ಎಕ್ಸ್ ಪ್ರೆಸ್ ಗ್ಯಾಜೆಟ್ 2015; ನಾಳೆ ಉಪೇಂದ್ರ ಉದ್ಘಾಟನೆ; ನಿಮ್ಮೆಲ್ಲರಿಗೂ ಸ್ವಾಗತ
ಉಪೇಂದ್ರ ಸಿನೆಮಾಗಳಿಗೂ ಇಂದಿನ ಗ್ಯಾಜೆಟ್ ಗಳಿಗೂ ಒಂದು ಸಾಮ್ಯತೆ ಇದೆ. ಎರಡೂ ಇಂದಿನ ಯುವ ಮನಸ್ಸನ್ನು ಗೆಲ್ಲಲು ಸದಾ ತುಡಿಯುತ್ತಿರುತ್ತವೆ.

ಬೆಂಗಳೂರು: ಉಪೇಂದ್ರ ಸಿನೆಮಾಗಳಿಗೂ ಇಂದಿನ ಗ್ಯಾಜೆಟ್ ಗಳಿಗೂ ಒಂದು ಸಾಮ್ಯತೆ ಇದೆ. ಎರಡೂ ಇಂದಿನ ಯುವ ಮನಸ್ಸನ್ನು ಗೆಲ್ಲಲು ಸದಾ ತುಡಿಯುತ್ತಿರುತ್ತವೆ.
ನವನೂತನ-ಇಂದಿನ ದಿನದ ಗ್ಯಾಜೆಟ್ ಗಳನ್ನು ವೀಕ್ಷಿಸಿ-ಕೊಳ್ಳಲು ಇದು ಸದವಕಾಶ. ಜೊತೆಗೆ ನಿಮ್ಮ ನೆಚ್ಚಿನ ನಟ ಉಪೇಂದ್ರ ಮತ್ತು ನಟಿ ಪ್ರಿಯಾಂಕ ಉಪೇಂದ್ರ ಅವರನ್ನು ಭೇಟಿ ಮಾಡಲು. ಹೌದು, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಬಳಗ ಆಯೋಜಿಸುತ್ತಿರುವ ಎಕ್ಸ್ ಪ್ರೆಸ್ ಗ್ಯಾಜೆಟ್ ಲೋಕವನ್ನು ನಟ ಉಪೇಂದ್ರ ಮತ್ತು ನಟಿ ಪ್ರಿಯಾಂಕ ಉಪೇಂದ್ರ ಆಗಸ್ಟ್ 7 2015 ಮಧ್ಯಾಹ್ನ 2.30ಕ್ಕೆ ಉದ್ಘಾಟಿಸಲಿದ್ದಾರೆ.
ನಾಳೆ ಇಂಡಿಯನ್ ಎಕ್ಸ್ ಪ್ರೆಸ್ ಆವರಣ, ಕ್ವೀನ್ಸ್ ರಸ್ತೆ ಬೆಂಗಳೂರು, ಈ ಸ್ಥಳಕ್ಕೆ ಬಂದು ಈ ಪ್ರದರ್ಶನದಲ್ಲಿ ಭಾಗಿಯಾಗಲು ನಿಮ್ಮೆಲ್ಲರಿಗೂ ಸ್ವಾಗತ! ಈ ಗ್ಯಾಜೆಟ್ ಉತ್ಸವ ನಾಳೆಯಿಂದ ಮೂರು ದಿನಗಳ ಕಾಲ ಅಂದರೆ ಆಗಸ್ಟ್ 9ರವರಗೆ ಮುಂದುವರೆಯಲಿದ್ದು, ಬೆಳಗ್ಗೆ 11 ರಿಂದ ಸಂಜೆ 8ರವೆರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


