ಜಿಲ್ಲಾ ಸುದ್ದಿ

ಕಡ್ಡಾಯ ನಿವೃತ್ತಿ ಪಡೆಯುವಂತೆ ಐಎಎಸ್ ಅಧಿಕಾರಿ ಮೇಲೆ ಒತ್ತಡ

ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ಕಡ್ಡಾಯವಾಗಿ ನಿವೃತ್ತಿ ಪಡೆಯುವಂತೆ ಒತ್ತಡ ಹೇರಿ ಬಲವಂತವಾಗಿ ರಾಜೀನಾಮೆ ಪಡೆದಿರುವ ಪ್ರಕರಣ ಬಯಲಿಗೆ ಬಂದಿದೆ...

ಕಡ್ಡಾಯ ನಿವೃತ್ತಿ ಪಡೆಯುವಂತೆ ಐಎಎಸ್ ಅಧಿಕಾರಿ ಮೇಲೆ ಒತ್ತಡ
ಐಎಎಸ್ ಅಧಿಕಾರಿ ವಿಜಯ್ ಕುಮಾರ್ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ಕಡ್ಡಾಯವಾಗಿ ನಿವೃತ್ತಿ ಪಡೆಯುವಂತೆ ಒತ್ತಡ ಹೇರಿ ಬಲವಂತವಾಗಿ ರಾಜೀನಾಮೆ ಪಡೆದಿರುವ ಪ್ರಕರಣ ಬಯಲಿಗೆ ಬಂದಿದೆ.

ದಕ್ಷ ಮತ್ತು ಪ್ರಾಮಾಣಿಕ ಐಎಎಸ್ ಅಧಿಕಾರಿ ಎಂ.ಎನ್.ವಿಜಯ್‌ಕುಮಾರ್ ಅವರ ನಿವೃತ್ತಿಗೆ ಮೂರು ದಿನ ಮುಂಚಿತವಾಗಿಯೇ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಡ ಹೇರಲಾಗಿದೆ ಎಂದು ಹೇಳಲಾಗುತ್ತಿದೆ. ನಿಯಮಗಳ ಪ್ರಕಾರ, ಎಂ.ಎನ್.ವಿಜಯ್‌ಕುಮಾರ್ ಅವರು ಸೇವೆಯಿಂದ ನಿನ್ನೆ ನಿವೃತ್ತಿಯಾಗಬೇಕಿತ್ತು. ಆದರೆ, ಅವರ ಮೇಲೆ ಕೆಲ ಐಎಎಸ್  ಅಧಿಕಾರಿಗಳೇ ಲಾಬಿ ನಡೆಸಿ 3 ದಿನ ಮುಂಚಿತವಾಗಿ ನಿವೃತ್ತಿಯಾಗುವಂತೆ ಒತ್ತಡ ಹೇರಿದ್ದಾರೆಂದು ತಿಳಿದುಬಂದಿದೆ.

ಇನ್ನು ಸರ್ಕಾರಿ ನಿಯಮಗಳ ಪ್ರಕಾರ ಯಾವುದೇ ಒಬ್ಬ ಸರ್ಕಾರಿ ಅಧಿಕಾರಿ ಅವಧಿಗೂ ಮುನ್ನ ಸೇವೆಯಿಂದ ಹೊರಹೋದರೆ ಸರ್ಕಾರದ ಕೆಲ ಸವಲತ್ತುಗಳು ಸಿಗುವುದಿಲ್ಲ. ಅಲ್ಲದೆ ಪಿಂಚಣಿಯಲ್ಲಿ 3/2 ಸಿಕ್ಕರೆ ಬಾಕಿ ಸವಲತ್ತುಗಳನ್ನು ಪಡೆದುಕೊಳ್ಳಲು ಇಲಾಖೆಯಿಂದ ಕ್ಲೀನ್‌ಚಿಟ್ ಪಡೆಯಬೇಕು. ಹೀಗಾಗಿ ಪ್ರಸ್ತುತ ವಿಜಯ್ ಕುಮಾರ್ ಅವರನ್ನು ಬಲವಂತವಾಗಿ ನಿವೃತ್ತಿ ಪಡೆಯುವಂತೆ ಮಾಡುವ ಮೂಲಕ ಅವರ ಸರ್ಕಾರಿ ಸವಲತ್ತುಗಳಿಗೆ ಕತ್ತರಿ ಹಾಕಲಾಗಿದೆ.

1981ರ ಐಎಎಸ್ ಅಧಿಕಾರಿಯಾಗಿದ್ದ ಎಂ.ಎನ್.ವಿಜಯ್‌ಕುಮಾರ್ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು. ವರ್ಗಾವಣೆಯಾದ ಪ್ರತೀ ಕ್ಷೇತ್ರದಲ್ಲಿಯೂ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದು ಹೆಸರು ಪಡೆದ ವಿಜಯ್ ಕುಮಾರ್ ಅವರನ್ನು ಮಟ್ಟ ಹಾಕಲೇಬೇಕೆಂದು ಕೆಲ ಪ್ರಭಾವಿ ವ್ಯಕ್ತಿಗಳು ಲಾಬಿ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರ ಮೇಲೆ ನಿಯಮಗಳನ್ನು ಉಲ್ಲಂಘಿಸಿ ಹಿರಿಯ ಮತ್ತು ಕಿರಿಯ ಅಧಿಕಾರಿಗಳ ಮೇಲೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆಂಬ ಆರೋಪ ಹೊರಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.