ಕ್ರಿಕೆಟ್

IPL 2026: ಕೇವಲ 43 ರನ್ ಗಳಿಸಿರುವ RCB ಸ್ಟಾರ್ ಬ್ಯಾಟರ್‌ನನ್ನು ವೈಭವ್ ಸೂರ್ಯವಂಶಿಗೆ ಹೋಲಿಸಿದ ಎಬಿ ಡಿ ವಿಲಿಯರ್ಸ್!

ಬೆಂಗಳೂರು ಫ್ರಾಂಚೈಸಿ ಭಾರಿ ನಿರೀಕ್ಷೆಗಳೊಂದಿಗೆ ಖರೀದಿಸಿದ ಇಂಗ್ಲಿಷ್ ಆರಂಭಿಕ ಆಟಗಾರ ಬೆಥೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

IPL 2026: ಕೇವಲ 43 ರನ್ ಗಳಿಸಿರುವ RCB ಸ್ಟಾರ್ ಬ್ಯಾಟರ್‌ನನ್ನು ವೈಭವ್ ಸೂರ್ಯವಂಶಿಗೆ ಹೋಲಿಸಿದ ಎಬಿ ಡಿ ವಿಲಿಯರ್ಸ್!
ವೈಭವ್ ಸೂರ್ಯವಂಶಿ - ಜೇಕಬ್ ಬೆಥೆಲ್ — Photo | AFP
Published On :

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸ್ಥಳೀಯವಾಗಿ ಮಾತ್ರವಲ್ಲದೆ ವಿದೇಶಿ ಯುವ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಿದೆ. ಇತ್ತೀಚಿನ ವರ್ಷಗಳಲ್ಲಿ, ಅನೇಕ ಕ್ರಿಕೆಟಿಗರು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಅಂತರರಾಷ್ಟ್ರೀಯ ವೇದಿಕೆಗೆ ಎಂಟ್ರಿ ನೀಡಿದ್ದಾರೆ ಮತ್ತು ಐಕಾನ್‌ಗಳಾಗಿ ಮಾರ್ಪಟ್ಟಿದ್ದಾರೆ. ರಾಜಸ್ಥಾನ್ ರಾಯಲ್ಸ್‌ನ ಬ್ಯಾಟಿಂಗ್ ಸೆನ್ಶೇಷನ್ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಕೂಡ ಈಗಾಗಲೇ ತಮ್ಮ ಆಕರ್ಷಕ ಬ್ಯಾಟಿಂಗ್‌ನಿಂದ ಮೋಡಿ ಮಾಡಿದ್ದು, ಐಪಿಎಲ್ ಐಕಾನ್ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಯುವ ಆಟಗಾರ ಜೇಕಬ್ ಬೆಥೆಲ್ ಅವರೊಂದಿಗೆ ಹೋಲಿಸಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವೊಂದರಲ್ಲಿ ಮಾತನಾಡಿದ ಡಿವಿಲಿಯರ್ಸ್, ಬೆಂಗಳೂರು ಫ್ರಾಂಚೈಸಿ ಭಾರಿ ನಿರೀಕ್ಷೆಗಳೊಂದಿಗೆ ಖರೀದಿಸಿದ ಇಂಗ್ಲಿಷ್ ಆರಂಭಿಕ ಆಟಗಾರ ಬೆಥೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ನಾನು ಅವರ ಹೆಸರನ್ನು ಕೆಲವು ಬಾರಿ ಉಲ್ಲೇಖಿಸಿದ್ದೇನೆ. ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ. ಅವರು ಅದ್ಭುತ ಆಟಗಾರ. ಅವರ ಮುಂದೆ ಸಾಕಷ್ಟು ಅಡೆತಡೆಗಳು ಬರಬಹುದು. ನನಗೆ ತುಂಬಾ ವಿಭಿನ್ನ ವಯಸ್ಸಿನ ಇಬ್ಬರು ನೆನಪಾಗುತ್ತಾರೆ. ಆದರೆ, ಅವರಿಬ್ಬರೂ ಎಡಗೈ ಬ್ಯಾಟರ್‌ಗಳು. ನನಗೆ ವೈಭವ್ ಸೂರ್ಯವಂಶಿ ನೆನಪಾಗುತ್ತಾರೆ. ಅವರು ಅದ್ಭುತ ಪ್ರತಿಭೆ, ಅವರ ಮುಂದೆ ದೊಡ್ಡ ಭವಿಷ್ಯವಿದೆ. ಕ್ರಿಕೆಟ್ ಜಗತ್ತಿನ ಉಜ್ವಲ ಸೂಪರ್‌ಸ್ಟಾರ್‌ ಆಗಿರುವ ಅವರು ಕಲಿಯಲು ಸಾಕಷ್ಟಿದೆ ಮತ್ತು ದಾಟಲು ಇನ್ನೂ ಸಾಕಷ್ಟು ಅಡೆತಡೆಗಳು ಮುಂದಿವೆ' ಎಂದು ಅವರು ಹೇಳಿದರು.

