ಬಿಬಿಎಂಪಿ ವಿಭಜನೆಗೆ ಆರ್‍ಪಿಐ ವಿರೋಧ
ದಲಿತರು, ಹಿಂದುಳಿದವರ ಸಮಗ್ರ ಅಭಿವೃದ್ಧಿ ಮತ್ತು ಬೆಂಗಳೂರು ನಗರದ ಐಕ್ಯತೆಯ ದೃಷ್ಟಿಯಿಂದ ಬರುವ ಬಿಬಿಎಂಪಿ ಚುನಾವಣೆಯನ್ನು ದಲಿತ ಮತ್ತು ಕನ್ನಡಪರ ಸಂಘಟನೆಗಳು ಗಂಭೀರವಾಗಿ ಪರಿಗಣಿಸಲಿವೆ ಎಂದು ಭಾರತೀಯ ರಿಪಬ್ಲಿಕನ್ ಪಕ್ಷದ ರಾಜ್ಯಾಧ್ಯಕ್ಷ...

ಬೆಂಗಳೂರು: ದಲಿತರು, ಹಿಂದುಳಿದವರ ಸಮಗ್ರ ಅಭಿವೃದ್ಧಿ ಮತ್ತು ಬೆಂಗಳೂರು ನಗರದ ಐಕ್ಯತೆಯ ದೃಷ್ಟಿಯಿಂದ ಬರುವ ಬಿಬಿಎಂಪಿ ಚುನಾವಣೆಯನ್ನು ದಲಿತ ಮತ್ತು ಕನ್ನಡಪರ ಸಂಘಟನೆಗಳು ಗಂಭೀರವಾಗಿ ಪರಿಗಣಿಸಲಿವೆ ಎಂದು ಭಾರತೀಯ ರಿಪಬ್ಲಿಕನ್ ಪಕ್ಷದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದರು.
ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ಲಗ್ಗೆರೆ ಲಕ್ಷ್ಮೀದೇವಿ ನಗರದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಪಶ್ಚಿಮ ವಿಭಾಗದ ಆರ್‍ಪಿಐ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಕಾಂಗ್ರೆಸ್, ಬಿಜೆಪಿ ಸೇರಿದಂತೆ ಅಧಿಕಾರದ ರುಚಿ ಕಂಡ ಯಾವುದೇ ಪಕ್ಷಕ್ಕೂ ಬೆಂಗಳೂರು ನಗರದ ಐಕ್ಯತೆ ಮತ್ತು ಅಭಿವೃದ್ಧಿ ಬೇಕಾಗಿಲ್ಲ. ಅಭಿವೃದ್ಧಿ ನೆಪದಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಹೊಡೆದ ಕುಖ್ಯಾತಿ ಎಲ್ಲ ಪಕ್ಷಗಳಿಗೂ ಅಂಟಿದೆ. ಮತ್ತೆ ಅದೇ ಪಕ್ಷಗಳು ಅಬಿsವೃದಿಟಛಿ ಸೋಗಿನಲ್ಲಿ ಜನತೆ ಮುಂದೆ ಬರಲಿವೆ. ಈ ಸಂದರ್ಭದಲ್ಲಿ ನಗರದ ಜನತೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಭಾರತೀಯ ರಿಪಬ್ಲಿಕನ್ ಪಕ್ಷ ಬಿಬಿಎಂಪಿ ವಿಭಜನೆಯನ್ನು ತೀವ್ರವಾಗಿ ಖಂಡಿಸುತ್ತದೆ. ನಗರದ ಐಕ್ಯತೆ ದೃಷ್ಟಿಯಿಂದ ವಿಭಜನೆ ಮಾಡಬಾರದೆಂದು ಒತ್ತಾಯಿಸಿ ಈಗಾಗಲೇ ತಾವು ಹೋರಾಟ ನಡೆಸಿದ್ದೇವೆ. ಇದರ ಮುಂದುವರೆದ ಭಾಗವಾಗಿ ನಗರದ ಅಭಿವೃದ್ಧಿ ಮತ್ತು ಐಕ್ಯತೆಯನ್ನು ಪ್ರಧಾನವಾಗಿಟ್ಟುಕೊಂಡು ಚುನಾವಣೆ ಎದುರಿಸಲು ಸಿದ್ದತೆ ನಡೆಸಿದ್ದೇವೆ. ಪಾಲಿಕೆ ಎಲ್ಲ ವಾರ್ಡ್‍ಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆಂದು ಹೇಳಿದರು.
ಸಮಾವೇಶಕ್ಕೂ ಮುನ್ನ ಅಂಬೇಡ್ಕರ್ ಜಯಂತ್ಯುತ್ಸವದ ಭೀಮರಥದ ಮೆರವಣಿಗೆಯು ಸೋನಾಲ್ ಗಾರ್ಮೆಂಟ್ಸ್ ಮುಂಭಾಗ ಆವರಣದಿಂದ ಲಕ್ಷ್ಮೀದೇವಿ ನಗರದವರೆಗೆ ಸಾಗಿ ಬಂತು. ನಂತರ ನಡೆದ ಸಮಾವೇಶದಲ್ಲಿ ಆರ್‍ಪಿಐ ಪಕ್ಷದ ಮುಖಂಡರಾದ ವೈ.ಎಸ್. ದೇವೂರ್,ಆರ್.ಎಂ.ಎನ್. ರಮೇಶ್, ವಕೀಲರ ಘಟಕದ ರಾಜ್ಯಾಧ್ಯಕ್ಷ ಅನಂತ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


