ಬಸ್ ಮಾಸಿಕ ಪಾಸ್ ದುಬಾರಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಪ್ರಯಾಣಿಕರಿಗೆ ಶಾಕ್ ನೀಡಿದೆ. ಮಾಸಿಕ ಬಸ್ ಪಾಸ್ ದರವನ್ನು ದಿಢೀರನೇ ಹೆಚ್ಚಿಸಿದೆ. ಈ ಮೂಲಕ ಸಾಮಾನ್ಯ ಪ್ರಯಾಣಿಕನ ಮೇಲೆ `ದರದ ಬರೆ' ಎಳೆದಿದೆ...

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಪ್ರಯಾಣಿಕರಿಗೆ ಶಾಕ್ ನೀಡಿದೆ. ಮಾಸಿಕ ಬಸ್ ಪಾಸ್ ದರವನ್ನು ದಿಢೀರನೇ ಹೆಚ್ಚಿಸಿದೆ. ಈ ಮೂಲಕ ಸಾಮಾನ್ಯ ಪ್ರಯಾಣಿಕನ ಮೇಲೆ `ದರದ ಬರೆ' ಎಳೆದಿದೆ.
ಪ್ರತಿ ಹಂತಕ್ಕೆ ರು.25 ರಿಂದ 30 ಏರಿಕೆ ಮಾಡಲಾಗಿದೆ. ಆದರೆ, ಈ ಬಗ್ಗೆ ಪ್ರಯಾಣಿಕರಿಗೆ ಒಂದು ಸಣ್ಣ ಸುಳಿವೂ ನೀಡಿಲ್ಲ. ಕೆಎಸ್‍ಆರ್‍ಟಿಸಿ ಸಾಮಾನ್ಯ ಹಾಗೂ ಎಕ್ಸ್‍ಪ್ರೆಸ್ ಬಸ್ ಗಳ ಮಾಸಿಕ ಬಸ್ ಪಾಸ್ ದರವನ್ನು ಪರಿಷ್ಕರಿಸಿದ್ದು, ಈ ಪರಿಷ್ಕೃತ ದರ ನ.1 ರಿಂದಲೇ ರಾಜ್ಯಾದ್ಯಂತ ಜಾರಿಗೆ ಬಂದಿದೆ. ಈ ಮೂಲಕ ಏಕಾಏಕಿ ಶೇ.20 ರಿಂದ 30 ರಷ್ಟು ದರ ಹೆಚ್ಚಿಸಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂ ದ ಪ್ರಯಾಣಿಕರಿಗೆ ಮಾಸಿಕ ಬಸ್‍ಪಾಸ್ ದರ ಏರಿಕೆ ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಗಮದ ಹಿರಿಯ ಅಧಿಕಾರಿಗಳು, ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ದರ ಪರಿಷ್ಕರಿಸಲಾಗುತ್ತದೆ.
ಒಂದೊಂದು ಮಾರ್ಗದಲ್ಲಿ ಒಂದೊಂದು ರೀತಿಯ ದರ ನಿಗದಿಪಡಿಸಲಾಗಿರುತ್ತದೆ. ಅದನ್ನು ಈಗ ಏಕರೂಪಕ್ಕೆ ತರಲಾಗುತ್ತಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರತ್ಯೇಕ ಪಾಸ್: ಈ ಹಿಂದೆ ಕೆಎಸ್ ಆರ್‍ಟಿಸಿಯ ಸಾಮಾನ್ಯ ಹಾಗೂ ಎಕ್ಸ್‍ಪ್ರೆಸ್ ಬಸ್‍ಗಳಿಗೆ ಇದ್ದ ಒಂದೇ ಮಾಸಿಕ ಪಾಸ್ ಇತ್ತು. ಪಾಸ್ ಇದ್ದವರು ಎಲ್ಲ ಬಸ್‍ನಲ್ಲೂ ಸಂಚರಿಸಬಹುದಿತ್ತು. ಆದರೆ, ದರ ಪರಿಷ್ಕರಣೆ ಆದ ನಂತರ ಇದನ್ನು ಪ್ರತ್ಯೇಕಗೊಳಿಸಲಾಗಿದೆ. ಹಾಗಾಗಿ ಪ್ರಯಾಣಿಕರು ಇನ್ನುಮುಂದೆ ಎಕ್ಸ್ ಪ್ರೆಸ್, ಸಾಮಾನ್ಯ ಬಸ್‍ಗಳಲ್ಲಿ ಪ್ರಯಾಣಿಸಲು ಪ್ರತ್ಯೇಕ ಬಸ್ ಪಾಸ್ (ಎರಡೆರಡು) ಹೊಂದಿರ ಬೇಕು.
ಇಲ್ಲವಾದಲ್ಲಿ ತಾವು ಪಡೆದ ಪಾಸ್‍ಗೆ ಸಂಬಂಧಪಟ್ಟ ಬಸ್‍ನಲ್ಲೇ ಸಂಚರಿಸಬೇಕು. ಪ್ರತಿ ಸ್ಟೇಜ್‍ಗೂ ಪರಿಷ್ಕರಣೆ: ಈ ದರ ಪರಿಷ್ಕರಣೆ ವಿಶೇಷವಾಗಿದ್ದು, ಪ್ರತಿ ಹಂತಕ್ಕೂ ಈ ಪರಿಷ್ಕೃತ ದರ ಹೆಚ್ಚಿಸಲಾಗಿದೆ. ಈ ಮೂಲಕ ಪ್ರತಿ ಹಂತದಲ್ಲೂ (ಸ್ಟೇಜ್) ಕನಿಷ್ಠ ಶೇ.20ರಿಂದ 30 ರಷ್ಟು ದರ ಏರಿಸಲಾಗಿದೆ. ಗರಿಷ್ಠ 23 ಸ್ಟೇಜ್ ವರೆಗೂ ಮಾಸಿಕ ಪಾಸ್ ದರ ಪರಿಷ್ಕರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


