IPL 2026: 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ; ಪ್ಲೇಆಫ್ ರೇಸ್‌ನಲ್ಲಿ RCB ಇನ್ನೂ 'ಸುರಕ್ಷಿತವಲ್ಲ'; ಕಾರಣ ಇಲ್ಲಿದೆ..
ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್‌ನಂತಹ ಇತರ ತಂಡಗಳು ಸಹ 18 ಅಂಕಗಳನ್ನು ತಲುಪುವ ಅವಕಾಶವಿದೆ. ಇಂತಹ ಸಂದರ್ಭದಲ್ಲಿ, ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ನೆಟ್ ರನ್ ರೇಟ್ (ಎನ್‌ಆರ್‌ಆರ್) ಮುಖ್ಯವಾಗುತ್ತದೆ.
ಬುಧವಾರ ರಾಯ್‌ಪುರದಲ್ಲಿ ನಡೆದ ಐಪಿಎಲ್ 2026ರ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಆರು ವಿಕೆಟ್‌ಗಳ ಸಮಗ್ರ ಜಯ ಸಾಧಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ವಿರಾಟ್ ಕೊಹ್ಲಿ ಅವರ ಅಜೇಯ 105 ರನ್‌ಗಳ ನೆರವಿನಿಂದ ತಂಡ ಗೆಲುವಿನತ್ತ ಮುನ್ನಡೆಯಿತು. ಆರ್‌ಸಿಬಿ ಇದೀಗ ಆಡಿರುವ 12 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸುವ ಮೂಲಕ 16 ಅಂಕಗಳೊಂದಿಗೆ ಪ್ಲೇಆಫ್ ತಲುಪುವ ಅವರ ಕನಸಿಗೆ ಇದು ದೊಡ್ಡ ಉತ್ತೇಜನ ನೀಡಿತು. ಲೀಗ್ ಹಂತದಲ್ಲಿ ಇದೀಗ ಕೇವಲ 2 ಪಂದ್ಯಗಳು ಬಾಕಿ ಉಳಿದಿದ್ದು, ಅದರಲ್ಲಿ ಒಂದರಲ್ಲಿ ಗೆಲುವು ಸಾಧಿಸಿದರೂ ಟಾಪ್ 4 ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಆರ್‌ಸಿಬಿ ತಮ್ಮ ಮುಂದಿನ ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಆಡಬೇಕಿದ್ದು, ಅವುಗಳಲ್ಲಿ ಸೋತರೆ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್‌ನಂತಹ ಇತರ ತಂಡಗಳು ಸಹ 18 ಅಂಕಗಳನ್ನು ತಲುಪುವ ಅವಕಾಶವಿದೆ. ಇಂತಹ ಸಂದರ್ಭದಲ್ಲಿ, ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ನೆಟ್ ರನ್ ರೇಟ್ (ಎನ್‌ಆರ್‌ಆರ್) ಮುಖ್ಯವಾಗುತ್ತದೆ. ಇದು ತಂಡವು ಎಷ್ಟು ಬೇಗನೆ ಸ್ಕೋರ್ ಮಾಡುತ್ತದೆ ಮತ್ತು ಎದುರಾಳಿಗಳನ್ನು ನಿರ್ಬಂಧಿಸುತ್ತದೆ ಎಂಬುದನ್ನು ಅವಲಂಭಿಸಿರುತ್ತದೆ. ಆರ್‌ಸಿಬಿಯ ನೆಟ್ ರನ್ ರೇಟ್ ಇತರ ತಂಡಗಳಿಗಿಂತ ಕಡಿಮೆಯಿದ್ದರೆ, ಪ್ಲೇಆಫ್ ಅವಕಾಶ ಕಳೆದುಕೊಳ್ಳಬಹುದು.
ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಸಹ 18 ಅಂಕಗಳ ಗಡಿಯನ್ನು ತಲುಪಬಹುದು ಅಥವಾ ದಾಟಬಹುದು. ಕೆಕೆಆರ್ ವಿಷಯಕ್ಕೆ ಬಂದರೆ, ಅವರು ತಮ್ಮ ಉಳಿದ 3 ಪಂದ್ಯಗಳನ್ನು ಗೆಲ್ಲಬೇಕು ಮತ್ತು ಇದು ಅವರ ಅಂಕಗಳ ಸಂಖ್ಯೆಯನ್ನು 15ಕ್ಕೆ ಏರಿಸುತ್ತದೆ. ಸದ್ಯ ಅವರಿನ್ನೂ ಪ್ಲೇಆಫ್ ರೇಸ್‌ನಲ್ಲಿದ್ದರೂ ಕೂಡ ಟಾಪ್ 4 ರಲ್ಲಿ ಸ್ಥಾನ ಪಡೆಯಲು ಸಾಕಷ್ಟು ಫಲಿತಾಂಶಗಳ ಅಗತ್ಯವಿದೆ.
ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರೂ, ಅಗ್ರ 4 ರಲ್ಲಿ ಸ್ಥಾನ ಪಡೆಯುವ ಹೆಚ್ಚಿನ ಸಾಧ್ಯತೆ ಗುಜರಾತ್ ಟೈಟಾನ್ಸ್‌ಗೆ ಇದೆ.
ಸ್ಟಾರ್ ಸ್ಪೋರ್ಟ್ಸ್ ಪ್ರಕಾರ, ಶುಭಮನ್ ಗಿಲ್ ನೇತೃತ್ವದ ತಂಡ ಪ್ಲೇಆಫ್ ತಲುಪುವ ಸಾಧ್ಯತೆ ಶೇ 94.8 ರಷ್ಟಿದೆ. ಶೇ 92.6ರಷ್ಟು ಅವಕಾಶದೊಂದಿಗೆ ಆರ್‌ಸಿಬಿ ಎರಡನೇ ಸ್ಥಾನದಲ್ಲಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ (64.7) ಮತ್ತು ಪಂಜಾಬ್ ಕಿಂಗ್ಸ್ (62.8) ನಂತರದ ಸ್ಥಾನದಲ್ಲಿವೆ.
ಚೆನ್ನೈ ಸೂಪರ್ ಕಿಂಗ್ಸ್ ಶೇ 41.7 ರಷ್ಟು ಅವಕಾಶದೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ ರಾಯಲ್ಸ್ ತಂಡವು ಸದ್ಯ ಶೇ 40.6ರಷ್ಟು ಅವಕಾಶ ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

