ಜಿಲ್ಲಾ ಸುದ್ದಿ

ಲಕ್ಷಾಂತರ ವಂಚನೆ: ಐವರ ಸೆರೆ

ಕೋಟ್ಯಂತರ ರುಪಾಯಿ ಸಾಲ ನೀಡುವುದಾಗಿ ಹೇಳಿ, ಗ್ರಾಹಕರಿಂದ ನಿರ್ವಹಣೆ ಶುಲ್ಕ ಪಡೆದು ಲಕ್ಷಾಂತರ ರುಪಾಯಿ ವಂಚನೆ ಮಾಡುತ್ತಿದ್ದ ಐವರು ಆರೋಪಿಗಳನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ...

ಲಕ್ಷಾಂತರ ವಂಚನೆ: ಐವರ ಸೆರೆ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಕೋಟ್ಯಂತರ ರುಪಾಯಿ ಸಾಲ ನೀಡುವುದಾಗಿ ಹೇಳಿ, ಗ್ರಾಹಕರಿಂದ ನಿರ್ವಹಣೆ ಶುಲ್ಕ ಪಡೆದು ಲಕ್ಷಾಂತರ ರುಪಾಯಿ ವಂಚನೆ ಮಾಡುತ್ತಿದ್ದ ಐವರು ಆರೋಪಿಗಳನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ.

ಕಲ್ಕೆರೆ ನಿವಾಸಿ ಪ್ಯಾಟ್ರಿಕ್ ಅಲೆನ್ಸೋ (41), ಮಾರತ್‍ಹಳ್ಳಿಯ ನರೇಶ್ (49), ತುಮಕೂರು ಜಿಲ್ಲೆ ಮಧುಗಿರಿಯ ಶಿವರಾಜ್ (51), ರಾಜಾಜಿನಗರದ ಜೇಡರಹಳ್ಳಿಯ ಜ್ಞಾನೇಶ್(47),
ಸೋರುಣುಸೆಯ ನಂಜಾರೆಡ್ಡಿ (46) ಬಂಧಿತರು. ಬಂಧಿತ ಆರೋಪಿಗಳು ಸ್ಪ್ಯಾಮ್ ಬ್ಯುಸಿನೆಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯನ್ನು ನಡೆಸುತ್ತಿದ್ದರು. ಈ ಕಂಪನಿ ರು.25 ಕೋಟಿವರೆಗೆ ಸಾಲ ನೀಡುತ್ತದೆ. ಇದಕ್ಕೆ ಪ್ರೊಸೆಸಿಂಗ್ ಫೀಸ್ ಎಂದು ರು.25 ಲಕ್ಷ ಕೊಡಬೇಕು ಎಂದು ಹೇಳಿ ಹಣ ಪಡೆದುಕೊಂಡಿದ್ದರು. ನಂತರ ಈ ಹಣವನ್ನು ನೀಡದೆ ಇತ್ತ ಸಾಲವನ್ನೂ ಕೊಡದೆ ವಂಚನೆ ಮಾಡುತ್ತಿದ್ದರು.

ಜೊತೆಗೆ ನೂರಾರು ಸಿಮ್ ಕಾಡ್ರ್ ಗಳನ್ನು ಹೊಂದಿದ್ದ ಆರೋಪಿಗಳು, ಗ್ರಾಹಕರಿಗೆ ನೀಡಿ ಮೋಸ ಮಾಡುತ್ತಿದ್ದರು. ವಂಚನೆ ಹಣದಿಂದ ಮೊಬೈಲ್, ಕಾರು, ಒಡವೆ, ಕಂಪ್ಯೂಟರ್ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಇದಕ್ಕೂ ಮೊದಲು ಆರೋಪಿಗಳೆಲ್ಲರೂ ರೈಸ್ ಪುಲ್ಲಿಂಗ್ ಪಾತ್ರೆ ಮತ್ತು ಇರೇಡಿಯಂ ವ್ಯಾಪಾರ ಮಾಡಿ ಹೆಚ್ಚು ಹಣ ಗಳಿಸಬಹುದೆಂದು ಪರಿಚಯವಿರುವ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ತಮಗೆ ಹಣ ನೀಡಿದರೆ ಹೆಚ್ಚು ಲಾಭ ಪಡೆಯಬಹುದೆಂದು ನಂಬಿಸಿ ಹಣ ಸಂಗ್ರಹಿಸಿದ್ದರು. ಪಡೆದ ಹಣದಿಂದ ವ್ಯಾಪಾರ ಮಾಡಲು ತಮಿಳುನಾಡು, ಹೈದರಾಬಾದ್‍ನಲ್ಲಿ ಕೆಲ ವ್ಯಕ್ತಿಗಳೊಂದಿಗೆ ಹೋಟೆಲ್‍ಗಳಲ್ಲಿ ಮೀಟಿಂಗ್ ಮಾಡಿದ್ದಾರೆ. ಅಲ್ಲಿ ಅವರಿಗೆ ರೈಸ್ ಪುಲ್ಲಿಂಗ್ ಪಾತ್ರೆಗಾಗಿ ಹಣ ಪಡೆದು ಅವರಿಗೆ ಯಾವುದೇ ಸಹಾಯ ಮಾಡದೆ ಮೋಸ ಮಾಡಿದ್ದಾರೆ.

ಇತ್ತ ಜನರಿಂದ ಪಡೆದ ಹಣವನ್ನು ಹಿಂದಿರುಗಿಸಲಾಗದೆ ಸ್ಪ್ಯಾಮ್ ಬ್ಯುಸಿನೆಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ತೆರೆದು ರಿಯಲ್ ಎಸ್ಟೇಟ್ ಮತ್ತು ವಿದೇಶಿ ಕಂಪನಿಗಳಿಂದ ಕಡಿಮೆ ಬಡ್ಡಿ ದರದಲ್ಲಿ ಫೈನಾನ್ಸ್ ಕೊಡಿಸುತ್ತೇವೆಂದು ನಂಬಿಸಿ ಮೋಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಮಹಮ್ಮದ್ ಆರೀಫ್ ಎಂಬುವರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.