ಡಿಸ್ಕೌಂಟ್ ಚೆಕ್ ವಂಚಕರ ಬಂಧನ
ಪ್ರತಿಷ್ಠಿತ ಬಿಲ್ಡರ್‍ಗಳ ಹೆಸರಲ್ಲಿ ನಕಲಿ ಚೆಕ್ ಗಳನ್ನು ಪಾನ್ ಬ್ರೋಕರ್ಸ್ ಅಂಗಡಿಗಳಲ್ಲಿ ರಿಯಾಯಿತು ದರದಲ್ಲಿ ನೀಡಿ ಲಕ್ಷಾಂತರ ರುಪಾಯಿ ಪದು ವಂಚಿಸುತ್ತಿದ್ದ ಅಂತಾರಾಜ್ಯ ವಂಚಕರನ್ನು ತಿಲಕ ನಗರ ಪೊಲೀಸರು ಬಂಧಿಸಿದ್ದಾರೆ...

ಬೆಂಗಳೂರು: ಪ್ರತಿಷ್ಠಿತ ಬಿಲ್ಡರ್‍ಗಳ ಹೆಸರಲ್ಲಿ ನಕಲಿ ಚೆಕ್ ಗಳನ್ನು ಪಾನ್ ಬ್ರೋಕರ್ಸ್ ಅಂಗಡಿಗಳಲ್ಲಿ ರಿಯಾಯಿತು ದರದಲ್ಲಿ ನೀಡಿ ಲಕ್ಷಾಂತರ ರುಪಾಯಿ ಪಡೆದು ವಂಚಿಸುತ್ತಿದ್ದ ಅಂತಾರಾಜ್ಯ ವಂಚಕರನ್ನು ತಿಲಕ ನಗರ ಪೊಲೀಸರು ಬಂಧಿಸಿದ್ದಾರೆ.
ಬೊಮ್ಮನಹಳ್ಳಿ ನಿವಾಸಿ ನವರತ್ನ ಶರ್ಮಾ (27), ಎಚ್‍ಎಸ್‍ಆರ್ ಲೇಔಟ್‍ನ ಧರ್ಮೇಂದ್ರ ಅಂಬಾವಾನಿ (44), ದೆಹಲಿ ಸದರ್ ಬಜಾರ್‍ನ ರಾಜೀಬ್ ಗುಪ್ತಾ (29), ಮೊಹಮದ್ ಶೆಜಿ (30), ವೈಟ್‍ಪಿsೀಲ್ಡ್‍ನ ಜೋಕಿಮ್(52) ಬಂಧಿತರು. ಆರೋಪಿಗಳು ನಕಲಿ ಆಧಾರ್ ಕಾರ್ಡ್ ಮಾಡಿಕೊಂಡು ಬಳಿಕ ನಗರದ ಬ್ಯಾಂಕ್ ಗಳಲ್ಲಿ ಶೂನ್ಯ ಖಾತೆಯ ಅಕೌಂಟ್ ತೆರೆದು ಚೆಕ್ ಬುಕ್ ಕೂಡ ಪಡೆದುಕೊಳ್ಳುತ್ತಿದ್ದರು. . ಪ್ರತಿಷ್ಠಿತ ಡೆವಲಪರ್ ಗಳ ಮತ್ತು ಕಂಪನಿಗಳ ಹೆಸರುಗಳನ್ನು ಚೆಕ್ ಬುಕ್ ಮೇಲೆ ಟೈಪ್ ಮಾಡಿ ಚೆಕ್‍ಗಳು ಕಂಪನಿಗಳಿಂದಲೇ ಪೇಮೆಂಟ್ ಮಾಡಲಾಗಿದೆ ಎಂದು ಪಾನ್ ಬ್ರೋಕರ್‍ಗಳ ನ್ನು ನಂಬಿಸುತ್ತಿದ್ದರು.
ಕಾರ್ಮಿಕರಿಗೆ ತುರ್ತು ಹಣ ನೀಡ ಬೇಕಿದೆ. ಚೆಕ್ ಇಟ್ಟುಕೊಂಡು ಡಿಸ್ಕೌಂಟ್‍ನಲ್ಲಿ ಹಣ ನೀಡಿ ಎಂದು ಹೇಳುತ್ತಿದ್ದರು. ಅವರಿಗೆ ನಂಬಿಕೆ ಬರಲು ನಕಲಿ ಆಧಾರ್ ಕಾರ್ಡ್ ಗಳನ್ನು ನೀಡುತ್ತಿದ್ದರು. ಚೆಕ್ ನೀಡಿ ಹಣ ಪಡೆದುಕೊಂಡು ಪರಾರಿಯಾಗುತ್ತಿದ್ದರು.
ಅ.10ರಂದು ಮಹಾಲಕ್ಷ್ಮೀ ಜ್ಯುವೆಲರ್ಸ್ ಆ್ಯಂಡ್ ಬ್ಯಾಂಕರ್ಸ್ ನಡೆಸುತ್ತಿರುವ ಜಿತೇಂದ್ರ ಅವರು ಇವರಿಂದ ವಂಚನೆಗೊಳಗಾಗಿತಿಲಕ ನಗರ ಠಾಣೆಗೆ ದೂರು ನೀಡಿದ್ದರು. ಜಯನಗರ 9ನೇ ಬ್ಲಾಕ್‍ನಲ್ಲಿರುವ ಶಾಂತಿ ಜ್ಯುವೆಲಸ್ರ್ ಗೆ ಭೇಟಿ ನೀಡಿದ್ದ ಆರೋಪಿಗಳು ಮಾಲೀಕ ಹಸ್ತಿ ಭಾಯïಗೆ ತಮ್ಮ ಬಳಿ ರು.7ಲಕ್ಷದ ಚೆಕ್ ಇದ್ದು ಶೇ.1.5 ಪರ್ಸೆಂಟ್ ಡಿಸ್ಕೌಂಟ್‍ನಲ್ಲಿ ಹಣ ನೀಡುವಂತೆ ಕೋರಿದ್ದರು. ಹಸ್ತಿಭಾಯ್ ತಮಗೆ ಪರಿಚಿತರಾಗಿದ್ದ ಜಿತೇಂದ್ರ ಹಾಗೂ ಆತನ ಸಹೋದರ ಬಾಬುಬಾಲ್‍ಗೆ ತಿಳಿಸಿದ್ದರು.
ಅದರಂತೆ ಆರೋಪಿಗಳಿಂದ ರು.4 ಲಕ್ಷದ ಹಾಗೂ ರು.3 ಲಕ್ಷದ ಎರಡು ಚೆಕ್ ಪಡೆದ ಜಿತೇಂದ್ರ ರು.6.89 ಲಕ್ಷ ಹಣ ನೀಡಿದ್ದರು. ನಂತರ ನಕಲಿ ಆಧಾರ್ ಕಾರ್ಡ್ ಕೊಟ್ಟು ಪರಾರಿಯಾಗಿದ್ದರು. ಚೆಕ್ ಪಡೆದ ಜಿತೇಂದ್ರ, ಬ್ಯಾಂಕಿಗೆ ಹಾಕಿ ದಾಗ ಅದರಲ್ಲಿ ಹಣ ಇರಲಿಲ್ಲ. ಆರೋಪಿಗಳಿಗೆ ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಅಂತಿಮವಾಗಿ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


