ಕ್ರಿಕೆಟ್

IPL 2026: CSK ವೇಗಿ ರಾಮಕೃಷ್ಣ ಘೋಷ್ ಐಪಿಎಲ್‌ನಿಂದ ಔಟ್!

28 ವರ್ಷದ ರಾಮಕೃಷ್ಣ ಘೋಷ್ ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ್ದರು. ಈ ಪಂದ್ಯದಲ್ಲಿ ರಾಮಕೃಷ್ಣ ಘೋಷ್, ಮುಂಬೈ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಪಡೆದಿದ್ದರು.

IPL 2026: CSK ವೇಗಿ ರಾಮಕೃಷ್ಣ ಘೋಷ್  ಐಪಿಎಲ್‌ನಿಂದ ಔಟ್!
ವೇಗಿ ರಾಮಕೃಷ್ಣ ಘೋಷ್
Published On :

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಗಾಯಾಳುಗಳ ಪಟ್ಟಿ ಬೆಳೆಯುತ್ತಲೇ ಇದೆ. ಇದೀಗ ಆಲ್‌ರೌಂಡರ್ ರಾಮಕೃಷ್ಣ ಘೋಷ್ ಗಾಯಗೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ಬಲಗಾಲಿನ ಮೂಳೆ ಮುರಿತಕ್ಕೊಳಗಾದ ನಂತರ ಘೋಷ್ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಸಿಎಸ್ ಕೆ ಭಾನುವಾರ ದೃಢಪಡಿಸಿದೆ. ಈ ವಿಚಾರವನ್ನು ಸಿಎಸ್​ಕೆ ಫ್ರಾಂಚೈಸಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

28 ವರ್ಷದ ರಾಮಕೃಷ್ಣ ಘೋಷ್ ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ್ದರು. ಈ ಪಂದ್ಯದಲ್ಲಿ ರಾಮಕೃಷ್ಣ ಘೋಷ್, ಮುಂಬೈ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಪಡೆದಿದ್ದರು.

ಮೊದಲ ಪಂದ್ಯದಲ್ಲೇ ಸ್ಟಾರ್ ಬ್ಯಾಟರ್​ನ ವಿಕೆಟ್​ ಕಿತ್ತು ಸಂಭ್ರಮಿಸಿದ್ದ ರಾಮಕೃಷ್ಣ ಅದೇ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ಈ ಪಂದ್ಯದ ಸಮಯದಲ್ಲಿ ರಾಮಕೃಷ್ಣ ಘೋಷ್ ಅವರ ಬಲಗಾಲಿನ ಮೂಳೆ ಮುರಿತಗೊಂಡಿದೆ ಎಂದು ಸಿಎಸ್​ಕೆ ಫ್ರಾಂಚೈಸಿ, ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ಈ ಗಾಯದಿಂದಾಗಿ ಅವರು ಈ ಆವೃತ್ತಿಯಲ್ಲಿ ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

ಈ ಪಂದ್ಯದಲ್ಲಿ ಮೂರು ಓವರ್‌ಗಳನ್ನು ಬೌಲಿಂಗ್ ಮಾಡಿದ ರಾಮಕೃಷ್ಣ ಘೋಷ್ ಒಟ್ಟು 24 ರನ್‌ಗಳನ್ನು ನೀಡಿ ಸೂರ್ಯಕುಮಾರ್ ಯಾದವ್ ರೂಪದಲ್ಲಿ ಏಕೈಕ ವಿಕೆಟ್ ಪಡೆದಿದ್ದರು. ಮುಂಬರುವ ಪಂದ್ಯಗಳಲ್ಲಿ ಅವರು ಸಿಎಸ್‌ಕೆ ಬೌಲಿಂಗ್ ದಾಳಿಯನ್ನು ಬಲಪಡಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ, ಅವರ ಚೊಚ್ಚಲ ಪಂದ್ಯದ ಒಂದು ದಿನದ ನಂತರ ಈ ಗಾಯವು ಅವರಿಗೆ ಮತ್ತು ತಂಡಕ್ಕೆ ಭಾರಿ ನಿರಾಶೆಯನ್ನುಂಟುಮಾಡಿದೆ ಎಂದು CSK ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಪಂದ್ಯದ ನಂತರ ಹೇಳಿದರು.

ಗಾಯದ ಕಾರಣದಿಂದಾಗಿ ಐಪಿಎಲ್​ನಿಂದ ಹೊರಬಿದ್ದ ಮೊದಲ ಸಿಎಸ್​ಕೆ ಆಟಗಾರ ರಾಮಕೃಷ್ಣ ಘೋಷ್ ಅಲ್ಲ. ಅವರಿಗೂ ಮುನ್ನಾ ನಾಥನ್ ಎಲ್ಲಿಸ್, ಆಯುಷ್ ಮ್ಹಾತ್ರೆ ಮತ್ತು ಖಲೀಲ್ ಅಹ್ಮದ್ ಗಾಯದಿಂದಾಗಿ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಇವರುಗಳ ಜೊತೆಗೆ ಅನುಭವಿ ಬ್ಯಾಟ್ಸ್‌ಮನ್ ಎಂಎಸ್ ಧೋನಿ ಕೂಡ ಗಾಯದಿಂದಾಗಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಧೋನಿ ಐಪಿಎಲ್​ನಿಂದ ಹೊರಬಿದ್ದಿಲ್ಲವಾದರೂ ಅವರು ಆಡುವುದು ಕೂಡ ಅನುಮಾನವಾಗಿದೆ. ಇದೆಲ್ಲದರ ನಡುವೆ ರಾಮಕೃಷ್ಣ ಗಾಯದಿಂದ ಐಪಿಎಲ್ ತೊರೆದಿರುವುದು ಸಿಎಸ್​ಕೆಗೆ ನುಂಗಲಾರದ ತುತ್ತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.