59.9 ಮಿ.ಮೀ ಮಳೆ
ಶನಿವಾರ ಮಧ್ಯಾಹ್ನದ ತರುವಾಯ ರಾಜ್ಯದ ಬಹುತೇಕ ಕಡೆ ಉತ್ತಮ ರೀತಿಯಲ್ಲಿ ಮಳೆ ಸುರಿದಿದೆ...

ಬೆಂಗಳೂರು: ಶನಿವಾರ ಮಧ್ಯಾಹ್ನದ ತರುವಾಯ ರಾಜ್ಯದ ಬಹುತೇಕ ಕಡೆ ಉತ್ತಮ ರೀತಿಯಲ್ಲಿ ಮಳೆ ಸುರಿದಿದೆ.
ರಾಜ್ಯದಲ್ಲಿ 59.9 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನ ಎಎಚ್‍ಎಎಲ್ ಪ್ರದೇಶದಲ್ಲಿ 19.9 ಮಿ.ಮೀ., ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭಾಗದಲ್ಲಿ 17.4 ಮಿ.ಮೀ.ಮಳೆಯಾಗಿದೆ.
ಹೆಸರುಘಟ್ಟದಲ್ಲಿ 38 ಮಿ.ಮೀ., ಗುಂಡ್ಲುಪೇಟೆಯಲ್ಲಿ 44 ಮಿ.ಮೀ. ಮಳೆ ದಾಖಲಾಗಿದೆ. ಪುತ್ತೂರು 77 ಮಿ.ಮೀ., ಮಾಲೂರು 92 ಮಿ.ಮೀ., ಶ್ರೀನಿವಾಸಪುರ 26 ಮಿ.ಮೀ., ಗೌರಿಬಿದನೂರು 61 ಮಿ. ಮೀ., ಗುಂಡ್ಲುಪೇಟೆ 74.5 ಮಿ.ಮೀ., ವಿರಾಜಪೇಟೆ 69.5 ಮಿ.ಮೀ., ಶ್ರೀರಂಗಪಟ್ಟಣ 89.1 ಮಿ.ಮೀ., ಶಿಡ್ಲಘಟ್ಟ 93.5 ಮಿ.ಮೀ., ಚಿಕ್ಕಬಳ್ಳಾಪುರ 47.5 ಮಿ.ಮೀ., ಚಿಂತಾಮಣಿ 31 ಮಿ.ಮೀ., ಕೆ.ಆರ್.ಪೇಟೆ 51 ಮಿ.ಮೀ., ಮಂಡ್ಯ 42 ಮಿ.ಮೀ., ಮೈಸೂರು 93.5 ಮಿ.ಮೀ., ಹೆಗ್ಗಡದೇವನಕೋಟೆ 60 ಮಿ.ಮೀ., ಕೆ.ಆರ್.ನಗರ 50.5 ಮಿ.ಮೀ., ಜನಗೂಡು 79 ಮಿ.ಮೀ., ಟಿ.ನರಸೀಪುರ 20 ಮಿ.ಮೀ., ಸುಳ್ಯ 94.5 ಮಿ.ಮೀ., ಬೆಳ್ತಂಗಡಿ 44 ಮಿ.ಮೀ., ರಾಮನಗರ 52.5 ಮಿ.ಮೀ., ಕನಕಪುರ 53 ಮಿ.ಮೀ., ಚಿಕ್ಕನಾಯಕನಹಳ್ಳಿ 113 ಮಿ.ಮೀ., ಕುಣಿಗಲ್ 41 ಮಿ.ಮೀ., ತಿಪಟೂರು 86ಮಿ.ಮೀ., ತುಮಕೂರು 77 ಮಿ.