ಸಿಆರ್ ಪಿಸಿ ಸೆಕ್ಷನ್ 174 ಉಲ್ಲಂಘನೆ ವಿರುದ್ಧ ಹೋರಾಟ
ದಕ್ಷ ಅಧಿಕಾರಿ ಡಿ.ಕೆ. ರವಿ ಮೃತದೇಹದ ಮಹಜರು ಮತ್ತು ಮರಣೋತ್ತರ ಪರೀಕ್ಷೆಯಲ್ಲೂ ಪೊಲೀಸರು, ಇದನ್ನು ಸಿಆರ್ ಪಿಸಿ ಸೆಕ್ಷನ್ 174 ಉಲ್ಲಂಘಿಸಿರುವ...

ಬೆಂಗಳೂರು: ದಕ್ಷ ಅಧಿಕಾರಿ ಡಿ.ಕೆ. ರವಿ ಮೃತದೇಹದ ಮಹಜರು ಮತ್ತು ಮರಣೋತ್ತರ ಪರೀಕ್ಷೆಯಲ್ಲೂ ಪೊಲೀಸರು, ಇದನ್ನು ಸಿಆರ್ ಪಿಸಿ ಸೆಕ್ಷನ್ 174 ಉಲ್ಲಂಘಿಸಿರುವ ವಿರುದ್ಧ ಆಮ್ ಆದ್ಮಿ ಪಕ್ಷ ಹೋರಾಟ ನಡೆಸಲಿದೆ.
ಅಸಹಜ ಸಾವಿನ ಪ್ರಕರಣಗಳ ಮಹಜರು ಮತ್ತು ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಕಟ್ಟು ನಿಟ್ಟಾಗಿ ಅನುಸರಿಸಬೇಕಾದ ಕ್ರಮಗಳಿಗಾಗಿ ಜಾರಿಗೆ ತಂದ ಅನುಷ್ಠಾನದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಆಪ್ ಕಾರ್ಯಕರ್ತೆ ಹಾಗೂ ನಿವೃತ್ತ ಅಧಿಕಾರಿ ರೇಣುಕಾ ವಿಶ್ವನಾಥ್ ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
2004ರಲ್ಲಿ ಜಾರಿಗೆ ಬಂದ ಸಿಆರ್‍ಪಿಸಿ ಸೆಕ್ಷನ್ 174ರಡಿ, ಅಸಹಜ ಸಾವಿನ ಮಹಜರು ಮತ್ತು ಪ್ರಾಥಮಿಕ ಪರೀಕ್ಷೆ ಮತ್ತು ತನಿಖೆ ನಡೆಯುವ ತನಕ ಯಾವುದೇ ಪೂರ್ವ ನಿರ್ಧಾರಕ್ಕೆ ಬರಬಾರದು.
ಆದರೆ, ರವಿ ಪ್ರಕರಣದಲ್ಲಿ ಮಹಜರು ಮತ್ತು ಮರಣೋತ್ತರ ಪರೀಕ್ಷೆ ನಡೆಸುವ ಮುನ್ನವೇ ಪೊಲೀಸರು, ಅದೊಂದು ಆತ್ಮಹತ್ಯೆ ಎಂದು ಘೋಷಿಸಿದ್ದು, ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದರು. 2004ರಲ್ಲಿ ಈ ಸೆಕ್ಷನ್ ಸರ್ಕಾರದ ಮಟ್ಟದಲ್ಲಿ ಜಾರಿಗೆ ಬಂದಿತ್ತು.
ಆಗ ತಾವು ಸೇರಿದಂತೆ ನಿವೃತ್ತ ಅಧಿಕಾರಿ ಶೋಭಾ ನಂಬಿಷನ್ ಹಾಗೂ ವಿಮೋಚನಾ ಸಂಘಟನೆಯ ಮುಖಂಡರು ಇದಕ್ಕೆ ಸಾಕಷ್ಟು ಶ್ರಮ ಹಾಕಿದ್ದರು. ಈ ಸೆಕ್ಷನ್ ಈಗಲೂ ಕಾಗದದಲ್ಲಿಯೇ ಉಳಿದಿದೆ ಎಂದು ವಿಷಾದಿಸಿದರು.
ರಾಜ್ಯದಲ್ಲಿ ಸಿಆರ್‍ಪಿಸಿ ಸೆಕ್ಷನ್ 174 ಸಮರ್ಪಕವಾಗಿ ಜಾರಿಗೆ ಬರುವಂತೆಯೂ ಜನತೆ ಒತ್ತಾಯಿಸಬೇಕಿದೆ. ಇದನ್ನು ಪೊಲೀಸರು ಕಟ್ಟು ನಿಟ್ಟಾಗಿ ಜಾರಿಗೆ ತಂದರೆ, ನಿಗೂಢ ಸಾವಿನ ಹಿಂದಿನ ಸಂಗತಿಗಳು, ಮಹಜರು ಮತ್ತು ಮರಣೋತ್ತರ ಪರೀಕ್ಷೆಗಳಲ್ಲಿಯೇ ಬಯಲಾಗಲಿವೆ.
ಅಲ್ಲದೇ, ನೊಂದವರಿಗೆ ನ್ಯಾಯ ಸಿಗುವ ಪ್ರಕ್ರಿಯೆ ಕೂಡ ತ್ವರಿತವಾಗಲಿದೆ ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಬಾಬು ಮ್ಯಾಥ್ಯೂ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


