ಯೋಗದಿನ ಕಡ್ಡಾಯವಲ್ಲ: ಕಿಮ್ಮನೆ ರತ್ನಾಕರ್
ಜೂ.21ರ ಯೋಗದಿನದ ಹಿನ್ನೆಲೆ ಯಲ್ಲಿ ರಾಜ್ಯದ ಶಾಲೆಗಳಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳಿಲ್ಲ, ಯಾರಾದರೂ ಆಚರಿಸಿದರೆ ಅಭ್ಯಂತರವೇನಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ...

ಬೆಂಗಳೂರು: ಜೂ.21ರ ಯೋಗದಿನದ ಹಿನ್ನೆಲೆ ಯಲ್ಲಿ ರಾಜ್ಯದ ಶಾಲೆಗಳಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳಿಲ್ಲ, ಯಾರಾದರೂ ಆಚರಿಸಿದರೆ ಅಭ್ಯಂತರವೇನಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಯೋಗ ದಿನದ ಅಂಗವಾಗಿ ಯಾವುದೇ ಕಡ್ಡಾಯ ಕಾರ್ಯಕ್ರಮ ನಡೆಸುವ ಬಗ್ಗೆ ಸುತ್ತೋಲೆಯನ್ನು ಇಲಾಖೆ ನೀಡುತ್ತಿಲ್ಲ. ಯಾವುದಾದರೂ ಶಾಲೆಗಳಲ್ಲಿ ಆಚರಿಸಿದರೆ ಆಚರಿಸಿಕೊಳ್ಳಲಿ ಎಂದು ಹೇಳಿದರು.
ನೀವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯೋಗ ಮಾಡಿಲ್ಲ, ಇಷ್ಟು ವರ್ಷ ಬದುಕಿದ್ದೇನೆ. ಶಾಲೆಗಳಲ್ಲಿ ಇಷ್ಟು ವರ್ಷ ಕಾರ್ಯಕ್ರಮ ಮಾಡದೇ ಇದ್ದುದ್ದರಿಂದ ಏನಾದರೂ ತೊಂದರೆ ಆಗಿದೆಯೇ ಎಂದು ಅವರು ಮರುಪ್ರಶ್ನಿಸಿದರು.
ಪೊಲೀಸರಿಗೆ ಯೋಗಾಯೋಗ
ದೈಹಿಕ ಹಾಗೂ ಮಾನಸಿಕ ಕ್ಷಮತೆ ಕಾಪಾಡಿಕೊಳ್ಳಲು ಯೋಗಾಸನ ಅನುಕೂಲಕರ. ಕರ್ತವ್ಯ ನಿರ್ವಹಿಸುವ ಪೊಲೀಸರು ಯೋಗಾಸನ ಮಾಡಿದರೆ ಅದರಿಂದ ಸಾಕಷ್ಟು ಲಾಭವಿದೆ. ಸ್ವಯಂ ಆಸಕ್ತಿ ವಹಿಸಿ ಪೊಲೀಸರು ಯೋಗಾಸನ ಮಾಡಬಹುದು. ಆದರೆ, ಯಾರಿಗೂ ಬಲವಂತವಿಲ್ಲ ಎಂದಿದ್ದಾರೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್.
ಈ ಹಿಂದೆ ನಾನು ಕೂಡಾ ಯೋಗಾಸನ ಮಾಡುತ್ತಿದ್ದೆ. ಆದರೆ, ಇತ್ತೀಚೆಗೆ ವೈಯಕ್ತಿಕ ಕಾರಣಗಳಿಂದ ನಿಲ್ಲಿಸಿದ್ದೆ. ಆದರೆ, ಮತ್ತೆ ಯೋಗ ಆರಂಭಿಸುತ್ತೇನೆ. ಪೊಲೀಸರಿಗೆ ಇದು ಉಪಯುಕ್ತ. ಏಕೆಂದರೆ, ಭದ್ರತೆ, ಅಪರಾಧ ನಿಯಂತ್ರಣ, ಗಸ್ತು ಮುಂತಾದ ಕೆಲಸಗಳಿಗಾಗಿ ಅವರು ಸಾಕಷ್ಟು ಶ್ರಮಪಡುತ್ತಾರೆ. ಕಡಿಮೆ ವಿಶ್ರಾಂತಿ ಹೆಚ್ಚು ಕೆಲಸ ಮಾಡುವ ಪೊಲೀಸರ ಕ್ಷಮತೆ ಹೆಚ್ಚಲು ಯೋಗಾಸನ ಅನುಕೂಲ. ಹೀಗಾಗಿ, ಆಸಕ್ತಿ ಇರುವವರು ಯೋಗಾಸನ ಮಾಡಬಹುದು ಎಂದು ಅವರು ತಿಳಿಸಿದರು.
ಮೈಸೂರು, ಚನ್ನಪಟ್ಟಣ, ಕಲಬುರಗಿ ಸೇರಿದಂತೆ ಬೇರೆ ಬೇರೆ ಕಡೆ ಇರುವ ಪೊಲೀಸ್ ಅಕಾಡೆಮಿ, ತರಬೇತಿ ಶಾಲೆ, ಕಾಲೇಜುಗಳಲ್ಲಿ ಪೊಲೀಸ್ ಇಲಾಖೆಗೆ ನೇಮಕವಾಗಿರುವ ಸಿಬ್ಬಂದಿಗೆ ತರಬೇತಿ ಹಂತದಲ್ಲೇ ಯೋಗ ಕ್ಲಾಸ್‍ಗಳು ಇರುತ್ತವೆ. ಅದನ್ನು ಮುಂದುವರೆಸುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದಿದ್ದಾರೆ.
ಪಂಜಾಬ್‍ನಲ್ಲಿ ಕಡ್ಡಾಯವಲ್ಲ
ಬಿಜೆಪಿಯ ಮಿತ್ರಪಕ್ಷವಾದ ಅಕಾಲಿದಳ ಆಡಳಿತವಿರುವ ಪಂಜಾಬ್‍ನಲ್ಲಿ ಮಾತ್ರ ಜೂ.26ರಂದು ಯೋಗಕಡ್ಡಾಯವಲ್ಲ. ಈ ವಾರ ಪ್ರಧಾನಿ ಮೋದಿ ಅವರು ಆನಂದಪುರ ಸಾಹಿಬ್ ನಗರಕ್ಕೆ ಭೇಟಿ ಕೊಡಬೇಕಿತ್ತು. ಆದರೆ, ಆ ಭೇಟಿಯನ್ನು ಕೊನೇ ಕ್ಷಣದಲ್ಲಿ ರದ್ದು ಮಾಡಿದ ಹಿನ್ನೆಲೆಯಲ್ಲಿ ಬಾದಲ್ ಈ ಕ್ರಮ ಕೈಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಆಪ್ತರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


