ಆರ್‍ಎಸ್‍ಎಸ್ ದೇಶದ್ರೋಹಿ ಸಂಘಟನೆ: ಬೃಂದಾ ಕಾರಟ್
ಆರ್‍ಎಸ್‍ಎಸ್ ಒಂದು ದೇಶದ್ರೋಹಿ ಸಂಘಟನೆ' ಎಂದು ಮಾಜಿ ಸಂಸದೆ ಹಾಗೂ ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್‍ನ ರಾಷ್ಟ್ರೀಯ ಉಪಾಧ್ಯಕ್ಷ ಬೃಂದಾ...

ಬೆಂಗಳೂರು: ಆರ್‍ಎಸ್‍ಎಸ್ ಒಂದು ದೇಶದ್ರೋಹಿ ಸಂಘಟನೆ' ಎಂದು ಮಾಜಿ ಸಂಸದೆ ಹಾಗೂ ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್‍ನ ರಾಷ್ಟ್ರೀಯ ಉಪಾಧ್ಯಕ್ಷ ಬೃಂದಾ ಕಾರಟ್ ಗಂಭೀರವಾಗಿ ಆರೋಪಿಸಿದರು.
ನಗರದಲ್ಲಿ ಭಾನುವಾರ ಕೆ.ಎಚ್. ಪಾಟೀಲ್ ಸಭಾಂಗಣದಲ್ಲಿ ಆಯೋಸಿದ್ದ ಆದಿವಾಸಿ ಬುಡಕಟ್ಟು ಸಮುದಾಯಗಳ ಬದುಕು-ಬವಣೆ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಹಕ್ಕೊತ್ತಾಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ (ಆರ್‍ಎಸ್‍ಎಸ್) ಈ ದೇಶದ ಐಕ್ಯತೆ ಮುರಿಯುವಂತಹ ಕೆಲಸ ಮಾಡುತ್ತಿದೆ. ಬುಡಕಟ್ಟು ಜನರನ್ನು ವಿಭಜನೆ ಮಾಡುತ್ತಿದೆ. ಧರ್ಮದ ಹೆಸರಿನಲ್ಲಿ ಬುಡಕಟ್ಟು ಜನರಲ್ಲಿ ಒಡಕು ಮೂಡಿ ಸುತ್ತಿದೆ. ಹಿಂದೂತ್ವ ಸಂಸ್ಕತಿಯನ್ನು ಬಲವಂತವಾಗಿ ಹೇರಲು ಬುಡಕಟ್ಟು ಜನರನ್ನು ವಿಭಜಿಸಿ ಅವರಲ್ಲಿ ದ್ವೇಷದ ವಿಷ ಬೀಜ ಬಿತ್ತಿ ಅವರ ಮಧ್ಯೆ ಒಡಕು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಆರ್‍ಎಸ್ ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕರ್ನಾಟದಲ್ಲಿಯೂ ಇಂತಹ ಶಕ್ತಿಗಳು ಕೆಲಸ ಮಾಡುತ್ತಿವೆ . ಸಂಶೋಧಕ ಎಂ.ಎಂ. ಕಲಬುರ್ಗಿ, ಪನ್ಸಾರೆಯವರ ಹತ್ಯೆ, ಗಿರೀಶ್ ಕಾರ್ನಾಡ್ ವಿರುದ್ಧ ಟೀಕೆ ಇವುಗಳೆಲ್ಲವನ್ನು ಯೋಜನಾ ಬದ್ಧವಾಗಿ ಮಾಡಲಾಗುತ್ತಿದೆ. ಆದ್ದರಿಂದ ಪ್ರಜಾಪ್ರಭುತ್ವ ಶಕ್ತಿಗಳು ಒಟ್ಟಾಗಿ ಇಂತಹ ದೌರ್ಜನ್ಯ, ಅನ್ಯಾಯಗಳ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.
ಹಿಂದೂ ಸಂಸ್ಕೃತಿಯನ್ನು ಈ ದೇಶದ ಮೇಲೆ ಹೇರುವಂತಹ ಕೆಲಸಗಳು ನಡೆಯುತ್ತಿವೆ. ಯಾರೂ ಇವರನ್ನು ಒಪ್ಪುವುದಿಲ್ಲ. ಅಸಹನೆಯ ವಿರುದ್ದ ಯಾರು ಪ್ರತಿರೋಧ ತೋರುತ್ತಾರೋ ಅಂತಹ ವರನ್ನು ಕಮ್ಯುನಿಸ್ಟ್ ಎಂದು ಬ್ರಾಂಡ್ ಮಾಡಲಾಗುತ್ತಿದೆ. ಜೊತೆಗೆ ಇವರ ವಿರುದ್ಧ ಪ್ರತಿಭಟನೆ ಮಾಡುವವರನ್ನು ಸಹ ಕಮ್ಯುನಿಸ್ಟ್ ಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಆರ್‍ಎಸ್‍ಎಸ್ ಸಂಘಟನೆಯವರು ದೇಶದ್ರೋಹಿಗಳು. ದೇಶದಲ್ಲಿ ರಾಷ್ಟ್ರ ವಿರೋಧಿಗಳು ಎಂದು ಯಾರಾದರೂ ಇದ್ದರೆ ಅವರು ಆರ್‍ಎಸ್‍ಎಸ್‍ನವರು ಎಂದು ಗಂಭೀರ ಆರೋಪ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


