ಕ್ರಿಕೆಟ್

IPL 2026: ಶಾರ್ದೂಲ್ ಠಾಕೂರ್‌ ವಿರುದ್ಧ 'ಸ್ವೀಟ್ ರಿವೆಂಜ್' ತೀರಿಸಿಕೊಂಡ ರವೀಂದ್ರ ಜಡೇಜಾ! Video ವೈರಲ್

ಈ ಲೀಗ್‌ನ ಕೆಲವು ಪಂದ್ಯಗಳಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಆಡುವ ಅವಕಾಶವನ್ನು ಪಡೆದರು. ರಾಜಸ್ಥಾನ್ ಇನಿಂಗ್ಸ್‌ನ ಕೊನೆಯ ಓವರ್ ಎಲ್ಲರ ಗಮನ ಸೆಳೆಯಿತು.

IPL 2026: ಶಾರ್ದೂಲ್ ಠಾಕೂರ್‌ ವಿರುದ್ಧ 'ಸ್ವೀಟ್ ರಿವೆಂಜ್' ತೀರಿಸಿಕೊಂಡ ರವೀಂದ್ರ ಜಡೇಜಾ! Video ವೈರಲ್
ರವೀಂದ್ರ ಜಡೇಜಾ. ಶಾರ್ದೂಲ್ ಠಾಕೂರ್
Published On :

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್‌ ವಿರುದ್ಧ ರವೀಂದ್ರ ಜಡೇಜಾರ 'ಸ್ವೀಟ್ ರಿವೆಂಜ್' ಎಲ್ಲರ ಗಮನ ಸೆಳೆಯಿತು. ಈಗ ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.

ಈ ಲೀಗ್‌ನ ಕೆಲವು ಪಂದ್ಯಗಳಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಆಡುವ ಅವಕಾಶವನ್ನು ಪಡೆದರು. ರಾಜಸ್ಥಾನ್ ಇನಿಂಗ್ಸ್‌ನ ಕೊನೆಯ ಓವರ್ ಎಲ್ಲರ ಗಮನ ಸೆಳೆಯಿತು.

ಈಗ ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಮುಂಬೈ ಇಂಡಿಯನ್ಸ್ ಪರ ಶಾರ್ದೂಲ್ ಠಾಕೂರ್ ಅಂತಿಮ ಓವರ್ ಎಸೆಯಲು ಮುಂದಾದರು.

ಅಂತಿಮ ಓವರ್‌ನ ನಾಲ್ಕನೇ ಎಸೆತದಲ್ಲಿ ಅವರು ನಿಧಾನಗತಿಯ ಎಸೆತ ಎಸೆದರು. ಇದನ್ನು ತಪ್ಪಾಗಿ ಗುರುತಿಸಿದ ಜಡೇಜಾ ಔಟ್ ಆದರು. ಜಡೇಜಾ ಅವರನ್ನು ಔಟ್ ಮಾಡಿದ ನಂತರ, ಶಾರ್ದೂಲ್ ತಮಾಷೆಯಾಗಿ ಅವರ ಬಳಿಗೆ ಹೋಗಿ ಸಂಭ್ರಮಾಚರಣೆ ಮಾಡಿದರು. ಆದರೆ ಅಂಪೈರ್ ನೋಬೌಲ್ ಎಂದು ಸೂಚಿಸಿದರು. ಈ ನಿರ್ಣಯ ಶಾರ್ದೂಲ್ ಮತ್ತು ಮುಂಬೈ ಇಂಡಿಯನ್ಸ್‌ನ ಸಂಭ್ರಮಾಚರಣೆಗೆ ಬ್ರೇಕ್ ಹಾಕಿತು.

ಫ್ರೀ- ಹಿಟ್ ಅವಕಾಶ ಲಭ್ಯವಾದಾಗ, ಜಡೇಜಾ ಮೈದಾನಕ್ಕೆ ಮರಳುವಾಗ, ಅವರು ಶಾರ್ದೂಲ್ ಅವರನ್ನು ಕಿಚಾಯಿಸಿದರು. ರವೀಂದ್ರ ಜಡೇಜಾ ಶಾರ್ದೂಲ್‌ ಅವರ ಬಳಿ ಹೋಗಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ಈ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.