ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಆಟೋ ಚಾಲಕರ ಥಳಿತ
ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ ಆಟೊ ಚಾಲಕರ ಗುಂಪೊಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಯಶೋದಾ ವಿ ಆಚಾರ್ಯ ಎಂಬುವವರ ಮೇಲೆ ಹಲ್ಲೆ ನಡೆಸಿರುವ ಘಟನೆ ವಿಜಯನಗರದಲ್ಲಿ ಗುರುವಾರ ರಾತ್ರಿ ನಡೆದಿದೆ...

ಬೆಂಗಳೂರು: ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ ಆಟೊ ಚಾಲಕರ ಗುಂಪೊಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಯಶೋದಾ ವಿ ಆಚಾರ್ಯ ಎಂಬುವವರ ಮೇಲೆ ಹಲ್ಲೆ ನಡೆಸಿರುವ ಘಟನೆ ವಿಜಯನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.
``ನ. 12ರಂದು ರಾತ್ರಿ 7.45ರ ಸುಮಾರಿಗೆ ವಿಜಯನಗರ ಸರ್ವಿಸ್ ರಸ್ತೆ ಶಂಕರ್‍ನಾಗ್ ಆಟೊ ನಿಲ್ದಾಣದ ಹತ್ತಿರ ಕಾರು ನಿಲ್ಲಿಸಿ ಅಂಗಡಿಗೆ ತೆರಳಿದ್ದೆ. ಅಂಗಡಿಯಿಂದ ಮರಳಿ ಬಂದಾಗ ಕಾರಿನ ಸುತ್ತ ನಾಲ್ಕು ಆಟೋ ನಿಲ್ಲಿಸಿದ್ದರು. ಈ ವಿಚಾರವಾಗಿ ಆಟೊ ಚಾಲಕರು ಮತ್ತು ನನ್ನ ನಡುವೆ ನಡೆದ ವಾಗ್ವಾದ ನಡೆಯಿತು.
ಚಾಲಕರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲದೆ ಇಬ್ಬರು ಆಟೊ ಚಾಲಕರು ನನ್ನ ಕೆನ್ನೆಗೆ ಕೈಯಿಂದ ಹೊಡೆದು ಗಾಯಗೊಳಿಸಿ, ಕಾರು ತೆಗೆಯಲು ಬಿಡದೆ ಕೀ ಕಿತ್ತುಕೊಳ್ಳಲು ಪ್ರಯತ್ನಿಸಿದರು. ಗಲಾಟೆ ವೇಳೆ ಎಲ್ಲಾ ಆಟೋ ಚಾಲಕರು ಪಾನಮತ್ತರಾಗಿದ್ದರು. ಅವರ ಹೊಡೆತಕ್ಕೆ ಸಿಲುಕಿ ನಾನು ಪ್ರಜ್ಞೆ ಕಳೆದುಕೊಂಡೆ' ಎಂದು ವಿಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


