ಚಿಕಿತ್ಸೆ ಫಲಿಸದೆ ಕೋಮಾದಲ್ಲಿದ್ದ ಶ್ರೀಪತಿ ಸಾವು
ಎದುರಾಳಿಗಳು ನಡೆಸಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಶ್ರೀಪತಿ...

Published On :
ಬೆಂಗಳೂರು: ಎದುರಾಳಿಗಳು ನಡೆಸಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಶ್ರೀಪತಿ (45) ಚಿಕಿತ್ಸೆ ಫಲಕಾರಿಯಾದೆ ಬುಧವಾರ ಮೃತಪಟ್ಟಿದ್ದಾರೆ.
ದ್ವೇಷದ ಹಿನ್ನೆಲೆಯಲ್ಲಿ ಆ.2ರಂದು ಎದುರಾಳಿ ಆನಂದ್ ಮತ್ತು ಆತನ ಸಹಚರರು ನೆಲಗದರನಹಳ್ಳಿ ಮುಖ್ಯರಸ್ತೆಯಲ್ಲಿ ಶ್ರೀಪತಿ ಅಲಿಯಾಸ್ ಅಪ್ಪಿ ಮೇಲೆ ಮಾರಕಾಸuಉಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಘಟನೆಯಿಂದ ತೀವ್ರವಾಗಿ ಗಾಯಗೊಂಡು ಕೋಮ ಸ್ಥಿತಿಯಲ್ಲಿದ್ದ ಶ್ರೀಪತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತಿತ್ತು. ಆದರೆ, ಸುಮಾರು ನಾಲ್ಕು ತಿಂಗಳ ಬಳಿಕ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ಶ್ರೀಪತಿ ಇತ್ತೀಚೆಗೆ ಪೀಣ್ಯ ಸಮೀಪ ಒಂದು ನಿವೇಶನ ಖರೀಸಿದ್ದರು. ಇದೇ ವೇಳೆ ಆನಂದ್ ಸಹಚರ ಕೂಡ ಇದೇ ನಿವೇಶನ ಖರೀಸಿದ್ದರು. ಈ ವಿಚಾರವಾಗಿ ಶ್ರೀಪತಿ ಮತ್ತು ಆನಂದ್ ನಡುವೆ ಜಗಳ ಏರ್ಪಟ್ಟು ಪರಸ್ಪರ ದ್ವೇಷ ಕಾರುತ್ತಿದ್ದರು. ಈ ನಡುವೆ ಎದುರಾದ ಬಿಬಿಎಂಪಿ ಚುನಾವಣೆಯಲ್ಲಿ ಈ ಇಬ್ಬರು ದುಶ್ಮನ್ ಗಳು ಸ್ಪರ್ಧಿ ಹಾಗೂ ಪ್ರತಿಸ್ಪರ್ಧಿ ಪರ ಪ್ರಚಾರಕ್ಕೆ ನಡೆಸಿದ್ದರು. ಇದರಿಂದ ಆನಂದ್‍ಗೆ ಶ್ರೀಪತಿ ಮೇಲಿದ್ದ ದ್ವೇಷ ಉಲ್ಬಣಗೊಂಡಿತು.
ಕೊನೆಗೂ ಹಲ್ಲೆ:ಬಿಬಿಎಂಪಿ ಚುನಾವಣೆ ಬಳಿಕ ಶ್ರೀಪತಿ ಮೇಲೆ ತನ್ನ ಕೋಪತಾಪ ಹೆಚ್ಚಿಸಿಕೊಂಡಿದ್ದ ಆನಂದ್, ತನ್ನ ಸಹಚರರೊಂದಿಗೆ ಆ.2ರಂದು ನೆಲಗದರನಹಳ್ಳಿ ಮುಖ್ಯರಸ್ತೆಯಲ್ಲಿ ಶ್ರೀಪತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಪರಾರಿಯಾಗಿದ್ದನು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೀಣ್ಯ ಠಾಣೆ ಪೊಲೀಸರು, ಆನಂದ್ ಮತ್ತು ಆತನ ಏಳು ಮಂದಿ ಸಹಚರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಆರೋಪಿಗಳ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದರು.
ಪೆರೋಲ್ ಮೇಲೆ ಹೊರ ಬಂದಿದ್ದ: ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2002ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಆರೋಪಿ ಆನಂದ್ ಜೀವಾವಧಿಗೆ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದನು. ಕುಟುಂಬದ ಕಾರಣ ನೀಡಿ ಆನಂದ್ ಪೆರೋಲ್ ಮೇಲೆ ಹೊರ ಬಂದಿದ್ದ. ಬಳಿಕ ಶ್ರೀಪತಿಯೊಂದಿಗೆ ದ್ವೇಷ ಬೆಳೆಸಿಕೊಂಡು ಹಲ್ಲೆ ನಡೆಸಿದ್ದ. ಜೈಲಿನಲ್ಲಿದ್ದಾಗಲೂ ಆನಂದ್, ವ್ಯಕ್ತಿಯೊಬ್ಬರಿಗೆ ಬೆದರಿಕೆ ಕರೆ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


