಚುವರಿ ಬಸ್ ಸಂಚಾರ

ಐಟಿ ಉದ್ಯೋಗಿಗಳ ಮನವಿ ಮೇರೆಗೆ ಎಲೆಕ್ಟ್ರಾನಿಕ್ ಸಿಟಿಗೆ ಹೆಚ್ಚುವರಿ ಬಸ್ ಒದಗಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಹೆಚ್ಚುವರಿಯಾಗಿ 140 ಬಸ್‍ಗಳ ಸಂಚಾರ ಆರಂಭಿಸುವಂತೆ ಕೋರಿದೆ...

ಎಲೆಕ್ಟ್ರಾನಿಕ್ ಸಿಟಿಗೆ ಹೆಚ್ಚುವರಿ ಬಸ್ ಸಂಚಾರ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಐಟಿ ಉದ್ಯೋಗಿಗಳ ಮನವಿ ಮೇರೆಗೆ ಎಲೆಕ್ಟ್ರಾನಿಕ್ ಸಿಟಿಗೆ ಹೆಚ್ಚುವರಿ ಬಸ್ ಒದಗಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಹೆಚ್ಚುವರಿಯಾಗಿ 140 ಬಸ್‍ಗಳ ಸಂಚಾರ ಆರಂಭಿಸುವಂತೆ ಕೋರಿದೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಐಟಿ ಸಂಸ್ಥೆಗಳು ಹೆಚ್ಚಿದ್ದು, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಬಸ್‍ಗಳ ಕೊರತೆ ಇದೆ. ಆದ್ದರಿಂದ ಪ್ರಯಾಣಿಕರು ಬರೆದಿರುವ ಪತ್ರ ಆಧರಿಸಿ ಬಸ್ ಸೇವೆ ಹೆಚ್ಚಿಸಲು ಸಂಸ್ಥೆ ನಿರ್ಧರಿಸಿದ್ದು, ಕೆಲವೇ ದಿನಗಳಲ್ಲಿ ಈ ಸೇವೆ ಆರಂಭವಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಟಿಸಿಯ ಹಿರಿಯ ಅಧಿಕಾರಿಗಳು, ``ಎಲೆಕ್ಟ್ರಾನಿಕ್ ಸಿಟಿ ಹಾಗೂ ಸುತ್ತಮುತ್ತ ಐಟಿ ಸಂಸ್ಥೆಗಳು ಹೆಚ್ಚಿವೆ. ಹೆಚ್ಚುವರಿ ಬಸ್ ಸೇವೆ ಒದಗಿಸಿ ಎಂದು ಕೆಲ ಐಟಿ ಸಂಘಟನೆಗಳು (ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‍ಶಿಪ್ ಅಥಾರಿಟಿ-ಇಎಲ್‍ಸಿಐಟಿಎ) ಪತ್ರ ಬರೆದಿವೆ.

ಮನವಿ ಯನ್ನು ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗಿದೆ. ಈ ಬಸ್‍ಗಳ ನೂತನ ಮಾರ್ಗವನ್ನು ಮೆಜೆಸ್ಟಿಕ್, ಜಯನಗರ, ಬನಶಂಕರಿ ಹಾಗೂ ಇತರೆ ಆಯ್ದ ಪ್ರದೇಶಗಳಿಂದ
ಆರಂಬಿsಸಲಾಗುವುದು. ನಗರದ ವಿವಿಧ ಭಾಗಗಳಿಂದ ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ ಗೇಟ್, ವಿಪ್ರೋ ಗೇಟ್, ಅಲ್ಲಿನ ಪೊಲೀಸ್ ಠಾಣೆ ಸೇರಿದಂತೆ ಎಲೆಕ್ಟ್ರಾನಿಕ್ ಸಿಟಿಯ 15
ಸ್ಥಳಗಳಿಗೆ ಬಸ್ ಸಂಚಾರ ಇದೆ. ಸಾಮಾನ್ಯ ಬಿಎಂಟಿಸಿ ಬಸ್‍ಗಳ ಕೊರತೆ ಇದೆ ಎಂಬುದು ಆ ಭಾಗದ ಪ್ರಯಾಣಿಕರ ಅಭಿಪ್ರಾಯ. 140 ಹೆಚ್ಚುವರಿ ಬಸ್ ಸೇವೆ ಆರಂಭಿಸಲು ಚಿಂತಿಸಲಾಗಿದೆ,'' ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.