ಆ್ಯಪಲ್ ಮೇಲೆ ಆಮಿಷ, ಯುವತಿಯರಿಗೆ ಮೋಸ
ಆ್ಯಪಲ್ ಕಂಪನಿ ಉದ್ಯೋಗಿ ಎಂದು ಹೇಳಿಕೊಂಡು ವಧುವರರ ಜಾಲತಾಣಗಳಲ್ಲಿ ಸುಳ್ಳು ವಿವರ ಹಾಕಿ, ಮದುವೆಯಾಗುವುದಾಗಿ ನಂಬಿಸಿ ಯುವತಿಯರನ್ನು ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ...

ಬೆಂಗಳೂರು: ಆ್ಯಪಲ್ ಕಂಪನಿ ಉದ್ಯೋಗಿ ಎಂದು ಹೇಳಿಕೊಂಡು ವಧುವರರ ಜಾಲತಾಣಗಳಲ್ಲಿ ಸುಳ್ಳು ವಿವರ ಹಾಕಿ, ಮದುವೆಯಾಗುವುದಾಗಿ ನಂಬಿಸಿ ಯುವತಿಯರನ್ನು ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈತ ಅವರ ಬಳಿ ಹಣ ಪಡೆದು, ದೈಹಿಕ ಸಂಬಂಧವನ್ನೂ ಬೆಳೆಸಿ ಮೋಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ನ್ಯೂ ತಿಪ್ಪಸಂದ್ರದಲ್ಲಿ ವಾಸವಿದ್ದ ಪಂಜಾಬ್ ಮೂಲದ ಮನೋಜ್ ಗೋಗೊಯ್(30) ಬಂಧಿತ ಆರೋಪಿ. 4 ವರ್ಷಗಳಿಂದ ಇಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ಮನೋಜ್, ತಾನು ಆ್ಯಪಲ್ ಉದ್ಯೋಗಿ ಎಂದು ಹೇಳಿ ಫೋಟೋ ಸಹಿತ ವಿವರಗಳನ್ನು ಜೀವನ್‍ಸಾಥಿ ಡಾಟ್ ಕಾಮ್, ಶಾದಿ ಡಾಟ್ ಕಾಮ್ಗಳಲ್ಲಿ ಅಪ್‍ಲೋಡ್ ಮಾಡುತ್ತಿದ್ದ. ಸು#ರದ್ರೂಪಿಯಾಗಿದ್ದ ಮನೋಜ್ ನಿಜವಾಗಿಯೂ ಆ್ಯಪಲ್ ಕಂಪನಿ ಉದ್ಯೋಗಿ ಎಂದು ನಂಬುತ್ತಿದ್ದ ಮಹಿಳೆಯರು ಇ ಮೇಲ್ ಮೂಲಕ ಸಂಪರ್ಕಿಸಿದಾಗ ತನಗೆ ಲಕ್ಷಾಂತರ ರುಪಾಯಿ ಸಂಬಳ ಬರುತ್ತಿದ್ದು ಮದುವೆಯಾಗುವುದಾಗಿ ಹೇಳುತ್ತಿದ್ದ.
ತಾನು ಉದ್ಯೋಗಿಯಾಗಿರುವ ಕಾರಣ ಆ್ಯಪಲ್ ಕಂಪನಿಯ ಐ ಫೋನ್, ಐ ಮ್ಯಾಕ್, ಐ ಪ್ಯಾಡ್ ಖರೀದಿಸಿದರೆ ಶೇ.45 ರಷ್ಟು ರಿಯಾಯಿತಿ ಸಿಗುತ್ತದೆ ಎಂದು ಪುಸಲಾಯಿಸುತ್ತಿದ್ದ. ಅವರಿಗೆ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಕೊಡಿಸುವುದಾಗಿ ಹೇಳಿ ತನ್ನ ಅಕೌಂಟ್‍ಗೆ ಲಕ್ಷಾಂತರ ರುಪಾಯಿ ಹಣ ಹಾಕಿಸಿಕೊಳ್ಳುತ್ತಿದ್ದ. ಬಳಿಕ ಬೇರೆ ಬೇರೆ ಕಾರಣಗಳನ್ನು ಹೇಳಿ ವಂಚಿಸುತ್ತಿದ್ದ.
`ಐ ಲವ್ ಯು', `ಐ ಮ್ಯಾರಿ ಯು'
ಆರೋಪಿ ಕಳೆದ 2 ವರ್ಷಗಳಿಂದ ಈ ರೀತಿ ಕೃತ್ಯ ಎಸಗುತ್ತಿದ್ದ. ಸುಮಾರು 20ರಿಂದ 25 ಯುವತಿಯರ ಜತೆ ನಿರಂತರ ಸಂಪರ್ಕ ಹೊಂದಿದ್ದ. ದಾಳಿ ವೇಳೆ ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ `ಐ ಲವ್ ಯು', `ಐ ಮ್ಯಾರಿ ಯು', `ಐ ಮಿಸ್ ಯು', `ಐ ಕಿಸ್ ಯು', `ಐ ವಾಂಟ್ ಟು ಮ್ಯಾರಿ ಯು' ಮುಂತಾದ ರಸಿಕತೆಯ ಸಂದೇಶಗಳನ್ನು ಕಳುಹಿಸಿ ಚಾಟ್ ಮಾಡುತ್ತಿದ್ದುದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


