ಕ್ರಿಕೆಟ್

IPL 2026: ಸಾಯಿ ಸುದರ್ಶನ್ ಅಬ್ಬರ; ಪಂಜಾಬ್ ವಿರುದ್ಧ ಗುಜರಾತ್ ಗೆ 4 ವಿಕೆಟ್ ಗೆಲುವು

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಆರಂಭಿಕ ಆಟಗಾರರಾದ ಪ್ರಿಯಾಂಶ್ ಅರ್ಯ ಕೇವಲ 2 ರನ್ ಗಳಿಸಿ ಮೊಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ ಸಿಂಧು ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

IPL 2026: ಸಾಯಿ ಸುದರ್ಶನ್ ಅಬ್ಬರ; ಪಂಜಾಬ್ ವಿರುದ್ಧ ಗುಜರಾತ್ ಗೆ 4 ವಿಕೆಟ್ ಗೆಲುವು
ಗೆಲುವಿನ ಸಂಭ್ರಮದಲ್ಲಿ ಗುಜರಾತ್ ತಂಡ
Published On :

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್ ನ 46 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ 4 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿತು. 164 ರನ್ ಗಳನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಆರಂಭಿಕ ಆಟಗಾರರಾದ ಪ್ರಿಯಾಂಶ್ ಅರ್ಯ ಕೇವಲ 2 ರನ್ ಗಳಿಸಿ ಮೊಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ ಸಿಂಧು ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಬಳಿಕ ಪ್ರಭಾಸಿಮ್ರಾನ್ ಸಿಂಗ್ 15 ರನ್ ಗಳಿಸಿದಾಗ ರಬಾಡ ಬೌಲಿಂಗ್ ನಲ್ಲಿ ಸುಥಾರ್ ಗೆ ಕ್ಯಾಚ್ ನೀಡಿ ಔಟ್ ಆದರು. ಕೂಪರ್ ಶೂನ್ಯಕ್ಕೆ ಔಟ್ ಆದರೆ, ನಾಯಕ ಶ್ರೇಯಸ್ ಅಯ್ಯರ್ 19 ರನ್ ಗಳಿಸಿದಾಗ ಹೋಲ್ಡರ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು.

ಇನ್ನೂ ಸೂರ್ಯಂಶ್ ಶೆಡ್ಜ್ 57 ಹಾಗೂ ಮಾರ್ಕಸ್ ಸ್ಟೊಯ್ನಿಸ್ 40, ಮಾರ್ಕೊ ಜಾಂಸೆನ್ 20 ರನ್ ಗಳಿಸಿದರು. ವಿಜಯ್ ಕುಮಾರ್ ವೈಶಾಕ್. ಆರ್ಶದೀಪ್ ಸಿಂಗ್ ಕೇವಲ 2 ರನ್ ಗಳಿಸುವುದರೊಂದಿಗೆ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 163 ರನ್ ಗಳಿಸಿತು. ಗುಜರಾತ್ ಟೈಟನ್ಸ್ ಪರ ಜಾಸನ್ ಹೊಲ್ಡರ್ 4 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ರಬಾಡ ತಲಾ ಎರಡು ವಿಕೆಟ್ ಪಡೆದರು, ರಶೀದ್ ಖಾನ್ ಒಂದು ವಿಕೆಟ್ ಗಳಿಸಿದರು.

ಪಂಜಾಬ್ ಕಿಂಗ್ಸ್ ನೀಡಿದ 163 ರನ್ ಗಳ ಗುರಿ ಬೆನ್ನಟ್ಟಿದ್ದ ಗುಜರಾತ್ ಟೈಟನ್ಸ್ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಆಕರ್ಷಕ 57 ರನ್ ಗಳಿಸಿದರೆ ನಾಯಕ ಶುಭ್ ಮನ್ ಗಿಲ್ ಕೇವಲ 5 ರನ್ ಗಳಿಸಿ, ಅರ್ಶದೀಪ್ ಸಿಂಗ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟ್ ಆದರು. ಜೊಸ್ ಬಟ್ಲರ್ 25, ನಿಶಾಂತ್ ಸಿಂಧು 15, ವಾಷಿಂಗ್ಟನ್ ಸುಂದರ್ 32 ರನ್ ಗಳಿಸಿದರು.

ಉಳಿದಂತೆ ರಾಹುಲ್ ತೆವಾಟಿಯಾ ಹಾಗೂ ಜಾಸನ್ ಹೋಲ್ಡರ್ 5 ರನ್ ಗಳಿಸಿ ಔಟ್ ಆದರು. ಬಳಿಕ ಅರ್ಷದ್ ಖಾನ್ 8 ರನ್ ಗಳಿಸುವುದರೊಂದಿಗೆ ಗುಜರಾತ್ ಟೈಟನ್ 19.5 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ, ಗೆಲುವಿನ ನಗೆ ಬೀರಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.