ಕ್ರಿಕೆಟ್

IPL 2026: 5 ಎಸೆತದಲ್ಲಿ 5 ಸಿಕ್ಸರ್; ಇಂಟರ್ನೆಟ್ ಗೆ ಬೆಂಕಿ ಹಚ್ಚಿದ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟರ್! Video

ಸನ್ ರೈಸರ್ಸ್ ಹೈದರಾಬಾದ್ ಬ್ಯಾಟರ್ ಸಲೀಲ್ ಅರೋರಾ ಐಪಿಎಲ್ 2026ಕ್ಕೆ ಮುನ್ನವೇ ಸುದ್ದಿಗೆ ಗ್ರಾಸವಾಗಿದ್ದು, ಅಭ್ಯಾಸ ಪಂದ್ಯದಲ್ಲೇ 5 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸಿ ಟೂರ್ನಿಯಲ್ಲಿನ ತಮ್ಮ ಉದ್ದೇಶ ಸ್ಪಷ್ಟಪಡಿಸಿದ್ದಾರೆ.

IPL 2026: 5 ಎಸೆತದಲ್ಲಿ 5 ಸಿಕ್ಸರ್; ಇಂಟರ್ನೆಟ್ ಗೆ ಬೆಂಕಿ ಹಚ್ಚಿದ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟರ್! Video
ಐದು ಎಸೆತದಲ್ಲಿ ಐದು ಸಿಕ್ಸರ್ ಸಿಡಿಸಿದ ಸಲೀಲ್ ಅರೋರಾ
Published On :

ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ಬ್ಯಾಟರ್ ಐಪಿಎಲ್ 2026 ಟೂರ್ನಿ ಆರಂಭಕ್ಕೂ ಮುನ್ನವೇ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದು, ಅಭ್ಯಾಸ ಪಂದ್ಯದಲ್ಲಿ ಐದು ಎಸೆತದಲ್ಲಿ ಐದು ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಉದ್ದೇಶ ಸ್ಪಷ್ಟಪಡಿಸಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ಬ್ಯಾಟ್ಸ್ ಮನ್ ಸಲೀಲ್ ಅರೋರಾ ಐಪಿಎಲ್ 2026ಕ್ಕೆ ಮುನ್ನವೇ ಸುದ್ದಿಗೆ ಗ್ರಾಸವಾಗಿದ್ದು, ಅಭ್ಯಾಸ ಪಂದ್ಯದಲ್ಲೇ ಐದು ಎಸೆತಗಳಲ್ಲಿ ಐದು ಸಿಕ್ಸರ್ ಗಳನ್ನು ಬಾರಿಸಿ ಟೂರ್ನಿಯಲ್ಲಿನ ತಮ್ಮ ಉದ್ದೇಶ ಸ್ಪಷ್ಟಪಡಿಸಿದ್ದಾರೆ.

ಶನಿವಾರ ನಡೆದ SRH ನ ಅಭ್ಯಾಸ ಪಂದ್ಯದಲ್ಲಿ ವೇಗದ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ 23 ವರ್ಷದ ಸಲೀಲ್ ಆರೋರಾ ತಂಡದ ಆಯ್ಕೆಗಾರರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಪಂದ್ಯದಲ್ಲಿ ಅವರು ಜಯದೇವ್ ಉನದ್ಕತ್ ಬೌಲಿಂಗ್ ನಲ್ಲಿ ಎರಡು ಸಿಕ್ಸರ್ ಗಳನ್ನು ಬಾರಿಸಿದರು ಮತ್ತು ಮುಂದಿನ ಓವರ್ ನಲ್ಲಿ ಓಂಕಾರ್ ತರ್ಮಲೆ ಬೌಲಿಂಗ್ ನಲ್ಲಿ ಸತತ ಮೂರು ಸಿಕ್ಸರ್ ಗಳನ್ನು ಬಾರಿಸಿದರು. ಆ ಮೂಲಕ ಐದು ಎಸೆತಗಳಲ್ಲಿ ಐದು ಸಿಕ್ಸರ್ ಗಳನ್ನು ಸಿಡಿಸಿದರು.

ಇಂಟರ್ನೆಂಟ್ ನಲ್ಲಿ ವ್ಯಾಪಕ ಚರ್ಚೆ

ಇನ್ನು ಸಲೀಲ್ ಅರೋರಾ ಅವರ ಸ್ಫೋಟಕ ಇನ್ನಿಂಗ್ಸ್ ಕುರಿತು ಅಭಿಮಾನಿಗಳು ವ್ಯಾಪಕ ಚರ್ಚೆ ನಡೆಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಈಗಾಗಲೇ ಸಾಕಷ್ಟು ಬ್ಯಾಟರ್ ಗಳ ಪಡೆಯೇ ಇದ್ದು, ಇದೀಗ ಈ ಪಟ್ಟಿಗೆ ಸಲೀಲ್ ಆರೋರಾ ಕೂಡ ಸೇರ್ಪಡೆಯಾಗಿದ್ದಾರೆ.

ಆ ಮೂಲಕ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಸಲೀಲ್ ತಮ್ಮ ಇಂಟೆಂಟ್ ಪ್ರದರ್ಶಿಸಿದ್ದಾರೆ. ಈಗಾಗಲೇ ಐಪಿಎಲ್ ಇತಿಹಾಸದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಗರಿಷ್ಠ ಸ್ಕೋರ್ ಮಾಡಿದ ದಾಖಲೆ ಹೊಂದಿದ್ದು, ಅದಕ್ಕೆ ತಕ್ಕಂತೆ ಆ ತಂಡದಲ್ಲಿ ಸಾಕಷ್ಟು ಸ್ಫೋಟಕ ಬ್ಯಾಟರ್ ಗಳ ಪಡೆಯೇ ಇದೆ.

ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಸ್ಫೋಟಕ ಇನ್ನಿಂಗ್ಸ್ ಆಡಬಲ್ಲರು. ಇದೀಗ ಈ ಪಟ್ಟಿಗೆ ಸಲೀಲ್ ಆರೋರಾ ಕೂಡ ಸೇರ್ಪಡೆಯಾಗುವ ಮುನ್ಸೂಚನೆ ನೀಡಿದ್ದಾರೆ.

ಇಶಾನ್ ಕಿಶನ್ ನಾಯಕತ್ವ

ಹಾಲಿ ಟೂರ್ನಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ನಾಯಕ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ತಂಡದ ನಾಯಕತ್ವ ವಹಿಸಿದ್ದಾರೆ. ಅಂತೆಯೇ ಇದೇ ಅವಧಿಯಲ್ಲಿ ನಂ.1 ಟಿ20ಐ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಉಪನಾಯಕರಾಗಿರುತ್ತಾರೆ ಎಂದು ಎಸ್‌ಆರ್‌ಎಚ್ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.