ಜಿಲ್ಲಾ ಸುದ್ದಿ

ಸೇನೆಯ ಗೆಸ್ಟ್ ಹೌಸ್ ಬಳಿ ಗಂಧದ ಮರ ಕದಿಯಲು ಯತ್ನ

ಬ್ರಿಗೇಡ್ ರಸ್ತೆ ಸಮೀಪದ ರೆಸ್ಟ್ ಹೌಸ್ ಸ್ಟ್ರೀಟ್‍ನಲ್ಲಿರುವ ಸೇನೆಯ ಗೆಸ್ಟ್ ಹೌಸ್ ಆವರಣದಲ್ಲಿದ್ದ ಶ್ರೀಗಂಧದ ಮರ ಕದಿಯುವ ಯತ್ನ ನಡೆಸಿ ಸೇನಾ ಸಿಬ್ಬಂದಿ ಮೇಲೆ ...

ಸೇನೆಯ ಗೆಸ್ಟ್ ಹೌಸ್ ಬಳಿ ಗಂಧದ ಮರ ಕದಿಯಲು ಯತ್ನ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಬ್ರಿಗೇಡ್ ರಸ್ತೆ ಸಮೀಪದ ರೆಸ್ಟ್ ಹೌಸ್ ಸ್ಟ್ರೀಟ್‍ನಲ್ಲಿರುವ ಸೇನೆಯ ಗೆಸ್ಟ್ ಹೌಸ್ ಆವರಣದಲ್ಲಿದ್ದ ಶ್ರೀಗಂಧದ ಮರ ಕದಿಯುವ ಯತ್ನ ನಡೆಸಿ ಸೇನಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ. ನಸುಕಿನ 3 ಗಂಟೆ ಸುಮಾರಿಗೆ ಗೆಸ್ಟ್ ಹೌಸ್‍ನ ಗೋಡೆ ಹಾರಿದ ದುಷ್ಕರ್ಮಿಗಳು ಮರ ಕಡಿಯುತ್ತಿದ್ದರು. ಈ ವೇಳೆ ಗೆಸ್ಟ್‍ಹೌಸ್‍ನಲ್ಲಿದ್ದ ಮೇಜರ್ ಭಾರದ್ವಾಜ್ ಸದ್ದು ಕೇಳಿ ಹೊರಗೆ ಬಂದಿದ್ದಾರೆ. ಈ ವೇಳೆ ಮರ ಕತ್ತರಿಸುತ್ತಿರುವುದನ್ನು ಗಮನಿಸಿ ದುಷ್ಕರ್ಮಿಗಳನ್ನು ಹಿಡಿಯಲು ಮುಂದಾಗಿದ್ದಾರೆ. ಆದರೆ, ಗರಗಸದಿಂದ ಭಾರದ್ವಾಜ್ ಅವರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಸಂಬಂಧ ಕಬ್ಬನ್‍ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೆಸ್ಟ್ ಹೌಸ್‍ನ ಕಾಂಪೌಂಡ್ ಎತ್ತರವಾಗಿಲ್ಲ. ಹೀಗಾಗಿ, ದುಷ್ಕರ್ಮಿ ಗಳು ಸುಲಭವಾಗಿ ಒಳ ಪ್ರವೇಶಿಸಿದ್ದಾರೆ. 2 ತಿಂಗಳ ಹಿಂದೆಯೂ ಮರ ಕಡಿಯುವ ಯತ್ನ ನಡೆದಿದೆ. ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು. ಕಳೆದ ಒಂದು ತಿಂಗಳಲ್ಲಿ ಎರಡನೇ ಸಲ ಈ ರೀತಿ ಮರ ಕಳ್ಳತನ ಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.