ಜಿಲ್ಲಾ ಸುದ್ದಿ

ಅಂಚೆಕಚೇರಿಯಲ್ಲೂ ಬಿಲ್ ಪಾವತಿಸಿ

ಬೆಸ್ಕಾಂ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಸಲು ಇನ್ನೊಂದು ಮಾರ್ಗ ತೆರೆದುಕೊಂಡಿದೆ. ಬೆಸ್ಕಾಂ ಮತ್ತು ಅಂಚೆ ಕಚೇರಿ ನಡುವೆ...

ಅಂಚೆಕಚೇರಿಯಲ್ಲೂ ಬಿಲ್ ಪಾವತಿಸಿ
ಅಂಚೆ ಕಚೇರಿ
Published On :

ಬೆಂಗಳೂರು: ಬೆಸ್ಕಾಂ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಸಲು ಇನ್ನೊಂದು ಮಾರ್ಗ ತೆರೆದುಕೊಂಡಿದೆ. ಬೆಸ್ಕಾಂ ಮತ್ತು ಅಂಚೆ ಕಚೇರಿ ನಡುವೆ ನಡೆದಿರುವ ಒಡಂಬಡಿಕೆಯಂತೆ ಇನ್ನು ಮುಂದೆ ಬೆಸ್ಕಾಂ ಗ್ರಾಹಕರು ವಿದ್ಯುತ್ ಬಳಕೆಯ ಬಿಲ್ ಬಾಬ್ತು ಹಣವನ್ನು ಯಾವುದೇ ಅಂಚೆ ಕಚೇರಿಯಲ್ಲಿ
ಆನ್‍ಲೈನ್ ಮೂಲಕ ಪಾವತಿಸಬಹುದು. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ  ಪೋಸ್ಟ್ ಮಾಸ್ಟರ್  ಜನರಲ್ ವೀಣಾ ಶ್ರೀನಿವಾಸ್, ಇಷ್ಟು ದಿನ ಆನ್ ಲೈನ್ ವ್ಯವಸ್ಥೆ ಜಾರಿಯಲ್ಲಿತ್ತು. ಇನ್ನು ಮುಂದೆ ಆನ್‍ಲೈನ್‍ನಲ್ಲಿ ಹಣಪಾವತಿಸುವ ಅವಕಾಶ ಮಾಡಿಕೊಡಲಾಗುತ್ತಿದೆ. ಸದ್ಯ ಬೆಂಗಳೂರು ವ್ಯಾಪ್ತಿಯಲ್ಲಿ 288 ಅಂಚೆ ಕಚೇರಿ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಎಲ್ಲ ಅಂಚೆ ಕಚೇರಿಯಲ್ಲೂ ಈ ವ್ಯವಸ್ಥೆ ಜಾರಿಗೆ ಬರುತ್ತಿದೆ ಎಂದರು.ಈ ಸೇವೆ ನೀಡುವುದರಿಂದಾಗಿ ಅಂಚೆ ಕಚೇರಿ ಸಿಬ್ಬಂದಿಗೆ ಕೆಲಸದ ಹೊರೆ ಹೆಚ್ಚಲಿದೆ ಎಂದು ನಾವು ಭಾವಿಸುವುದಿಲ್ಲ ಎಂದು ನುಡಿದರು. ಈ ಸೇವೆ ನೀಡುವುದಕ್ಕಾಗಿ ಅಂಚೆ ಕಚೇರಿಗೆ ಬೆಸ್ಕಾಂನಿಂದ ಹಣ ಪಾವತಿಯಾಗುತ್ತದೆ. ಹಾಲಿ ಬೆಂಗಳೂರು ಒನ್‍ಗೆ ಪಾವತಿಸುತ್ತಿರುವಂತೆ ಪ್ರತಿ ವ್ಯವಹಾರಕ್ಕೂ 5 ರುಪಾಯಿಯನ್ನು ಅಂಚೆ ಕಚೇರಿಗೆ ನೀಡಲಾಗುತ್ತದೆ. ಅಂಚೆ ಕಚೇರಿಯಲ್ಲಿ ಬಿಲ್ ಪಾವತಿ ಮಾಡುವ ಸೇವೆಗೆ ಗ್ರಾಹಕರು ಯಾವುದೇ
ಹೆಚ್ಚುವರಿ ಶುಲ್ಕ ಕಟ್ಟುಬೇಕಿಲ್ಲ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಬೆಸ್ಕಾಂ ಎಂಡಿ
ಪಂಕಜ್‍ಕುಮಾರ್ ಪಾಂಡೆ, ಗ್ರಾಹಕನ ಮನೆ ಬಾಗಿಲಲ್ಲಿ ವಿದ್ಯುತ್ ಬಿಲ್ ಬಾಬ್ತು ಹಣ
ಸ್ವೀಕರಿಸುವ ವ್ಯವಸ್ಥೆ ಜಾರಿಯಾಗುತ್ತಿದೆ. ಗ್ರಾಹಕನಿಗೆ ಬಿಲ್ ಕೊಡುವ ಸಂದರ್ಭದಲ್ಲೇ ಹಣ ಸ್ವೀಕರಿಸುವ ಅಥವಾ ತಿಂಗಳ ಉತ್ತರಾರ್ಧದಲ್ಲಿ ಹಣ ಸ್ವೀಕರಿಸುವ  ಸೇವೆ ಜಾರಿಗೆ ತರಲಾಗುತ್ತಿದೆ ಎಂದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.