ಕೈಗಾರಿಕೆಗಳಿಗೆ ನೀಡಿದ ಜಾಗ ತೆರವು ಆತಂಕ ವ್ಯಕ್ತಪಡಿಸಿದ ಎಫ್ ಕೆಸಿಸಿಐ
:ಒಮ್ಮೆ ಭೂಮಿ ಬಿಟ್ಟುಕೊಟ್ಟಿದ್ದ ಅರಣ್ಯ ಇಲಾಖೆ ಮತ್ತೆ ಕ್ಯಾತೆ ತೆಗೆದಿರುವುದು ಸರಿಯಲ್ಲ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಕಾಡುಗೋಡಿ ಬಳಿ ಕೈಗಾರಿಕೆಗೆಂದು ನೀಡಿರುವ ಜಾಗದ ತೆರವನ್ನು ಯಾವುದೇ ಕಾರಣಕ್ಕೂ ಮಾಡಬಾರದು...

ಬೆಂಗಳೂರು: ಒಮ್ಮೆ ಭೂಮಿ ಬಿಟ್ಟುಕೊಟ್ಟಿದ್ದ ಅರಣ್ಯ ಇಲಾಖೆ ಮತ್ತೆ ಕ್ಯಾತೆ ತೆಗೆದಿರುವುದು ಸರಿಯಲ್ಲ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಕಾಡುಗೋಡಿ ಬಳಿ ಕೈಗಾರಿಕೆಗೆಂದು ನೀಡಿರುವ ಜಾಗದ ತೆರವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆಸಿಸಿಐ) ಅಧ್ಯಕ್ಷ ಸಂಪತ್‍ರಾಮನ್ ಆಗ್ರಹಿಸಿದ್ದಾರೆ.
ಬುಧವಾರ ತಮ್ಮ ಕಚೇರಿಯಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `1950ರಲ್ಲಿ ಇಲ್ಲಿನ 711 ಎಕರೆ ಭೂಮಿಯನ್ನು ಖರಾಬು ಎಂದು ಕೆಐಎಡಿಬಿಗೆ ಹಸ್ತಾಂತರಿಸಿತ್ತು. ಇದರಲ್ಲಿ 430 ಎಕರೆ ಜಾಗವನ್ನು ಕೆಐಎಡಿಬಿ ಕೈಗಾರಿಕೆಗಳಿಗೆ ನೀಡಿತ್ತು. 1972ರಿಂದಾಚೆಗೆ ಇಲ್ಲಿ ಸುಮಾರು 35 ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಮಾಧ್ಯಮವೊಂದರಲ್ಲಿ ಜಿಲ್ಲಾಧಿಕಾರಿ ನೀಡಿರುವ ಹೇಳಿಕೆ ಉದ್ದಿಮೆದಾರರನ್ನು ಆತಂಕಕ್ಕೆ ತಳ್ಳಿದೆ' ಎಂದು ತಿಳಿಸಿದರು.
ಈ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದರಿಂದ ಒತ್ತುವರಿ ಪ್ರದೇಶವನ್ನು ತೆರವು ಮಾಡುವುದಾಗಿ ಜಿಲ್ಲಾಧಿಕಾರಿ ವಿ.ಶಂಕರ್ ಆದೇಶಿಸಿದ್ದಾಗಿ ಹೇಳಲಾಗುತ್ತಿದೆ. 2006ರಲ್ಲಿ ಅರಣ್ಯ ಇಲಾಖೆ ಈ ಜಾಗದ ಬಗ್ಗೆ ಕ್ಯಾತೆ ತೆಗೆದಿದ್ದು, ಪ್ರಕರಣ ಈಗಾಗಲೇ ಕೋರ್ಟ್ ನಲ್ಲಿದೆ. ಹೀಗಿರುವಾಗ ಜಾಗದ ತೆರವಿನ ಬಗ್ಗೆ ಮಾತು ಕೇಳಿಬರುತ್ತಿರುವುದು ಸರಿಯಲ್ಲ. ಅಲ್ಲದೆ, ಹೈಕೋರ್ಟ್ ಸಹ ಈ ಭೂಮಿ ಅರಣ್ಯ ಇಲಾಖೆಯ ಸ್ವತ್ತಲ್ಲ ಎಂದು ಆದೇಶಿಸಿತ್ತು. ಈ ತೀರ್ಪಿನ ಬಗ್ಗೆ ಅರಣ್ಯ ಇಲಾಖೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಪ್ರಕರಣ ಕೋರ್ಟ್ ನಲ್ಲಿದ್ದರೂ ಶನಿವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತಮ್ಮ ಸಂಸ್ಥೆಯ ಬೋರ್ಡ್ ಅನ್ನು ತೆಗೆದುಹಾಕಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


