ನೈಸ್ ರಸ್ತೆಯಲ್ಲಿ ಬಿಎಂಟಿಸಿ: ಮಹಿಳಾ ಪ್ರಯಾಣಿಕರಿಗೆ ಎರಡು ವಿಶೇಷ ಬಸ್
ಐಟಿ ಉದ್ಯೋಗಿಗಳನ್ನು ಬಸ್ ಪ್ರಯಾಣದ ಕಡೆಗೆ ಆಕರ್ಷಿಸುವ ಉದ್ದೇಶದಿಂದ ಬಿಎಂಟಿಸಿ ಇದೇ ಮೊದಲ ಬಾರಿಗೆ ನೈಸ್ ರಸ್ತೆಯಲ್ಲಿ...

ಬೆಂಗಳೂರು: ಐಟಿ ಉದ್ಯೋಗಿಗಳನ್ನು ಬಸ್ ಪ್ರಯಾಣದ ಕಡೆಗೆ ಆಕರ್ಷಿಸುವ ಉದ್ದೇಶದಿಂದ ಬಿಎಂಟಿಸಿ ಇದೇ ಮೊದಲ ಬಾರಿಗೆ ನೈಸ್ ರಸ್ತೆಯಲ್ಲಿ ಸಂಚರಿಸುತ್ತಿದೆ.
ಹಾಗಾಗಿ ದೂರದ ರಸ್ತೆಯಲ್ಲಿ ಕ್ರಮಿಸುವುದು ಇನ್ನು ಸುಲಭ. ಬುಧವಾರ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಬಸ್ ಸೇವೆಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಎಲೆಕ್ಟ್ರಾನಿಕ್ ಸಿಟಿಯ 9 ಪಾಯಿಂಟ್‌ಗಳಿಂದ ಈ ಬಸ್‌ಗಳು ಸಂಚರಿಸಲಿದ್ದು, ಜಯದೇವ, ಬನಶಂಕರಿ, ಶ್ರೀನಗರ, ವಿಜಯನಗರ ಟಿಟಿಎಂಸಿ ಹಾಗೂ ಬಿಇಎಂಎಲ್ 5ನೇ ಹಂತ, ಸುಮನಹಳ್ಳಿ, ಯಶವಂತಪುರ ಟಿಟಿಎಂಸಿ, ಬಸವೇಶ್ವರ ನಗರ ಬಸ್ ನಿಲ್ದಾಣಗಳಿಂದ ಎಲೆಕ್ಟ್ರಾನಿಕ್ ಸಿಟಿಗೆ 24 ಬಸ್‌ಗಳನ್ನು ಬಿಡಲಾಗಿದೆ. ಈ ಬಸ್‌ಗಳು ದಿನಕ್ಕೆ 42 ಟ್ರಿಪ್ ಸಂಚರಿಸಲಿವೆ.
ಈ ಎಲ್ಲಾ ಮಾರ್ಗದಿಂದ ಹೊರಡುವ ಬಸ್ ಗಳು ನೈಸ್ ರಸ್ತೆ ಮುಖಾಂತರ ಶೀಘ್ರವಾಗಿ ತಲುಪಲಿವೆ. ಹಾಗಾಗಿ ಈ ಭಾಗದಲ್ಲಿ ಸಂಚರಿಸುವವರಿಗೆ ಇನ್ನು ಮುಂದೆ ಟೋಲ್ ದರ ಸಹ ಸೇರಲಿದ್ದು, ಟೋಲ್ ದರ ಸೇರಿಸಿ ಟಿಕೆಟ್ ಅಥವಾ ಪಾಸ್ ನೀಡಲಾಗುತ್ತದೆ. ಸಾಮಾನ್ಯ ದರದ ಬಸ್ ಗಳಲ್ಲಿ ಮಾಸಿಕ ಪಾಸ್ ರು. 1,900 ಇರಲಿದ್ದು, ಹವಾನಿಯಂತ್ರಿತ ಬಸ್ ಗಳ ಪಾಸ್ ರು. 3 ಸಾವಿರ ಇರಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಮಹಿಳೆಯರಿಗೆ ವಿಶೇಷ ಬಸ್
ನಗರದ ವಿವಿಧ ಭಾಗಗಳಿಂದ ವಿಧಾನಸೌಧಕ್ಕೆ ಮಹಿಳಾ ಬಸ್ ಸೌಲಭ್ಯ ಕಲ್ಪಿಸಿರುವಂತೆ ಎಲೆಕ್ಟ್ರಾನಿಕ್ ಸಿಟಿಯಿಂದಲೂ ಮಹಿಳೆಯರಿಗಾಗಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಎರಡು ಬಸ್ ಗಳು ಮಹಿಳಾ ವಿಶೇಷ ಬಸ್ ಗಳಾಗಿ ಸಂಚರಿಸಲಿದ್ದು, ಸಿಲ್ಕ್ ಬೋರ್ಡ್ ನಿಂದ ಹೊಸೂರು ರಸ್ತೆಯ ಮೇಲೇತ್ಸುವೆ ಮೂಲಕ ವಿಪ್ರೋಗೆ ಸಾಗಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


