ನೈಸ್ ರಸ್ತೆಯಲ್ಲಿ ಹೋಗಬೇಕಾ? ಹಾಗಾದ್ರೆ ಹೆಚ್ಚು ಹಣ ಕೊಡಿ
ನೈಸ್ ರಸ್ತೆಯಲ್ಲಿ ಹೋಗಬೇಕಾ? ಹೆಚ್ಚು ಹಣ ಕೊಡಿ. - ಇದು ಬಿಎಂಟಿಸಿ ಹಳೆಪಾಸುದಾರರಿಗೆ ಹೊಸ ಕಿರಿಕಿರಿ. ನೈಸ್ ರಸ್ತೆ ಮೂಲಕ ಸಂಚರಿಸುವ...

ಬೆಂಗಳೂರು: ನೈಸ್ ರಸ್ತೆಯಲ್ಲಿ ಹೋಗಬೇಕಾ? ಹೆಚ್ಚು ಹಣ ಕೊಡಿ. - ಇದು ಬಿಎಂಟಿಸಿ ಹಳೆಪಾಸುದಾರರಿಗೆ ಹೊಸ ಕಿರಿಕಿರಿ. ನೈಸ್ ರಸ್ತೆ ಮೂಲಕ ಸಂಚರಿಸುವ ಬಿಎಂಟಿಸಿ ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರಸ್ತುತ ಯಾವುದೇ ರೀತಿಯ ಪಾಸು ಹೊಂದಿದ್ದಲ್ಲಿ ಟೋಲ್ ದರ ಪಾವತಿಸಿ ಟಿಕೆಟ್ ಪಡೆದು ಪ್ರಯಾಣಿಸಬೇಕಿದೆ. ಹೊಸ ಪಾಸ್ ಪಡೆಯುವವರಿಗೆ ಟೋಲ್ ದರ ಒಳಗೊಂಡಂತೆ ಪಾಸ್ ಸಿದ್ಧಪಡಿಸಲಾಗಿದೆ. ಹೊಸ ಪಾಸ್ನಲ್ಲಿ ಈಗಿರುವ ದರಕ್ಕೆ ರು.25 ಸೇರಿಸಿ ಪಾಸ್ ಸಿದ್ಧಪಡಿಸಲಾಗಿದೆ. ಪ್ರಯಾಓಣಿಕರು ಹೊಸ ಪಾಸ್‍ಗಳನ್ನು ಕೊಂಡಲ್ಲಿ ಎರಡೂ ಮಾರ್ಗದಲ್ಲಿ ಹೆಚ್ಚುವರಿ ಹಣ ಪಾವತಿಸುವಂತಿಲ್ಲ. ಹಳೆಯ ಪಾಸ್ ಪಡೆದಲ್ಲಿ ರು.25 ಪಾವತಿಸ ಬೇಕಾಗುತ್ತದೆ. ನೀವು ಮತ್ತೆ ಅದೇ ಮಾರ್ಗದಲ್ಲಿ ವಾಪಾಸ್ ಬಂದಲ್ಲಿ ಮತ್ತೆ ರು.ಯ 25 ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಆದ್ದರಿಂದ ಪ್ರಯಾಣಿಕರು ಒಮ್ಮೆ ಅಥವಾ ಹೆಚ್ಚು ಬಾರಿ ಸಂಚಿರಿಸುವುದಾದರೆ ನಿರ್ವಾಹಕರನ್ನು ಕೇಳಿ ಪಾಸ್ ಪಡೆಯತಕ್ಕದ್ದು ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.
ಹೊಸ ಪಾಸ್‍ಗಳ ದರ (ಟೋಲ್ ದರ ಒಳಗೊಂಡು ಪಾಸಿನ ಮಾದರಿ ದರ ಸಾಮಾನ್ಯ ಸೇವೆಯ ದೈನಂದಿನ ಪಾಸು (ಸಂಸ್ಥೆಯ ಗುರುತಿನ ಚೀಟಿ ಹೊಂದಿರುವವರಿಗೆ) ರು. 95 ದೈನಂದಿನ ಪಾಸು ರು. 100 ವಜ್ರ ಸೇವೆಯ ದೈನಂದಿನ ಪಾಸು ರು. 170 ಸಾಮಾನ್ಯ ಸೇವೆಯ ಮಾಸಿಕ ಪಾಸು ರು. 1900 ವಜ್ರ ಮಾಸಿಕ ಪಾಸು ರು. 3000 ಹಳೆಯ ಪಾಸ್‍ನವರು ಹಣ ನೀಡಿ ಸಂಸ್ಥೆಯು ಈಗಾಗಲೇ ಪರಿಚಯಿಸಿರುವ ದಿನದ ಪಾಸುಗಳಾದ ರು. 65 ಹಾಗೂ ರು. 70 ಗಳನ್ನು ಹೊಂದಿದ ಪ್ರಯಾಣಿಕರು ಮತ್ತು ಮಾಸಿಕ ಪಾಸುಗಳಾದ ಕೆಂಪು ಹಲಗೆ ಮಾಸಿಕ ಪಾಸು ರು. 1,050, ಹಿರಿಯ ನಾಗರೀಕರ ಮಾಸಿಕ ಪಾಸು ರು. 945, ಗ್ರಾಮಾಂತರ ಸೇವೆಯ ಮಾಸಿಕ ಪಾಸು ರು. 1,300, ವಜ್ರ ಮಾಸಿಕ ಪಾಸು ರು. 2,250 ಮತ್ತು ರು. 2,300 ಹಾಗೂ ವಾಯುವಜ್ರ ಸೇವೆಯ ಮಾಸಿಕ ಪಾಸು ರು. 3,350 ಹೊಂದಿದ ಪ್ರಯಾಣಿಕರೂ ನೈಸ್ ರಸ್ತೆಯಲ್ಲಿ ಸಂಚರಿಸಬಹುದು. ಆದರೆ, ಅವರು ಹೆಚ್ಚುವರಿಯಾಗಿ ರು.25 ಪಾವತಿಸಿ ಸಂಚರಿಸಬೇಕಾಗಿದೆ. ಈ ಪದ್ಧತಿ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


