'15 ರೂ ಹೇರ್ ಡೈ': ಕಿಂಗ್ ಚಾರ್ಲ್ಸ್ ಭೇಟಿಗೂ ಮುನ್ನ ಪಾಕಿಸ್ತಾನ ನಾಯಕ Babar Azam ಫುಲ್ ಟ್ರೋಲ್!
ಈ ಬಾರಿ ಅವರ ಕ್ರಿಕೆಟ್ ಪ್ರದರ್ಶನಕ್ಕಿಂತ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗಲು ಬಂದಾಗಿನ ಅವರ ಲುಕ್ ನೆಟ್ಟಿಗರ ಟ್ರೋಲಿಂಗ್ ಗೆ ಕಾರಣವಾಗಿದೆ.

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡಕ್ಕೆ ಯಾಕೋ ಟೈಮೇ ಸರಿ ಇಲ್ಲ ಅನ್ಸತ್ತೆ.. ಟೂರ್ನಿಯಲ್ಲಿ ಕಳಪೆ ಫಾರ್ಮ್ ನಲ್ಲಿರುವ ತಂಡಕ್ಕೆ ಇದೀಗ ಟ್ರೋಲಿಗರ ಕಾಟವೂ ಹೆಚ್ಚಾಗ್ತಿದೆ.
ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂರನ್ನು ಅವರದ್ದೇ ತಂಡದ ಅಭಿಮಾನಿಗಳು ಭೀಕರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಈ ಬಾರಿ ಅವರ ಕ್ರಿಕೆಟ್ ಪ್ರದರ್ಶನಕ್ಕಿಂತ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗಲು ಬಂದಾಗಿನ ಅವರ ಲುಕ್ ನೆಟ್ಟಿಗರ ಟ್ರೋಲಿಂಗ್ ಗೆ ಕಾರಣವಾಗಿದೆ.
ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗಲು ಬಾಬರ್ ಅಜಂ ತಂಡದ ಇತರ ಆಟಗಾರರೊಂದಿಗೆ ಆಗಮಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತಂಡದ ಬಸ್ ನಿಂದ ಕೆಳಗಿಳಿದು ಬರುತ್ತಿದ್ದ ಬಾಬರ್ ಅವರನ್ನು ಅಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಸುತ್ತುವರಿದಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಬಾಬರ್ ಅವರು ಬಿಳಿ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಆದರೆ ಅವರ ಉಡುಪಿಗಿಂತಲೂ ಗಮನ ಸೆಳೆದಿದ್ದು ಅವರ ಜೆಟ್ ಬ್ಲ್ಯಾಕ್ ಕೂದಲು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಬಾಬರ್ ಕೂದಲಿಗೆ ಡೈ ಹಾಕಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
‘ಹೇರ್ ಡೈ’ ವಿಚಾರಕ್ಕೆ ಟ್ರೋಲ್
ವಿಡಿಯೋದಲ್ಲಿ ಬಾಬರ್ ಅವರ ಕೂದಲು ಸಾಮಾನ್ಯಕ್ಕಿಂತ ಹೆಚ್ಚು ಹೊಳೆಯುತ್ತಿರುವಂತೆ ಕಾಣಿಸಿಕೊಂಡಿದ್ದು, ಕೂದಲನ್ನು ಸೆಟ್ ಮಾಡಲು ಹೆಚ್ಚಿನ ಹೇರ್ ಪ್ರಾಡಕ್ಟ್ ಬಳಸಿರುವಂತೆ ಕೆಲವರಿಗೆ ಕಂಡಿದೆ. ಇದನ್ನೇ ಆಧಾರವಾಗಿಸಿಕೊಂಡು ಕೆಲ ನೆಟ್ಟಿಗರು ಬಾಬರ್ ಅವರ ಲುಕ್ ಬಗ್ಗೆ ವ್ಯಂಗ್ಯಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕೆಲವರು ಅವರ ಹೇರ್‌ಸ್ಟೈಲ್ ಅನ್ನು ಟೀಕಿಸಿದ್ದರೆ, ಇನ್ನು ಕೆಲವರು ಅಗ್ಗದ ‘ಹೇರ್ ಡೈ’ ಕುರಿತ ಟೀಕೆಗಳನ್ನೂ ಮಾಡಿದ್ದಾರೆ.
ಇದಲ್ಲದೆ, ಕಿಂಗ್ ಚಾರ್ಲ್ಸ್ ಅವರಂತಹ ಉನ್ನತ ಮಟ್ಟದ ವ್ಯಕ್ತಿಯನ್ನು ಭೇಟಿಯಾಗುವ ಸಂದರ್ಭದಲ್ಲಿ ಬಾಬರ್ ಸೇರಿದಂತೆ ಪಾಕಿಸ್ತಾನ ಆಟಗಾರರು ಕ್ಯಾಶುವಲ್ ಡ್ರೆಸ್‌ನಲ್ಲಿ ಬಂದಿರುವುದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ್ದು, ಪಾಕಿಸ್ತಾನ ತಂಡದ ನಾಯಕನಾಗಿ ಬಾಬರ್ ಅವರ ಪ್ರತಿಯೊಂದು ನಡೆಗೂ ಸಿಗುತ್ತಿರುವ ಹೆಚ್ಚಿನ ಸಾರ್ವಜನಿಕ ಗಮನ ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಬಾಬರ್‌ಗೆ ಜ್ವರ
ಇದರ ನಡುವೆ, ಬಾಬರ್ ಅಜಂ ಅವರು ಮುಂದಿನ ನಿರ್ಣಾಯಕ ಟೆಸ್ಟ್ ಪಂದ್ಯಕ್ಕೂ ಮುನ್ನ ಹೆಚ್ಚಿನ ಜ್ವರದಿಂದ ಬಳಲುತ್ತಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಹೀಗಾಗಿ ಪಂದ್ಯಕ್ಕೆ ಮುನ್ನ ಅವರ ಫಿಟ್‌ನೆಸ್ ಮೇಲೆ ತಂಡದ ಗಮನ ನೆಟ್ಟಿದೆ. ಅವರು ಪಂದ್ಯಕ್ಕೆ ಲಭ್ಯರಾಗುತ್ತಾರೆಯೇ? ಎಂಬ ಅನಿಶ್ಚಿತತೆ ಪಾಕಿಸ್ತಾನ ತಂಡಕ್ಕೆ ಮತ್ತೊಂದು ಸವಾಲಾಗುವ ಸಾಧ್ಯತೆಯಿದೆ.
ಇದರ ನಡುವೆ, ಲಾರ್ಡ್ಸ್‌ನಲ್ಲಿ ಸೋಲನುಭವಿಸಿದ ಬಳಿಕ ಪಾಕಿಸ್ತಾನ ಏಳು ಆಟಗಾರರನ್ನು ತವರಿಗೆ ಕಳುಹಿಸಿದೆ ಎನ್ನಲಾಗಿದೆ. ತಂಡದ ಕೋಚಿಂಗ್ ಸಿಬ್ಬಂದಿಯಲ್ಲೂ ಬದಲಾವಣೆ ಮಾಡಲಾಗಿದ್ದು, ಸರ್ಫರಾಜ್ ಖಾನ್ ಮತ್ತು ಉಮರ್ ಗುಲ್ ಅವರ ಸ್ಥಾನಕ್ಕೆ ಮೈಕ್ ಹೆಸನ್ ಮತ್ತು ಆಶ್ಲೇ ನಾಫ್ಕೆ ಅವರನ್ನು ತರಲಾಗಿದೆ ಎಂದು ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