ಮೀ., ಅರಸೀಕೆರೆ 46 ಮಿ.ಮೀ., ಆಲೂರು 35 ಮಿ.ಮೀ., ಚನ್ನರಾಯಪಟ್ಟಣ 22 ಮಿ.ಮೀ., ಸಕಲೇಶಪುರ 16 ಮಿ.ಮೀ., ಹಿರೇಕೇರೂರು 49 ಮಿ.ಮೀ., ಬ್ಯಾಡಗಿ 23 ಮಿ.ಮೀ., ಹಾನಗಲ್ 21 ಮಿ.ಮೀ., ಹಾವೇರಿ 29 ಮಿ.ಮೀ., ರಾಣೆಬೆನ್ನೂರು 39 ಮಿ.ಮೀ., ಚನ್ನಗಿರಿ 59 ಮಿ.ಮೀ., ಹೊನ್ನಾಳಿ 48.7 ಮಿ.ಮೀ., ಜಗಳೂರು 35 ಮಿ.ಮೀ. ಸೇರಿದಂತೆ ಹಲವೆಡೆ ಉತ್ತಮ ಮಳೆ ಸುರಿದಿದೆ. ಶನಿವಾರ ಬೆಳಿಗ್ಗೆ 8.30ಕ್ಕೆ ದಾಖಲಾದಂತೆ ಹಿಂದಿನ 24 ಗಂಟೆಗಳಲ್ಲಿ ಅತಿ ಹೆಚ್ಚಿನ ಮಳೆ ಹಾಸನ ಜಿಲ್ಲೆ ನುಗ್ಗೇನಹಳ್ಳಿಯಲ್ಲಿ (7 ಸೆಂ.ಮೀ) ದಾಖಲಾಗಿದೆ. ಮೈಸೂರಿನಲ್ಲಿ 6ಸೆಂ.ಮೀ., ಮಾಣಿ (ದ.ಕ), ಶಿವನಿ (ಚಿಕ್ಕಮಗಳೂರು), ನೆಲಮಂಗಲದಲ್ಲಿ ತಲಾ 5 ಸೆಂ.ಮೀ., ಬಿ.ದುರ್ಗ, ಗೌರಿಬಿದನೂರಿನಲ್ಲಿ 4 ಸೆಂ.ಮೀ., ಅಣ್ಣಿಗೆರೆ, ಸಿಂಧನೂರು, ಮಂಜ್ಯ, ಜಯಪುರ, ಕೊಪ್ಪ, ಸಕಲೇಶಪುರ, ದಾವಣಗೆರೆ, ಭರಮಸಾಗರದಲ್ಲಿ 3 ಸೆಂ.ಮೀ. ಮಳೆಯಾಗಿದೆ. ಸುಬ್ರಹ್ಮಣ್ಯ, ಮಸ್ಕಿ, ಮೂಡಿಗೆರೆ, ಬಾಳೆಹೊನ್ನೂರು, ಹೊಸಹಳ್ಳಿ, ಪರಶುರಾಂಪುರ, ಶಿರಾದಲ್ಲಿ 2 ಸೆಂ.ಮೀ., ಮುಲ್ಕಿ, ಕಿರವತ್ತಿ, ಯಲ್ಲಾಪುರ, ಮಹಾಲಿಂಗಪುರ, ಮುದ್ಗಲ್, ಮಾದಾಪುರ, ಸೋಮವಾರಪೇಟೆ, ಆಗುಂಬೆ, ತಾಳಗುಪ್ಪ, ಹುಂಚದಕಟ್ಟೆ, ಶೃಂಗೇರಿ, ಕಳಸ, ಪಂಚನಹಳ್ಳಿ, ಹಾಸನ, ಅರಸಿಕೆರೆ, ಕೆ.ಆರ್.ನಗರ, ಬೇಗೂರು,ಯಳಂದೂರು, ಕೆ.ಆರ್.ಸಾಗರ,ಶ್ರೀರಂಗಪಟ್ಟ ಸೇರಿ ವಿವಿಧ ಕಡೆ 1 ಸೆಂ.ಮಿ.ಮಳೆ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


