IPL 2026: 2 ಓವರ್ ನಲ್ಲಿ ಪಂದ್ಯ ಕಳೆದುಕೊಂಡ GT; KKRಗೆ 29 ರನ್ ಭರ್ಜರಿ ಜಯ
248 ರನ್ ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ ತಂಡ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಕೋಲ್ಕತಾ: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ 29 ರನ್ ಗಳ ಭರ್ಜರಿ ಜಯ ಸಾಧಿಸಿತು.
ಕೋಲ್ಕತಾದ ಈಡೆನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೀಡಿದ್ದ 248 ರನ್ ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ ತಂಡ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಆ ಮೂಲಕ ಕೋಲ್ಕತಾ ವಿರುದ್ಧ 29 ರನ್ ಗಳ ಹೀನಾಯ ಸೋಲು ಕಂಡಿತು.
ಗುಜರಾತ್ ಪರ ಸಾಯಿ ಸುದರ್ಶನ್ ಗಾಯದ ನಡುವೆಯೂ ಅಜೇಯ 53 ರನ್ ಗಳಿಸಿದರೆ, ನಾಯಕ ಶುಭ್ ಮನ್ ಗಿಲ್ 85 ರನ್ ಮತ್ತು ಜಾಸ್ ಬಟ್ಲರ್ 57 ರನ್ ಗಳಿಸಿದರು. ಆದರೂ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
2 ಓವರ್ ನಲ್ಲಿ ಪಂದ್ಯ ಕಳೆದುಕೊಂಡ GT
ಇನ್ನು 248 ರನ್ ಗುರಿಯ ಹೊರತಾಗಿಯೂ ಗುಜರಾತ್ ಇನ್ನಿಂಗ್ಸ್ ನ 18ನೇ ಓವರ್ ವರೆಗೂ ಗಿಲ್ ಪಡೆ ಈ ಪಂದ್ಯ ಗೆಲ್ಲುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ತಂಡಕ್ಕೆ ಗೆಲ್ಲಲು 2 ಓವರ್ ನಲ್ಲಿ 45 ರನ್ ಗಳ ಅವಶ್ಯಕತೆ ಇತ್ತು. ಆದರೆ 19ನೇ ಓವರ್ ನಲ್ಲಿ ಗುಜರಾತ್ ಪಂದ್ಯ ಕೈಚೆಲ್ಲಿತು.
ಸೌರಭ್ ದುಬೆ ಎಸೆದ ಆ ಓವರ್ ನಲ್ಲಿ ಅಕ್ಷರಶಃ ಗುಜರಾತ್ ರನ್ ಗಳಿಸಲು ಪರದಾಡಿತು. ಒಂದು ಓವರ್ ನಲ್ಲಿ ಕೇವಲ 5ರನ್ ಮಾತ್ರ ಗಳಿಸಿತು. ಆ ಮೂಲಕ ಅದಾಗಲೇ ಗುಜರಾತ್ ಸೋಲು ಖಚಿತವಾಗಿತ್ತು. ಅಂತಿಮ ಓವರ್ ನಲ್ಲಿ ಕೆಮರಾನ್ ಗ್ರೀನ್ 10 ರನ್ ನೀಡಿ ರಾಹುಲ್ ತೆವಾಟಿಯಾ ವಿಕೆಟ್ ಪಡೆದರು. ಆ ಮೂಲಕ ಕೋಲ್ಕತಾ ಗುಜರಾತ್ ವಿರುದ್ಧ 29 ರನ್ ಗಳ ಭರ್ಜರಿ ಜಯ ಸಾಧಿಸಿತು.
ಕೋಲ್ಕತಾ ಬೃಹತ್ ಮೊತ್ತ
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ 247 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಕೋಲ್ಕತಾ ಪರ ಫಿನ್ ಅಲೆನ್ 93 ರನ್ ಗಳಿಸಿದರೆ, ಆ್ಯಂಗ್ಕ್ರಿಶ್ ರಘುವಂಶಿ ಅಜೇಯ 82 ರನ್ ಮತ್ತು ಕೆಮರಾನ್ ಗ್ರೀನ್ ಅಜೇಯ 52 ರನ್ ಕಲೆಹಾಕಿ ತಂಡದ ಮೊತ್ತಕ್ಕೆ ಕಾರಣರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


