ವಿದ್ಯಾರ್ಥಿ ಅಪಹರಣ: ನಾಲ್ವರು ಸೆರೆ
ಹಣಕ್ಕಾಗಿ ಪಿಯುಸಿ ವಿದ್ಯಾರ್ಥಿಯನ್ನು ಅಪಹರಿಸಿದ್ದ 4 ಆರೋಪಿಗಳನ್ನು ಘಟನೆ ನಡೆದ 3 ದಿನಗಳಲ್ಲಿ ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ...

ಬೆಂಗಳೂರು: ಹಣಕ್ಕಾಗಿ ಪಿಯುಸಿ ವಿದ್ಯಾರ್ಥಿಯನ್ನು ಅಪಹರಿಸಿದ್ದ 4 ಆರೋಪಿಗಳನ್ನು ಘಟನೆ ನಡೆದ 3 ದಿನಗಳಲ್ಲಿ ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ.
ಜಾಲಹೋಬಳಿ, ಬೆಟ್ಟಹಲಸೂರು ನಿವಾಸಿ ನವೀನ್(22), ವಿದ್ಯಾರಣ್ಯಪುರ ನರಸಿಪುರ ಲೇಔಟ್‍ನ ಅಜಿತ್(21), ದೊಡ್ಡಬೊಮ್ಮಸಂದ್ರದ ಕಾಳಪ್ಪ ಲೇಔಟ್‍ನ ಎಡ್ವಿನ್ (21) ಹಾಗೂ ತಮಿಳುನಾಡಿನ ಆವಲಪಲ್ಲಿ ನಿವಾಸಿ ದಾಮೋದರ್(20) ಬಂಧಿತ ಆರೋಪಿಗಳು. ಅಪಹರಣಕ್ಕೊಳಗಾಗಿದ್ದ 17 ವರ್ಷದ ವೈದ್ಯನಾಥ್‍ನನ್ನು ರಕ್ಷಿಸಲಾಗಿದೆ.
ಬಂಧಿತರಿಂದ ಅಪಹರಣಕ್ಕೆ ಬಳಸಿದ್ದ ಪಿಗೋ ಜೂಮ್ ಕಾರ್, ಮಾರುತಿ ಓಮ್ನಿ ಹಾಗೂ ಹೊಂಡಾ ಆ್ಯಕ್ಟಿವಾ, ಒಂದು ಪಲ್ಸರ್, ನಾಲ್ಕು ಮೊಬೈಲ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಡಿ.28ರಂದು ಬೆಳಗ್ಗೆ 7.30ಕ್ಕೆ ಯಲಹಂಕದ ಹಾರೋಹಳ್ಳಿ ಕೆರೆಯ ಬಳಿ ತನ್ನ ಸ್ನೇಹಿತ ನಿತೀಶ್ ಜೊತೆ ಸ್ಕೂಟರ್‍ನಲ್ಲಿ ತೆರಳುತ್ತಿದ್ದ ಪಿಯುಸಿ ವಿದ್ಯಾರ್ಥಿ ವೈದ್ಯನಾಥನನ್ನು ಆರೋಪಿಗಳಾದ ನವೀನ್, ಅಜಿತ್, ಎಡ್ವಿನ್ ಹಾಗೂ ದಾವೋದರ್ ಅಡ್ಡಗಟ್ಟಿ ಇಬ್ಬರ ಮೇಲೆ ಹಲ್ಲೆ ನಡೆಸಿ, ವೈದ್ಯನಾಥ್‍ನನ್ನು ಅಪಹರಿಸಿದ್ದರು. ಅಲ್ಲದೇ ವೈದ್ಯನಾಥ್ ಪೋಷಕರಿಗೆ ರು.20 ಲಕ್ಷ ಬೇಡಿಕೆ ಇಟ್ಟಿದ್ದರು.
ಆದರೆ, ನಿತೀಶ್‍ನನ್ನು ಅಲ್ಲೇ ಬಿಟ್ಟುಹೋಗಿದ್ದರು. ನಂತರ ನಿತೀಶ್ ಸ್ಥಳೀಯ ಠಾಣೆಗೆ ಅಪಹರಣಕ್ಕೆ ಬಳಸಿದ್ದ ಕಾರಿನ ನಂಬರ್ ಸಮೇತ ದೂರು ನೀಡಿದ್ದ. ಕೂಡಲೇ ಅಪಹರಣಕಾರರ ಬೆನ್ನಟ್ಟಿದ್ದ ಯಲಹಂಕ ಉಪನಗರ ಪೊಲೀಸರು ಅಪಹರಣಕ್ಕೊಳಗಾಗಿದ್ದ ವೈದ್ಯನಾಥನನ್ನು ದೊಡ್ಡಬಳ್ಳಾಪುರ ಸಮೀಪದ ನೀಲಗಿರಿ ತೋಪಿನಲ್ಲಿ ರಕ್ಷಿಸಿದ್ದರು. ಆದರೆ, ಆರೋಪಿಗಳು ಪೊಲೀಸರನ್ನು ಕಂಡು ಪರಾರಿಯಾಗಿದ್ದರು. ನಂತರ ಆರೋಪಿಗಳನ್ನು ಪತ್ತೆ ಹಚ್ಚಲು ತಂಡ ರಚಿಸಲಾಗಿತ್ತು.
ತಂಡ, ಕಾರಿನ ನಂಬರ್ ಹಾಗೂ ಮೊಬೈಲ್ ಲೋಕೇಷನ್ ಆಧಾರದ ಮೇಲೆ ಎಡ್ವಿನ್ ಹಾಗೂ ದಾಮೋದರ್‍ರನ್ನು ಹೊಸೂರಿನಲ್ಲಿ ಬಂಧಿಸಿತ್ತು. ನವೀನ್ ಮತ್ತು ಅಜಿತ್‍ನನ್ನು ಹೊಸಕೋಟೆಯಲ್ಲಿ ಬುಧವಾರ ಬಂಧಿಸಿತ್ತು. ಬಂಧಿತ ಆರೋಪಿಗಳನ್ನು ವಿಚಾರಣೆ ಗೊಳಪಡಿಸಿದಾಗ ವೈದ್ಯನಾಥ್ ತಂದೆಗೆ ರು.20 ಲಕ್ಷ ಬೇಡಿಕೆ ಇಡಲು ಪ್ಲ್ಯಾನ್ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ. ಇದರಲ್ಲಿ ತಮಿಳನಾಡಿನ ದಾವೋದರ್‍ಗೆ ರು.2 ಲಕ್ಷ ಹಾಗೂ ಉಳಿದ ಹಣವನ್ನು ಮೂವರು ಹಂಚಿಕೊಳ್ಳಲು ತೀರ್ಮಾನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


