T20 World Cup 2026: ಭಾನುವಾರ ಸಮಾರೋಪ ಸಮಾರಂಭ; ಗ್ಲೋಬಲ್ ಐಕಾನ್ 'ರಿಕಿ ಮಾರ್ಟಿನ್' ಪ್ರದರ್ಶನ
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳ ಖಾತೆಗಳ ಮೂಲಕ ವಿವರ ಹಂಚಿಕೊಂಡಿದೆ.

ಗುಜರಾತ್: ಭಾನುವಾರ ನಡೆಯಲಿರುವ ಐಸಿಸಿ T20 ವಿಶ್ವಕಪ್ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಜಾಗತಿಕ ಪಾಪ್ ಐಕಾನ್ ರಿಕಿ ಮಾರ್ಟಿನ್ ಪ್ರದರ್ಶನ ಇರಲಿದೆ. ಗಾಯಕ, ನಟನಾಗಿರುವ ರಿಕಿ ಮಾರ್ಟಿನ್ "ಲ್ಯಾಟಿನ್ ಪಾಪ್ ರಾಜ" ಎಂದು ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದಾರೆ.
ಈ ಕುರಿತು ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳ ಖಾತೆಗಳ ಮೂಲಕ ವಿವರ ಹಂಚಿಕೊಂಡಿದೆ.
T20WorldCup ಪಾರ್ಟಿ ಈಗಷ್ಟೇ ದೊಡ್ಡದಾಗಿದೆ! ICC ಪುರುಷರ T20 ವಿಶ್ವಕಪ್ 2026 ರಲ್ಲಿ ಫೈನಲ್‌ಗೂ ಮುನ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಗ್ಲೋಬಲ್ ಐಕಾನ್ ಮತ್ತು ಸೂಪರ್‌ಸ್ಟಾರ್ ರಿಕಿ ಮಾರ್ಟಿನ್ ಅವರ ಪ್ರದರ್ಶನ ಇರುವುದನ್ನು ಘೋಷಿಸಲು ನಮಗೆ ಥ್ರಿಲ್ ಆಗುತ್ತಿದೆ. ಇದನ್ನು ನೀವು ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಲಾಗಿದೆ.
ಕ್ರೀಡಾಂಗಣದ ಗೇಟ್ ಗಳು ಮಧ್ಯಾಹ್ನ 3-30ಕ್ಕೆ ಓಪನ್ ಆಗಲಿದ್ದು, ಸಂಜೆ 5-30ಕ್ಕೆ ಪ್ರದರ್ಶನ ಆರಂಭವಾಗಲಿದೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ.
ಅಹಮದಾಬಾದ್‌ನ ಐಕಾನಿಕ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತವು ನ್ಯೂಜಿಲೆಂಡ್ ಸೋಲಿಸುವ ಮೂಲಕ ಮತ್ತೊಂದು ಪ್ರಮುಖ ಐಸಿಸಿ ಪ್ರಶಸ್ತಿಯನ್ನು ಎತ್ತಿಹಿಡಿಯುವ ಗುರಿ ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



