IPL ಫ್ರಾಂಚೈಸಿ ಕಾವ್ಯಾ ತಂಡಕ್ಕೆ ಆಯ್ಕೆ ಬೆನ್ನಲ್ಲೇ Pak ಬೌಲರ್ ಅಬ್ರಾರ್‌ಗೆ ಸಂಕಷ್ಟ; ಹಣನಾ-ರಾಷ್ಟ್ರನಾ; ಅತಂತ್ರ ಸ್ಥಿತಿಯಲ್ಲಿ PCB!
ಇಂಗ್ಲೆಂಡ್‌ನ ಫ್ರಾಂಚೈಸ್ ಲೀಗ್‌ನ ದಿ ಹಂಡ್ರೆಡ್‌ಗಾಗಿ ನಡೆದ ಆಟಗಾರರ ಹರಾಜಿನಲ್ಲಿ IPL ಫ್ರಾಂಚೈಸಿ ಸನ್‌ರೈಸರ್ಸ್ ಲೀಡ್ಸ್ ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ನನ್ನು ಪಾಕ್ ಕರೆನ್ಸಿ 7 ಕೋಟಿಗೆ (ಸುಮಾರು ₹2.34 ಕೋಟಿ) ಖರೀದಿಸಿತ್ತು.

ಇಂಗ್ಲೆಂಡ್‌ನ ಫ್ರಾಂಚೈಸ್ ಲೀಗ್‌ನ ದಿ ಹಂಡ್ರೆಡ್‌ಗಾಗಿ ನಡೆದ ಆಟಗಾರರ ಹರಾಜಿನಲ್ಲಿ IPL ಫ್ರಾಂಚೈಸಿ ಸನ್‌ರೈಸರ್ಸ್ ಲೀಡ್ಸ್ ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ನನ್ನು ಪಾಕ್ ಕರೆನ್ಸಿ 7 ಕೋಟಿಗೆ (ಸುಮಾರು ₹2.34 ಕೋಟಿ) ಖರೀದಿಸಿತ್ತು. ಸನ್‌ರೈಸರ್ಸ್ ಲೀಡ್ಸ್ ಸನ್ ಗ್ರೂಪ್ ಒಡೆತನದಲ್ಲಿದೆ. ಅಬ್ರಾರ್ ಖರೀದಿ ನಿರ್ಧಾರವು ಭಾರತದಲ್ಲಿ ಚರ್ಚೆಗೆ ಕಾರಣವಾಯಿತು. ಮಾರ್ಚ್ 12 ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ ಸನ್‌ರೈಸರ್ಸ್ ಸಿಇಒ ಕಾವ್ಯಾ ಮಾರನ್ ಕೂಡ ಹಾಜರಿದ್ದು ಪಾಕಿಸ್ತಾನಿ ಕ್ರಿಕೆಟಿಗನನ್ನು ಖರೀದಿಸಿದ ಬೆನ್ನಲ್ಲೇ ಕಾವ್ಯಾ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಆದಾಗ್ಯೂ, ಈ ವಿಷಯವು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ. ಆದರೆ ಅಬ್ರಾರ್ ಅಹ್ಮದ್ ಗೆ ಈಗ ಹೊಸ ಸವಾಲು ಎದುರಾಗಬಹುದು. ವರದಿಗಳ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ NOC ಸಿಗುವುದು ಕಷ್ಟಕರವಾಗಬಹುದು.
ಪಿಸಿಬಿ ಅಬ್ರಾರ್‌ಗೆ NOC ನೀಡುತ್ತದೆಯೇ?
ವಾಸ್ತವವಾಗಿ, ಪಾಕಿಸ್ತಾನ ತಂಡವು ಜುಲೈ-ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲು ನಿರ್ಧರಿಸಿದೆ. ಈ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಜುಲೈ 15 ರಿಂದ ಆಗಸ್ಟ್ 7ರವರೆಗೆ ನಡೆಯಲಿದ್ದು, ದಿ ಹಂಡ್ರೆಡ್ ಟೂರ್ನಮೆಂಟ್ ಜುಲೈ 21 ರಿಂದ ಆಗಸ್ಟ್ 16 ರವರೆಗೆ ನಡೆಯಲಿದೆ. ಅಂತಹ ಪರಿಸ್ಥಿತಿಯಲ್ಲಿ, ತಂಡದ ಅಗತ್ಯತೆಗಳಿಂದಾಗಿ ಪಿಸಿಬಿ ಅಬ್ರಾರ್ ಅಹ್ಮದ್‌ಗೆ NOC ನೀಡಲು ನಿರಾಕರಿಸಬಹುದು. ಆದರೆ ದೊಡ್ಡ ಮೊತ್ತದ ಹಣದ ಕಾರಣದಿಂದಾಗಿ ಅಬ್ರಾರ್ ಅಹ್ಮದ್‌ಗೆ NOC ಸಿಗಬಹುದು ಎಂದು ಮೂಲಗಳು ತಿಳಿಸಿವೆ. ಇನ್ನು ಅಬ್ರಾರ್ ಪರ ಏಜೆಂಟ್ ಪಿಸಿಬಿಯಿಂದ ಅನುಮತಿ ಸಿಗುವ ನಿರೀಕ್ಷೆಯಿಂದಾಗಿಯೇ ಹರಾಜಿನಲ್ಲಿ ಅವರ ಹೆಸರನ್ನು ನಮೂದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಜೊತೆ ಅಬ್ರಾರ್ ಪರ ಏಜೆಂಟ್ ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ಆದ್ದರಿಂದ, ಅಬ್ರಾರ್ ಆಡುವ ಸಾಧ್ಯತೆಗಳು 50-50 ಆಗಿದೆ.
ಸನ್‌ರೈಸರ್ಸ್ ಲೀಡ್ಸ್ ತರಬೇತುದಾರ ಡೇನಿಯಲ್ ವೆಟ್ಟೋರಿ ತಂಡದ ಮೊದಲ ಆಯ್ಕೆ ಇಂಗ್ಲಿಷ್ ಸ್ಪಿನ್ನರ್ ಆದಿಲ್ ರಶೀದ್ ಎಂದು ಬಹಿರಂಗಪಡಿಸಿದ್ದಾರೆ. ಆದರೆ ಅವರು ಲಭ್ಯವಿಲ್ಲದಿದ್ದಾಗ, ತಂಡವು ವಿದೇಶಿ ಸ್ಪಿನ್ನರ್‌ಗಳ ಆಯ್ಕೆಗಳನ್ನು ಪರಿಗಣಿಸಿತು. ಅಂತಿಮವಾಗಿ ಅಬ್ರಾರ್ ಅಹ್ಮದ್ ನನ್ನು ಖರೀದಿಸಬೇಕಾಯಿತು. ಪಿಸಿಬಿ ಅಬ್ರಾರ್ ಅಹ್ಮದ್‌ಗೆ NOC ನೀಡುತ್ತದೆಯೇ ಎಂಬುದರ ಕುರಿತು ಕುತೂಹಲ ಕೆರಳಿಸಿದೆ. ಏಕೆಂದರೆ ಅನುಮತಿ ನಿರಾಕರಿಸಿದರೇ ಅದು ಕಾವ್ಯಾ ಮಾರನ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



