ಜಿಲ್ಲಾ ಸುದ್ದಿ

ಬಿಎಂಟಿಸಿ ರೂಟ್‍ಗೆ ಬಂದ ವಾಹನಗಳಿಗೆ ದಂಡ

ಕಾನೂನು ಬಾಹಿರವಾಗಿ ರಹದಾರಿ ಉಲ್ಲಂಘನೆ ಮಾಡಿ ನಗರದಲ್ಲಿ ಸಂಚರಿಸುತ್ತಿದ್ದ 101 ವಾಹನಗಳ ವಿರುದ್ಧ ಪ್ರಾದೇಶಿಕ ಸಾರಿಗೆ...

ಬಿಎಂಟಿಸಿ ರೂಟ್‍ಗೆ ಬಂದ ವಾಹನಗಳಿಗೆ ದಂಡ
ಬಿಎಂಟಿಸಿ
Published On :

ಬೆಂಗಳೂರು: ಕಾನೂನು ಬಾಹಿರವಾಗಿ ರಹದಾರಿ ಉಲ್ಲಂಘನೆ ಮಾಡಿ ನಗರದಲ್ಲಿ ಸಂಚರಿಸುತ್ತಿದ್ದ 101 ವಾಹನಗಳ ವಿರುದ್ಧ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು
ದಂಡ ವಿಧಿಸಿ, ಕ್ರಮಕೈಗೊಂಡಿದ್ದಾರೆ. ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಮಡಿವಾಳ, ಸಿಲ್ಕ್ ಬೋರ್ಡ್, ಎಚ್.ಎಸ್.ಆರ್. ಲೇಔಟ್, ಎಲೆಕ್ಟ್ರಾನಿಕ್ ಸಿಟಿ ಹಾಗೂ ಸುತ್ತಮುತ್ತ ಸಂಚರಿಸುತ್ತಿದ್ದ ವಾಹನಗಳನ್ನು ತಪಾಸಣೆ ಮಾಡಿದ ವೇಳೆ ರಹದಾರಿ ಉಲ್ಲಂಘನೆ ಮಾಡುತ್ತಿರುವ ಅಂತಹ ವಾಹನಗಳನ್ನು ಜಪ್ತಿ  ಮಾಡಿದ್ದಾರೆ. ಈ
ವಾಹನಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಹಾಗೂ ಬಿಎಂಟಿಸಿ ವಾಹನಗಳು ಸಂಚರಿಸುವ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಇದರಿಂದ ಸಾರಿಗೆ ಇಲಾಖೆಗೆ ಪ್ರತಿನಿತ್ಯ ಸಾವಿರಾರು ರುಪಾಯಿ ನಷ್ಟ ಸಂಭವಿಸುತ್ತಿತ್ತು.ಬಸ್, ಟಾಟಾ ಸುಮೋ, ಮ್ಯಾ ಕ್ಸಿ ಕ್ಯಾಬ್, ಮಿನಿಬಸ್
ಸೇರಿದಂತೆ ಜಪ್ತಿ ಮಾ ಡಿದ ಎಲ್ಲಾ ವಾಹನಗಳನ್ನು ಬಿಎಂಟಿಸಿ ಡಿಪೋಗೆ ಕಳುಹಿಸಿಕೊಡಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಪಾಸಣೆ
ನಡೆಸಿದ ಅಧಿಕಾರಿಯೊ ಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.