ಜಿಲ್ಲಾ ಸುದ್ದಿ

ಬಿಟ್ಟಿ ಡೆಬಿಟ್ಟು, ಜೈಲೇ ಕ್ರೆಡಿಟ್ಟು

ನಕಲಿ ಕ್ರೆಡಿಟ್ ಕಾರ್ಡ್‍ಗಳನ್ನು ತಯಾರಿಸಿ ಬೆಂಗಳೂರು ಹಾಗೂ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಬಳಕೆ ಮಾಡಿ ಲಕ್ಷಾಂತರ ರುಪಾಯಿ ವಂಚಿಸುತ್ತಿದ್ದ ದಂಪತಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ....

ಬಿಟ್ಟಿ ಡೆಬಿಟ್ಟು, ಜೈಲೇ ಕ್ರೆಡಿಟ್ಟು
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ನಕಲಿ ಕ್ರೆಡಿಟ್ ಕಾರ್ಡ್‍ಗಳನ್ನು ತಯಾರಿಸಿ ಬೆಂಗಳೂರು ಹಾಗೂ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಬಳಕೆ ಮಾಡಿ ಲಕ್ಷಾಂತರ ರುಪಾಯಿ ವಂಚಿಸುತ್ತಿದ್ದ ದಂಪತಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಮನೋಜ್‍ಕುಮಾರ್ (41) ಪತ್ನಿ ನಿತಾ (38) ಬಂಧಿತ ಆರೋಪಿಗಳು. ಬಂಧಿತರಿಂದ ಲ್ಯಾಪ್‍ಟಾಪ್, ಇಡಿಸಿ ಮಷಿನ್, ಸ್ಕಿಮ್ಮಿಂಗ್ ಮಷಿನ್, ಆಡಿ ಹಾಗೂ ಫೋರ್ಡ್ ಕಾರು, ವಿವಿಧ ಬ್ಯಾಂಕ್‍ಗಳ ಡೆಬಿಟ್ ಕಾರ್ಡ್, ಒಂದೇ ಹೆಸರಿನ ಎರಡೆರಡು ಡಿಎಲ್, ಎರಡು ಆಪಲ್ ಐ ಪ್ಯಾಡ್, 20 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಹರಳೂರಿನ ಶೋಭಾ ಕ್ಲಾಸಿಕ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ದಂಪತಿ ಎಚ್‍ಎಸ್ ಆರ್ ಲೇಔಟ್‍ನಲ್ಲಿ ಸಲೂನ್ ನಡೆಸುತ್ತಿದ್ದರು.

ತಮ್ಮ ಐಷಾರಾಮಿ ಜೀವನ ನಡೆಸುವ ದುರುದ್ದೇಶದಿಂದ ಸಲೂನ್ ಗೆ ಬರುವ ಸಾರ್ವಜನಿಕರಿಂದ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳ ಮೂಲಕ ಬಿಲ್ ಪಡೆಯುವಾಗ ಅವುಗಳ ಗೌಪ್ಯವಾಗಿ ನಂಬರ್ ತೆಗೆದಿರಿಸಿಕೊಳ್ಳುತ್ತಿದ್ದರು. ನಂತರ ಯಂತ್ರಗಳಲ್ಲಿ ಅವುಗಳಂತೆಯೇ ನಕಲಿ ಕಾರ್ಡ್ ತಯಾರಿಸಿಕೊಂಡು ಮಾಲ್ ಗಳಲ್ಲಿ ಭರ್ಜರಿ ಶಾಪಿಂಗ್ ಮಾಡುತ್ತಿದ್ದರು.

ಜೆ.ಪಿ.ನಗರದ ನಿವಾಸಿ ಪಿ. ಅರುಣ್-ಕುಮಾರ್ ಎಂಬುವರ ಕ್ರೆಡಿಟ್ ಕಾರ್ಡ್ ಅನ್ನು ಹೀಗೆ ಒಮ್ಮೆ ನಕಲಿಯಾಗಿ ತಯಾರಿಸಿ ಯುಬಿ ಸಿಟಿಯಲ್ಲಿರುವ ಡೀಸಲ್ ಫ್ಯಾಷನ್ ಇಂಡಿಯಾ ಮತ್ತು ಮಧುರಾ ಗಾರ್ಮೆಂಟ್ಸ್ ನಲ್ಲಿ ಬಳಸಿ ಸುಮಾರು ರು.1.40 ಲಕ್ಷ ಮೌಲ್ಯದ ಶಾಪಿಂಗ್ ಮಾಡಿದ್ದರು. ಆಗ ತಕ್ಷಣ ಅರುಣಕು ಮಾರ್ ಮೊಬೈಲ್‍ಗೆ 1.40ಲಕ್ಷ ರೂಪಾಯಿ ಡೆಬಿಟ್ ಎಸ್‍ಎಂಎಸ್ ಬಂದಿದೆ.

ತಮ್ಮ ಅಕೌಂಟ್‍ನಲ್ಲಿ ಏಕಾಏಕಿ ಇಷ್ಟೊಂದು ಹಣ ನಾಪತ್ತೆಯಾಗಿದ್ದನು ಕಂಡ ಅರುಣ್ ಕುಮಾರ್ ಗಾಬರಿಗೊಂಡು ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಶಾಪಿಂಗ್ ಮಾಡಿರುವುದಾಗಿ ತಿಳಿದುಬಂದಿದೆ. ಅವರು ಕೂಡಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ದಂಪತಿ ಬೆಂಗಳೂರು ಮಾತ್ರವಲ್ಲದೆ ತಮಿಳು- ನಾಡು, ಕೇರಳ ಇತರೆ ರಾಜ್ಯಗಳಲ್ಲಿ ಇಂತಹ ಕೃತ್ಯವೆಸಗಿದ್ದಾರೆ ಎಂಬ ಅನುಮಾನವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.