ಅರ್ಷದೀಪ್ ಹುಚ್ಚಾಟ: ಅಭಿಮಾನಿ ಹೀಯಾಳಿಸಿ ಪೋಸ್ಟ್, ನೆಟ್ಟಿಗರ ಆಕ್ರೋಶ! ಬ್ಯಾನ್ ಮಾಡಲು ಮಾಜಿ ಸ್ಪಿನ್ನರ್ ಒತ್ತಾಯ!
ಭಾರತದ ಪರ ಟಿ-20 ಕ್ರಿಕೆಟಿನಲ್ಲಿ ಅತಿ ಹೆಚ್ಚಿನ ವಿಕೆಟ್ ಪಡೆದಿರುವ ಅರ್ಷದೀಪ್ ಸೋಶಿಯಲ್ ಮೀಡಿಯಾದಲ್ಲಿ ವ್ಲಾಗ್ ಹಾಗೂ ಕಂಟೆಂಟ್ ಪೋಸ್ಟ್ ಗಳೊಂದಿಗೆ ಹೆಚ್ಚು ಸಕ್ರಿಯರಾಗಿದ್ದು, ಫಾಲೋವರ್ಸ್ ಸಂಖ್ಯೆಯೂ ಹೆಚ್ಚಿದೆ.

ಇತ್ತೀಚಿಗೆ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ ಮನ್ ತಿಲಕ್ ವರ್ಮಾ ಅವರನ್ನು 'ಅಂಧೇರೆ' ಅಂತಾ ಕರೆದು ಜನಾಂಗೀಯ ನಿಂದನೆ ವಿವಾದಕ್ಕೆ ಸಿಲುಕಿರುವ ಪಂಜಾಬ್ ಕಿಂಗ್ಸ್ ವೇಗಿ ಅರ್ಷದೀಪ್ ಸಿಂಗ್ ಈಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.
ಭಾರತದ ಪರ ಟಿ-20 ಕ್ರಿಕೆಟಿನಲ್ಲಿ ಅತಿ ಹೆಚ್ಚಿನ ವಿಕೆಟ್ ಪಡೆದಿರುವ ಅರ್ಷದೀಪ್ ಸೋಶಿಯಲ್ ಮೀಡಿಯಾದಲ್ಲಿ ವ್ಲಾಗ್ ಹಾಗೂ ಕಂಟೆಂಟ್ ಪೋಸ್ಟ್ ಗಳೊಂದಿಗೆ ಹೆಚ್ಚು ಸಕ್ರಿಯರಾಗಿದ್ದು, ಫಾಲೋವರ್ಸ್ ಸಂಖ್ಯೆಯೂ ಹೆಚ್ಚಿದೆ.
ಆದರೆ, ಅಂತಹ ಫ್ಯಾನ್ ಪಾಲೋವರ್ಸ್ ಹೊಂದಿರುವ ಅರ್ಷದೀಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಯೊಬ್ಬರನ್ನು ಹೀಯಾಳಿಸಿ ಮಾಡಿರುವ ಪೋಸ್ಟ್ ನೆಟ್ಟಿಗರನ್ನು ಕೆರಳಿಸಿದೆ.
ಹೌದು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನಾ ರೆಕಾರ್ಡ್ ಮಾಡಿದ ವಿಡಿಯೋವೊಂದರಲ್ಲಿ ತಿಲಕ್ ವರ್ಮಾ ಅವರನ್ನು 'ಅಂಧೇರೆ' (ಡಾರ್ಕ್ ಒನ್) ಎಂದು ಕರೆದಿದ್ದಕ್ಕಾಗಿ ವಿವಾದಕ್ಕೆ ಸಿಲುಕಿದ ಒಂದು ದಿನದ ನಂತರ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ಹೆಸರು ಬಳಸಬೇಡಿ. ಅದಕ್ಕೆ ಮುಜುಗರ ತರುತ್ತಿದ್ದಾರೆ ಅಂತಾ ಅಭಿಮಾನಿಯೊಬ್ಬರು ಅರ್ಷದೀಪ್ ಅವರನ್ನು ಒತ್ತಾಯಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಂಗ್, ಪಂಜಾಬ್ ಗಾಗಿ ನೀನು ಏನು ಮಾಡಿದ್ದೀಯಾ? ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಗಾಗಿ ಇನ್ನೂ ಕುಟುಂಬದಿಂದ ಹಣ ಕೇಳುವ ಜನರು ಈಗ ಪಂಜಾಬ್ ಬಗ್ಗೆ ನನಗೆ ಸಲಹೆ ನೀಡುತ್ತಿದ್ದಾರೆ? ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಮಧ್ಯೆ ಅರ್ಷದೀಪ್- ತಿಲಕ್ ವರ್ಮಾ ಬಗ್ಗೆ ಮಾಜಿ ಸ್ಪೀನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅವರನ್ನು ಬ್ಯಾನ್ ಮಾಡುವಂತೆ ಬಿಸಿಸಿಐ ಒತ್ತಾಯಿಸಿದೆ. ನನ್ನನ್ನು ಯಾರು ನಂಬುತ್ತಿರಲಿಲ್ಲ. ಎಲ್ಲರೂ ನನ್ನನ್ನು ಟ್ರೋಲ್ ಮಾಡಿದ್ದರು. ಅರ್ಷದೀಪ್ ಅವರನ್ನು ಬ್ಯಾನ್ ಮಾಡಬೇಕು ಎಂದು ಶಿವರಾಮ ಕೃಷ್ಣನ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



