IPL 2026: ಅಂಪೈರ್ ಜೊತೆ Heinrich Klaasen ವಾಗ್ವಾದ; 'ಖಚಿತತೆಯೇ ಇಲ್ಲದ ಮೇಲೆ ತೀರ್ಪು ಹೇಗೆ ಕೊಟ್ರಿ' ಎಂದ Michael Vaughan
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹಾಲಿ ವರ್ಷದ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

ಬೆಂಗಳೂರು: ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಣ ಪಂದ್ಯದಲ್ಲಿ ಹೆನ್ರಿಚ್ ಕ್ಲಾಸೆನ್ ಅವರ ಕ್ಯಾಚ್ ವಿವಾದಕ್ಕೆ ಕಾರಣವಾಗಿದೆ.
ಹೌದು.. ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹಾಲಿ ವರ್ಷದ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಆರ್ ಸಿಬಿಯ ಫಿಲ್ ಸಾಲ್ಟ್ ಪಡೆದ ಕ್ಯಾಚ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಹೈದರಾಬಾದ್ ತಂಡದ ಹೆನ್ರಿಚ್ ಕ್ಲಾಸನ್ ಭಾರಿಸಿದ ಚೆಂಡನ್ನು ಬೌಂಡರಿ ಲೈನ್ ಬಳಿ ಆರ್ ಸಿಬಿಯ ಫಿಲ್ ಸಾಲ್ಟ್ ಅಧ್ಭುತವಾಗಿ ಹಾರಿ ಹಿಡಿದಿದ್ದರು. ಇದೇ ಕ್ಯಾಚ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಕ್ಯಾಚ್ ಪಡೆಯುವಾಗ ಫಿಲ್ ಸಾಲ್ಟ್ ಬೌಂಡರಿ ಲೈನ್ ಟಚ್ ಮಾಡಿದ್ದರು ಎಂಬ ವಾದಗಳು ಕೇಳಿಬರುತ್ತಿವೆ. ಅದು ನ್ಯಾಯಸಮ್ಮತವೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಮೊದಲ ಪಂದ್ಯದಲ್ಲೇ ಕ್ಯಾಚ್ ವಿವಾದ
ನಿನ್ನೆಯ ಪಂದ್ಯದಲ್ಲಿ ಜೇಕಬ್ ಡಫಿ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ್ದ ಎಸ್ಆರ್ಎಚ್ ತಂಡ, ಬಹುಬೇಗ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ವೇಳೆ ಇಶಾನ್ ಕಿಶನ್ ಅವರ ಜೊತೆ ನಾಲ್ಕನೇ ವಿಕೆಟ್ಗೆ 53 ಎಸೆತಗಳಲ್ಲಿ 97 ರನ್ಗಳ ಜೊತೆಯಾಟವನ್ನು ಆಡಿದ ಹೆನ್ರಿಚ್ ಕ್ಲಾಸೆನ್ 31 ರನ್ಗಳನ್ನು ಗಳಿಸಿದ್ದರು. ಆದರೆ, 14ನೇ ಓವರ್ನ ಮೊದಲನೇ ಎಸೆತದಲ್ಲಿ ರೊಮ್ಯಾರಿಯೊ ಶೆಫರ್ಡ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಹೋಗಿ ಬೌಂಡರಿ ಲೈನ್ ಬಳಿ ಫಿಲ್ ಸಾಲ್ಟ್ಗೆ ಕ್ಯಾಚ್ ಕೊಟ್ಟರು.
ಆಗಿದ್ದೇನು?
ದಕ್ಷಿಣ ಆಫ್ರಿಕಾ ಆಟಗಾರ ಕ್ಲಾಸೆನ್ ಪುಲ್ ಶಾಟ್ ಹೊಡೆದರು. ಇದು ಸಿಕ್ಸರ್ ಗೆ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಮಿಡ್ ವಿಕೆಟ್ ಬೌಂಡರಿ ಬಳಿ ಫಿಲ್ ಸಾಲ್ಟ್ ಅದ್ಭುತವಾಗಿ ಹಾರಿ ಅದನ್ನು ಹಿಡಿತಕ್ಕೆ ಪಡೆದರು. ಅವರು ಬೌಂಡರಿ ಲೈನ್ಗೆ ಸನಿಹದಲ್ಲಿ ಕ್ಯಾಚ್ ಪಡೆದು ನೆಲಕ್ಕೆ ಉರುಳಿದರು.
