ಜಿಲ್ಲಾ ಸುದ್ದಿ

ಬಿಎಂಟಿಸಿಗೆ ಪಾದಚಾರಿ ಬಲಿ

ಬಿಎಂಟಿಸಿ ಬಸ್‍ಗೆ ಮತ್ತೊಬ್ಬ ಪಾದಚಾರಿ ಬಲಿಯಾಗಿದ್ದಾರೆ. ಸೋಮವಾರ ಮೈಸೂರು ರಸ್ತೆಯ ಬಿನ್ನಿಮಿಲ್ ವೃತ್ತದ ಬಳಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಕಂದಸ್ವಾಮಿ ನಾಯ್ಡು (75) ಎಂಬುವವರು ಮೃತಪಟ್ಟಿದ್ದಾರೆ...

ಬಿಎಂಟಿಸಿಗೆ ಪಾದಚಾರಿ ಬಲಿ
ಬಿಎಂಟಿಸಿಗೆ ಪಾದಚಾರಿ ಬಲಿ (ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಬಿಎಂಟಿಸಿ ಬಸ್‍ಗೆ ಮತ್ತೊಬ್ಬ ಪಾದಚಾರಿ ಬಲಿಯಾಗಿದ್ದಾರೆ. ಸೋಮವಾರ ಮೈಸೂರು ರಸ್ತೆಯ ಬಿನ್ನಿಮಿಲ್ ವೃತ್ತದ ಬಳಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಕಂದಸ್ವಾಮಿ ನಾಯ್ಡು (75) ಎಂಬುವವರು ಮೃತಪಟ್ಟಿದ್ದಾರೆ.

ಕಾಟನ್‍ಪೇಟೆ ಬಕ್ಷಿ ಗಾರ್ಡನ್ ನಿವಾಸಿಯಾದ ಕಂದಸ್ವಾಮಿ ಬೆಳಿಗ್ಗೆ 7.15ರ ವೇಳೆಗೆ ಬಿನ್ನಿಮಿಲ್ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ಕೆ.ಆರ್. ಮಾರುಕಟ್ಟೆಯಿಂದ ವಡ್ಡರಹಳ್ಳಿ ಕಡೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಂದಸ್ವಾಮಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಶಿವಕುಮಾರ್‍ನನ್ನು ಬಂಧಿಸಿರುವುದಾಗಿ ಚಿಕ್ಕಪೇಟೆ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಯಲಹಂಕದ ವಿದ್ಯಾಶಿಲ್ಪ ಶಾಲೆ ಸಮೀಪ ಸಂಭವಿಸಿದ ಅಪಘಾತದಲ್ಲಿ ಹೆಬ್ಬಾಳ ನಿವಾಸಿ ಎ.ಎಂ. ಗೋಪಾಲ್ (59) ಮೃತ ಪಟ್ಟಿದ್ದಾರೆ. ಹೆಬ್ಬಾಳದಿಂದ ಯಲಹಂಕಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು.

ಮನೆ ಬೀಗ ಮುರಿದು ಚಿನ್ನಾಭರಣ ಕಳವು
ಹಾಡಹಗಲೇ ಮನೆಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು ನಗದು ಹಾಗೂ 500 ಗ್ರಾಂ. ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ವಿಜಯನಗರ ವಿನಾಯಕ ಲೇಔಟ್ ನಿವಾಸಿ ರಾಜೇಂದ್ರ ಪ್ರಸಾದ್ ಅವರ ಮನೆಯಲ್ಲಿ ಕಳವಾಗಿದೆ. ರಾಜೇಂದ್ರ ಅವರು ಕುಟುಂಬ ಭಾನುವಾರ ಸಮೇತರಾಗಿ ಸಂಬಂ„ಕರ ಮನೆಗೆ ಹೋಗಿದ್ದರು. ಈ ವೇಳೆ ಕಳವಾಗಿದೆ. ಸೋಮವಾರ ಬೆಳಗ್ಗೆ ಮನೆಗೆ ಹಿಂತಿರುಗಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಜೇಂದ್ರ ಅವರು ಸಗಟು ಔಷಧ ವ್ಯಾಪಾರ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.