'Pink Looks Good On Me': ಗನ್ ಶಾಟ್ ಸೆಲೆಬ್ರೇಷನ್; CKS ಮ್ಯಾನೇಜ್ಮೆಂಟ್ ಗೆ ಜಡೇಜಾ ಹೇಳಿದ್ದೇನು? Video
ಎಂಟನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ, ಹಾಕಿದ ಮೊದಲ ಓವರ್ನ ಎರಡನೇ ಬಾಲ್ನಲ್ಲಿ ಸರ್ಫರಾಜ್ ಖಾನ್ ಅವರನ್ನು ಔಟ್ ಮಾಡಿದರು. 12 ಬಾಲ್ಗೆ 17 ರನ್ ಬಾರಿಸಿ ಸರ್ಫರಾಜ್ ಪೆವಿಲಿಯನ್ ಸೇರಿದರು.

ಗುವಾಹಟಿ: ಗುವಾಹಟಿಯ ACA ಮೈದಾನದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ 2026 ಪಂದ್ಯದಲ್ಲಿ ಚೆನ್ನೆ ಸೂಪರ್ ಕಿಂಗ್ಸ್ ವಿರುದ್ಧ ಪ್ರಭಾವಶಾಲಿ ಬೌಲಿಂಗ್ ಮಾಡಿದ ಅನುಭವಿ ಎಡಗೈ ಸ್ಪಿನರ್, ಆಲ್‌ರೌಂಡರ್ ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದು ರಾಜಸ್ಥಾನ ರಾಯಲ್ಸ್ ಗೆಲುವಿನಲ್ಲಿ ಕೊಡುಗೆ ನೀಡಿದರು.
ಎಂಟನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ, ಹಾಕಿದ ಮೊದಲ ಓವರ್ನ ಎರಡನೇ ಬಾಲ್ನಲ್ಲಿ ಸರ್ಫರಾಜ್ ಖಾನ್ ಅವರನ್ನು ಔಟ್ ಮಾಡಿದರು. 12 ಬಾಲ್ಗೆ 17 ರನ್ ಬಾರಿಸಿ ಸರ್ಫರಾಜ್ ಪೆವಿಲಿಯನ್ ಸೇರಿದರು.
ನಂತರ ಕಣಕ್ಕೆ ಇಳಿದ ಶಿವಂ ದುಬೆ ಕೂಡಾ ಸಿಕ್ಸರ್ ಹೊಡೆಯಲು ಹೋಗಿ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಒಂದೇ ಓವರ್ ಅಲ್ಲಿ ಎರಡು ವಿಕೆಟ್ ತೆಗೆದು ಜಡೇಜಾ ಮಿಂಚಿದರು.
ಈ ವೇಳೆ ಜಡೇಜಾ ಭರ್ಜರಿಯಾಗಿ ಸೆಲೆಬ್ರೇಷನ್ ಕೂಡ ಮಾಡಿದರು. ಗನ್ ಪೋಸ್ ಕೊಟ್ಟು ಸೆಲೆಬ್ರೇಷನ್ ಮಾಡುವ ಮೂಲಕ CKS ಮ್ಯಾನೇಜ್ಮೆಂಟ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಪಂದ್ಯದ ನಂತರ ಮಾತನಾಡಿದ ರವೀಂದ್ರ ಜಡೇಜಾ, ನನಗೆ ಗುಲಾಬಿ ಬಣ್ಣವು ಚೆನ್ನಾಗಿ ಕಾಣುತ್ತದೆ ಎಂದುಭಾವಿಸುತ್ತೇನೆ. ಶಿವಂ ದುಬೆ ಬಹಳ ಸಮಯದಿಂದ ನನಗೆ ತಿಳಿದಿದೆ.ಅವರಿಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ್ದೇನೆ, ಆದ್ದರಿಂದ ಅವರು ಸ್ಪಿನ್ನರ್‌ಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನಾನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



