ಜಿಲ್ಲಾ ಸುದ್ದಿ

ಅಕ್ರಮ ನಿವೇಶನ ಖರೀದಿ: ನ್ಯಾಯಮೂರ್ತಿ ಮಂಜುನಾಥ ವಿರುದ್ಧ ಹಿರೇಮಠ ಆರೋಪ

ರಾಜ್ಯ ಸರ್ಕಾರ ಉಪಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಿರುವ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ ತಮ್ಮ ಪ್ರಭಾವ ಬಳಸಿ ಪತ್ನಿ, ಮಗಳ ಹೆಸರಲ್ಲಿ ಅಕ್ರಮವಾಗಿ ನಿವೇಶನ ಖರೀದಿಸಿದ್ದಾರೆ ಎಂದು ಆರೋಪಿಸಿರುವ ಸಮಾಜ ಪರಿವರ್ತನಾ...

ಅಕ್ರಮ ನಿವೇಶನ ಖರೀದಿ: ನ್ಯಾಯಮೂರ್ತಿ ಮಂಜುನಾಥ ವಿರುದ್ಧ ಹಿರೇಮಠ ಆರೋಪ
ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ
Published On :

ಹುಬ್ಬಳ್ಳಿ: ರಾಜ್ಯ ಸರ್ಕಾರ ಉಪಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಿರುವ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ ತಮ್ಮ ಪ್ರಭಾವ ಬಳಸಿ ಪತ್ನಿ, ಮಗಳ ಹೆಸರಲ್ಲಿ ಅಕ್ರಮವಾಗಿ ನಿವೇಶನ ಖರೀದಿಸಿದ್ದಾರೆ ಎಂದು ಆರೋಪಿಸಿರುವ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ, ಅದಕ್ಕೆ ಪೂರಕವಾಗಿ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಿವಾಹಿತೆಯಾಗಿರುವ ಮಂಜುನಾಥ ಅವರ ಪುತ್ರಿ ಕೆ.ಎಂ. ಚೈತ್ರಾ ನಾಗವಾರ ಹಳ್ಳಿಯಲ್ಲಿ ವೈಯಾ್ಯಲಿಕಾವಲ್ ಹೌಸ್ ಬಿಲ್ಡಿಂಗ್ ಸೊಸೈಟಿಯಿಂದ ನಿವೇಶನ ಖರೀದಿಸಿದ್ದಾರೆ. ನಿವೇಶನ ಸಂಖ್ಯೆ 402 ಬರೋಬ್ಬರಿ 5,460 ಚ.ಅಡಿ ವಿಸ್ತೀರ್ಣ ಹೊಂದಿದ್ದು, ಕೇವಲ ರು.6.82 ಲಕ್ಷಕ್ಕೆ ಖರೀದಿಸಲಾಗಿದೆ. ಇದಕ್ಕೆ ನ್ಯಾ.
ಮಂಜುನಾಥ್ ಪ್ರಭಾವವೇ ಕಾರಣ. ಸೊಸೈಟಿಯ ಸದಸ್ಯರಿಗೆ ಮಾತ್ರ ನಿವೇಶನ ನೀಡಬೇಕೆನ್ನುವ ನಿಯಮವಿದ್ದರೂ, ಸದಸ್ಯರಲ್ಲದ ಚೈತ್ರಾ ಅವರಿಗೆ ನಿವೇಶನ ನೀಡಿದ್ದು ಹೇಗೆ? ರು.3 ಲಕ್ಷ ಕೋಟಿಗಿಂತ ದೊಡ್ಡದಾಗಿರುವ ವೈಯ್ಯಾಲಿ ಕಾವಲ್ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಕೈವಾಡವಿದ್ದು, ಚೈತ್ರಾಗೆ ಅವರೇ ನಿವೇಶನ ಕೊಡಿಸಿರಬಹುದು. ಮಗಳಿಗೆ ಅಕ್ರಮವಾಗಿ ನಿವೇಶನ ಕೊಡಿಸಿದ್ದಲ್ಲದೆ ಮಂಜುನಾಥ್ ಸ್ವತಃ ಹಾಗೂ ಪತ್ನಿ ಪುಷ್ಪಲತಾ ಹೆಸರಲ್ಲಿ ಬನಶಂಕರಿಯಲ್ಲಿ ನಿವೇಶನ ಖರೀದಿಸಿದ್ದಾರೆ ಎಂದು ಆರೋಪಿಸಿದರು.

ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ಮತ್ತು ಅವರ ಮಗ ಅಶ್ವಿನ್ ರಾವ್ ಎಸಗಿರುವ ಭ್ರಷ್ಟಚಾರದಿಂದ ಲೋಕಾಯುಕ್ತದ ಘನತೆ ಕುಂದಿದೆ. ಈ ಬೆನ್ನಲ್ಲೆ ನ್ಯಾ. ಮಜ್ಜಗಿ ಅವರ ನಿವೃತ್ತಿಯಿಂದ ತೆರವಾಗಿರುವ ಸ್ಥಾನಕ್ಕೆ ಮಂಜುನಾಥ್ ಅವರನ್ನು ನೇಮಕ ಮಾಡುವುದು ಸರಿಯಲ್ಲ. ಈ ದಾಖಲೆಗಳನ್ನು ರಾಜ್ಯಪಾಲರಿಗೂ ರವಾನಿಸಿದ್ದೇನೆ ಎಂದು ಹಿರೇಮಠ ತಿಳಿಸಿದರು. ನ್ಯಾ.ಮಂಜುನಾಥ ಕೆಲ ಭ್ರಷ್ಟಾಚಾರ ಪ್ರಕರಣದಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದಾರೆಂಬುದನ್ನು ದಾಖಲೆ ಸಾಬೀತುಪಡಿಸುತ್ತದೆ.

2014ರಲ್ಲಿ ಮಂಜುನಾಥ ಅವರನ್ನು ಸುಪ್ರೀಂ ಕೋರ್ಟ್ ಅಥವಾ ಪಂಜಾಬ್, ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನಾಗಿ ಮಾಡಲು ಮುಂದಾದಾಗ ತಾವು 182 ಪುಟಗಳ 20ಕ್ಕೂ ಹೆಚ್ಚು ದಾಖಲೆಗಳ ವರದಿಯೊಂದಿಗೆ ಸುಪ್ರೀಂ ಕೋರ್ಟ್ ನ್ಯಾ.ಆರ್.ಎಂ. ಲೋಧಾ ಅವರಿಗೆ ದೂರು ಸಲ್ಲಿಸಿದ್ದರಿಂದ ಅವರ ನೇಮಕಾತಿಗೆ ತಡೆಯೊಡ್ಡಲಾಗಿತ್ತು. ಇದು ತಿಳಿದಿದ್ದರೂ ರಾಜ್ಯ ಸರ್ಕಾರ ಮಂಜುನಾಥ ಅವರನ್ನು ಉಪ ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಲು ಮುಂದಾಗಿದ್ದು ಅಚ್ಚರಿ ಮೂಡಿಸಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.