ಈ ವೇಳೆ ಅವರು ಬೌಂಡರಿ ಲೈನ್ಗೆ ತಾಗಿರುವ ರೀತಿ ಕಂಡು ಬರುತ್ತಿದ್ದರು. ಇದನ್ನು ಗಮನಿಸಿದ ಫೀಲ್ಡ್ ಅಂಪೈರ್ಗಳು ಕೂಡ ಗೊಂದಲಕ್ಕೆ ಒಳಗಾದರು ಹಾಗೂ ತೀರ್ಪಿಗಾಗಿ ಮೂರನೇ ಅಂಪೈರ್ ಮೋರೆ ಹೋದರು. ಮೂರನೇ ಅಂಪೈರ್ ಹಲವು ಬಾರಿ ವಿಡಿಯೊ ರೀಪ್ಲೆ ನೋಡುವ ಮೂಲಕ ಫಿಲ್ ಸಾಲ್ಟ್ ಪಡೆದ ಕ್ಯಾಚ್ ನ್ಯಾಯಯುತವಾಗಿದೆ ಎಂದು ತೀರ್ಪು ನೀಡಿದರು.
ಅಂಪೈರ್ ವಿರುದ್ಧ ಕ್ಲಾಸೆನ್ ಆಕ್ರೋಶ
ಅತ್ತ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಲೇ ಹೆನ್ರಿಚ್ ಕ್ಲಾಸೆನ್ಗೆ ಈ ತೀರ್ಪು ತೃಪ್ತಿ ನೀಡಲಿಲ್ಲ. ಅವರು ಡ್ರೆಸ್ಸಿಂಗ್ ರೂಂಗೆ ತೆರಳುವ ಹಾದಿಯಲ್ಲಿ ಎದುರಾದ ನಾಲ್ಕನೇ ಅಂಪೈರ್ ಬಳಿ ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ವಿವಿಧ ಭಂಗಿಗಳಲ್ಲಿ ಕ್ಯಾಚ್ ಅನ್ನು ಪರಿಶೀಲಿಸಬೇಕಾಗಿತ್ತು ಎಂಬುದು ದಕ್ಷಿಣ ಆಫ್ರಿಕಾ ಆಟಗಾರನ ವಾದವಾಗಿತ್ತು.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲ ಅಭಿಮಾನಿಗಳು, ಸಾಲ್ಟ್ ಅವರ ಕಾಲು ಬೌಂಡರಿ ಲೈನ್ಗೆ ತಗುಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಕಾಲು ಬೌಂಡರಿ ಲೈನ್ಗೆ ತಾಗಿಲ್ಲ, ಅದು ನೆರಳು ಎಂದು ಹೇಳುತ್ತಿದ್ದಾರೆ.
ಖಚಿತತೆಯೇ ಇಲ್ಲದ ಮೇಲೆ ತೀರ್ಪು ಹೇಗೆ ಕೊಟ್ರಿ' ಎಂದ Michael Vaughan
ಏತನ್ಮಧ್ಯೆ, ಇಂಗ್ಲೆಂಡ್ನ ಮಾಜಿ ನಾಯಕ ಮೈಕೆಲ್ ವಾನ್ ಕೂಡ ಈ ವಿವಾದಾತ್ಮಕ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀರ್ಪಿನ ಕುರಿತು ಖಚಿತತೆಯೇ ಇಲ್ಲ ಎಂದ ಮೇಲೆ ಔಟ್ ಎಂದು ತೀರ್ಪು ಹೇಗೆ ಕೊಟ್ಟಿರಿ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ವಾನ್, 'ನನಗೆ ಕಾಲು ಬೌಂಡರಿ ಸ್ಪಂಜನ್ನು ಮುಟ್ಟಿದಂತೆ ಕಾಣುತ್ತಿತ್ತು... ಅದು ಆರ್ಸಿಬಿಗೆ ದೊಡ್ಡ ಕರೆ .. #IPL2026 .. ನೀವು ಅದನ್ನು ಹೇಗೆ ನೀಡಬಹುದು ಎಂದು ಖಚಿತವಿಲ್ಲ ಮತ್ತು ಪಾದದ ಯಾವುದೇ ಭಾಗವು ಸ್ಪಂಜನ್ನು ಮುಟ್ಟಲಿಲ್ಲ ಎಂದು ಸಂಪೂರ್ಣವಾಗಿ ಖಚಿತವಾಗಿರಿ.. ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



