ಪ್ರಬುದ್ಧತೆ ಅನ್ನೋದೇ ಇಲ್ಲ.. ಸ್ಕೂಲ್ ಮಕ್ಕಳು ಇದ್ದಾರೆ ಇಲ್ಲಿ: PSL ಸುದ್ದಿಗೋಷ್ಠಿ ವೇಳೆ ಪಾಕ್ ಆಟಗಾರರ ವಿರುದ್ಧ David Warner ಕಿಡಿ! Video
2026ರ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ (PSL) ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಕರಾಚಿ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಆ ತಂಡದ ನಾಯಕರೂ ಕೂಡ ಆಗಿದ್ದಾರೆ.

ಲಾಹೋರ್: ಪಾಕಿಸ್ತಾನ ಸೂಪರ್ ಲೀಗ್ (PSL) ನಿತ್ಯ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದು, ಇದೀಗ ವಿದೇಶಿ ಆಟಗಾರರೊಬ್ಬರು ಟೂರ್ನಿಯ ವೃತ್ತಿಪರತೆಯನ್ನೇ ಪ್ರಶ್ನಿಸಿ ಪಿಸಿಬಿಯನ್ನು ಮತ್ತೆ ಮುಜುಗರಕ್ಕೀಡು ಮಾಡಿದ್ದಾರೆ.
ಹೌದು.. ಆಸ್ಟ್ರೇಲಿಯಾದ ಲೆಜೆಂಡರಿ ಓಪನರ್ ಡೇವಿಡ್ ವಾರ್ನರ್ ಪಾಕಿಸ್ತಾನ ಆಟಗಾರರು ಮತ್ತು ಟೂರ್ನಿಯನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 2026ರ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ (PSL) ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಕರಾಚಿ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಆ ತಂಡದ ನಾಯಕರೂ ಕೂಡ ಆಗಿದ್ದಾರೆ.
ನಿನ್ನೆ ಅಂದರೆ ಬುಧವಾರ ಮಾರ್ಚ್ 25ರಂದು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ PSL ನಾಯಕರ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ವಾರ್ನರ್ ಸಹ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಆಗಿದ್ದೇನು?
ಮಾಧ್ಯಮ ಸಂವಾದದ ಸಮಯದಲ್ಲಿ, ವಾರ್ನರ್ ಸಹ ನಾಯಕರಾದ ಮೊಹಮ್ಮದ್ ರಿಜ್ವಾನ್, ಶಾಹೀನ್ ಶಾ ಅಫ್ರಿದಿ ಮತ್ತು ಸೌದ್ ಶಕೀಲ್ ಅವರ ವರ್ತನೆಯಿಂದ ಸಿಟ್ಟಿಗೆದ್ದು ಅವರನ್ನು ಪರೋಕ್ಷವಾಗಿ ಟೀಕಿಸಿದರು. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು, ವೈರಲ್ ಆಗಿರುವ ವೀಡಿಯೊದಲ್ಲಿ, ವಾರ್ನರ್, "ಏನಾಯಿತು ಜೆಂಟಲ್ ಮನ್? ಕ್ಷಮಿಸಿ, ನಮ್ಮಲ್ಲಿ ಕೆಲವು ಶಾಲಾ ಮಕ್ಕಳಿದ್ದಾರೆ" ಎಂದು ಹೇಳುವ ಮೂಲಕ ಆಟಗಾರರ ವರ್ತನೆಯನ್ನು ಖಂಡಿಸಿದ್ದಾರೆ.
'ಪ್ರಭುದ್ಧತೆ ಅನ್ನೋದೇ ಇಲ್ಲ..'
ವಾರ್ನರ್ ಅಸಮಾಧಾನಕ್ಕೆ ಪಾಕಿಸ್ತಾನ ಆಟಗಾರರ ವರ್ತನೆಯೇ ಕಾರಣ ಎಂದು ಹೇಳಲಾಗಿದೆ. ಮಾಧ್ಯಮ ಸಂವಾದ ವೇಳೆ ಪತ್ರಕರ್ತರೊಬ್ಬರು ವಾರ್ನರ್ ಅವರಿಗೆ ಪ್ರಶ್ನೆ ಕೇಳುತ್ತಿದ್ದರು.
ಈ ವೇಳೆ ವೇದಿಕೆ ಮೇಲಿದ್ದ ಪಾಕ್ ಆಟಗಾರರಾದ ಶಾಹೀನ್ ಅಫ್ರಿದಿ, ಸೌದ್ ಶಕೀಲ್, ಮಹಮದ್ ರಿಜ್ವಾನ್ ಪರಸ್ಪರ ಮಾತುಕತೆ ನಡೆಸಿ ನಗಾಡುತ್ತಿದ್ದರು. ಇದರಿಂದ ಡೇವಿಡ್ ವಾರ್ನರ್ ಉತ್ತರಿಸಲು ಅಡಚಣೆಯಾಗುತ್ತಿತ್ತು.
ಕೂಡಲೇ ರೊಚ್ಚಿಗೆದ್ದ ವಾರ್ನರ್ ಆಟಗಾರರನ್ನು ಉದ್ದೇಶಿಸಿ ಕ್ಷಮಿಸಿ ಇಲ್ಲಿ ಕೆಲ ಶಾಲಾ ಮಕ್ಕಳಿದ್ದಾರೆ ಎಂದು ಹೇಳುವ ಮೂಲಕ ಆಟಗಾರರಿಗೆ ಪ್ರಬುದ್ಧತೆ ಇಲ್ಲ.. ಎಲ್ಲಿ ಹೇಗೆ ವರ್ತಿಸಬೇಕು ಎಂದು ತಿಳಿಯುತ್ತಿಲ್ಲ ಎಂಬರ್ಥದಲ್ಲಿ ವ್ಯಂಗ್ಯ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