ಬೆಥೆಲ್ ಹೊಂದಿರುವ ಸಾಮರ್ಥ್ಯವನ್ನು ಅಲ್ಲಗಳೆಯುವಂತಿಲ್ಲವಾದರೂ, ಡಿವಿಲಿಯರ್ಸ್ ಅವರನ್ನು ವೈಭವ್ ಸೂರ್ಯವಂಶಿ ಜೊತೆ ಹೋಲಿಸುವುದು ಸ್ವಲ್ಪ ಅಕಾಲಿಕವೆನಿಸುತ್ತದೆ. ಏಕೆಂದರೆ, ಅವರು ಆರ್‌ಸಿಬಿ ಪರ 4 ಪಂದ್ಯಗಳಲ್ಲಿ ಇಲ್ಲಿಯವರೆಗೆ ಕೇವಲ 43 ರನ್‌ಗಳನ್ನು ಗಳಿಸಿದ್ದಾರೆ.

'ಜೇಕಬ್ ಬೆಥೆಲ್ ಅವರು ವೈಭವ್ ಸೂರ್ಯವಂಶಿ ಅವರಷ್ಟು ಚಿಕ್ಕವನಲ್ಲ. ಆದರೆ, ಅವರು ಬಹುತೇಕ ಇದೇ ರೀತಿಯ ಅರ್ಹತೆಗಳನ್ನು ಹೊಂದಿದ್ದಾರೆ. ಅವರು ಸೂಪರ್‌ ಪ್ರತಿಭೆ, ಆದರೆ ಇನ್ನೂ ಕಲಿಯಬೇಕಾದದ್ದು ಸಾಕಷ್ಟಿದೆ. ಕಾಲಾನಂತರದಲ್ಲಿ ಅವರು ಅನುಭವವನ್ನು ಪಡೆದ ನಂತರ, ಆ ಇಬ್ಬರು ಆಟಗಾರರನ್ನು ತಡೆಯಲಾಗದು ಎಂದು ನಾನು ಭಾವಿಸುತ್ತೇನೆ. ಜೇಕಬ್ ಆರ್‌ಸಿಬಿಯೊಂದಿಗೆ ಉಳಿಯುತ್ತಾರೆ ಎಂದು ಆಶಿಸುತ್ತೇನೆ. ಮುಂಬರುವ ಹಲವು ವರ್ಷಗಳ ಕಾಲ ಅವರನ್ನು ತಂಡದಲ್ಲಿಟ್ಟುಕೊಳ್ಳುವ ಯೋಜನೆಗಳನ್ನು ಅವರು ಹೊಂದಿರುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಭವಿಷ್ಯದಲ್ಲಿ ಆರ್‌ಸಿಬಿಗೆ ಸಾಕಷ್ಟು ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ಅವರಲ್ಲಿದೆ ಎಂದು ನಾನು ನಂಬುತ್ತೇನೆ' ಎಂದು ಅವರು ಹೇಳಿದರು.

ಐಪಿಎಲ್ 2025ರ ಹರಾಜಿನಲ್ಲಿ ಬೆಥೆಲ್‌ಗಾಗಿ ನಡೆದ ಬಿಡ್ಡಿಂಗ್ ಯುದ್ಧದಲ್ಲಿ ಆರ್‌ಸಿಬಿ ಅವರನ್ನು ₹2.60 ಕೋಟಿಗೆ ತನ್ನದಾಗಿಸಿಕೊಂಡಿತು. ಗಾಯದಿಂದಾಗಿ ಫಿಲ್ ಸಾಲ್ಟ್ ಹೊರಗುಳಿದಿರುವುದರಿಂದ ಸದ್ಯ ಬೆಥೆಲ್ ಅವರು ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಸದ್ಯ ಅವರ ಬ್ಯಾಟ್‌ನಿಂದ ಉತ್ತಮ ಪ್ರದರ್ಶನಗಳು ಮೂಡಿಬಂದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.