ಜಿಲ್ಲಾ ಸುದ್ದಿ

ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವನ ಬಂಧನ

ಹೊಸಕೋಟೆ ತಾಲೂಕು ಪಿಲ್ಲಗುಂಪೆಯ ಕೈಗಾರಿಕಾ ಪ್ರದೇಶದಲ್ಲಿ ಫೆ.5ರಂದು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ...

ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವನ ಬಂಧನ
Published On :

ಸೂಲಿಬೆಲೆ: ಹೊಸಕೋಟೆ ತಾಲೂಕು ಪಿಲ್ಲಗುಂಪೆಯ ಕೈಗಾರಿಕಾ ಪ್ರದೇಶದಲ್ಲಿ ಫೆ.5ರಂದು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಬಂಧಿತ ಆರೋಪಿಯನ್ನು ಚೋಳಪ್ಪನ ಹಳ್ಳಿ ನಿವಾಸಿ ಆರೋಪಿಯನ್ನು ಚೋಳಪ್ಪನ ಹಳ್ಳಿ ನಿವಾಸಿ ಅಂಬರೀಷ್(21) ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಘಟನೆಯ ಪ್ರದೇಶದ ಅಂಗಡಿಯೊಂದರ ಮುಂದೆ ಅಳವಡಿಸಿದ್ದ ಸಿಸಿಟಿವಿಯ ದೃಶ್ಯಾವಳಿಗಳನ್ನು ಆಧರಿಸಿ ಜಿಲ್ಲಾ ಪೊಲೀಸರು ಆರೋಪಿಯ ಬಂಧನಕ್ಕೆ ಪ್ರತ್ಯೇಕ ತಂಡಗಳನ್ನು ರಚನೆಗೊಂಡಿತ್ತು.

ಸಿಕ್ಕಿ ಬಿದ್ದ: ಸ್ಥಳೀಯ ವ್ಯಕ್ತಿಯೊಬ್ಬರು ಪೊಲೀಸರಿಗೆ ನೀಡಿದ ಖಚಿತ ಮಾಹಿತಿ ಆಧರಿಸಿ ಪೊಲೀಸರ ತಂಡ ಶಿಡ್ಲಘಟ್ಟಕ್ಕೆ ಹೋಗಿತ್ತು. ಅಲ್ಲಿ ಆತ ಕಟ್ಟಡವೊಂದರ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡುತ್ತಿದ್ದ, ಮುಪ್ತಿಯಲ್ಲಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು, ಸಿಸಿಟಿವಿಯಲ್ಲಿ ದೃಶ್ಯಗಳನ್ನು ತೋರಿಸಿದಾಗ ತಾನೇ ಕೃತ್ಯ ನಡೆಸಿದ್ದು ಎಂದು ಒಪ್ಪಿಕೊಂಡ.

ಫೆ.5ರಂದು ಗ್ರಾಮದಲ್ಲಿ ಹಬ್ಬವಿತ್ತು. ಇದಕ್ಕಾಗಿ ಶಿಡ್ಲಘಟ್ಟದಿಂದ ಬಂದಿದ್ದ ಆರೋಪಿ ಕೆಲಸ ಮಾಡಿದ್ದ ಹಣದಲ್ಲಿ ಕುಡಿದಿದ್ದ, ಈ ವೇಳೆ ಬಾಲಕಿ ಅಲ್ಲೇ ಅಡ್ಡಾಡಿದನ್ನು ಕಂಡು ಆರೋಪಿ ಶೆಡ್ಡಿನೊಳಗೆ ಕರೆದು ಕೊಂಡು ಅತ್ಯಾಚಾರಕ್ಕೆ ಮುಂದಾದ. ಬಾಲಕಿ ಕಿರುಚಿ ಕೊಳ್ಳಬಾರದೆಂದು ಆಕೆಯ ಬಾಯಿಗೆ ಬಟ್ಟೆ ಪೇಪರ್ ತುರಕಿದ್ದ. ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.