Chumrah: ಬೂಮ್ರಾ ಕಂಡ್ರೆ ಸೆಹ್ವಾಗ್ ಗೆ ಯಾಕಿಷ್ಟು ದ್ವೇಷ? ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್! Video
ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ 2026 ಪಂದ್ಯದಲ್ಲಿ ಕ್ರಿಕೆಟ್ ಚರ್ಚೆ ವೇಳೆಯಲ್ಲಿ ಬೂಮ್ರಾ ಅವರನ್ನು ಚೂಮ್ರಾ ಎಂದು ಸೆಹ್ವಾಗ್ ಕರೆದಿದ್ದಾರೆ. ತಕ್ಷಣ ತನ್ನ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ.

ನವದೆಹಲಿ: ವಿಶ್ವ ಶ್ರೇಷ್ಟ ಬೌಲರ್, ವೇಗಿ ಜಸ್ಪ್ರೀತ್ ಬೂಮ್ರಾ ಅವರನ್ನು ಚೂಮ್ರಾ ('Chumrah) ಎಂದು ಕರೆದ ನಂತರ ಲೆಜೆಂಡರಿ ಆಟಗಾರ ವಿರೇಂದ್ರ ಸೆಹ್ವಾಗ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಗೆ ತುತ್ತಾಗಿದ್ದಾರೆ.
ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ 2026 ಪಂದ್ಯದಲ್ಲಿ ಕ್ರಿಕೆಟ್ ಚರ್ಚೆ ವೇಳೆಯಲ್ಲಿ ಬೂಮ್ರಾ ಅವರನ್ನು ಚೂಮ್ರಾ ಎಂದು ಸೆಹ್ವಾಗ್ ಕರೆದಿದ್ದಾರೆ. ತಕ್ಷಣ ತನ್ನ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ.
ಆದರೆ, ಅವರು ಮಾತನಾಡಿರುವ ವಿಡಿಯೋ ಆಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ನೆಟ್ಟಿಗರು ತೀವ್ರ ಆಕೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಎಕ್ಸ್ ಬಳಕೆದಾರನೋರ್ವ, ಬೂಮ್ರಾ ಕಂಡ್ರೆ ಸೆಹ್ವಾಗ್ ಗೆ ಯಾಕಿಷ್ಟ ದ್ವೇಷ ಎಂದು ಕಿಡಿಕಾರಿದ್ದಾರೆ.
ಈ ಮಧ್ಯೆ ಬುಧವಾರ ಹೊಸದಾಗಿ ಪ್ರಕಟಿಸಿದ ಟೆಸ್ಟ್ ಬೌಲರ್ rankings ಪಟ್ಟಿಯಲ್ಲಿ ಬೂಮ್ರಾ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಬ್ಯಾಟರ್ ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶುಭ್ ಮನ್ ಗಿಲ್ ಕ್ರಮವಾಗಿ 8 ಮತ್ತು 9ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ 880 ಪಾಯಿಂಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಬೌಲರ್ ಪಟ್ಟಿಯಲ್ಲಿ 879 ಪಾಯಿಂಟ್ ಗಳೊಂದಿಗೆ ಬೂಮ್ರಾ ಅಗ್ರಸ್ಥಾನದಲ್ಲಿದ್ದು, ಮೊಹಮ್ಮದ್ ಸಿರಾಜ್ 12, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಕ್ರಮವಾಗಿ 14 ಮತ್ತು 15ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ಕ್ರಮವಾಗಿ ಎರಡು ಮತ್ತು ನಾಲ್ಕನೇ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್ ನ ಮ್ಯಾಟ್ ಹೆನ್ರಿ ಮೂರನೇ ಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



