3rd ODI: ಆಫ್ಘಾನಿಸ್ತಾನಕ್ಕೆ ಪೆನಾಲ್ಟಿ ಶಾಕ್; ಇನ್ನಿಂಗ್ಸ್ ಆರಂಭಕ್ಕೂ ಮುನ್ನವೇ ಭಾರತಕ್ಕೆ 5 ರನ್, ಮೊದಲ ಓವರ್ ನಲ್ಲೇ 23 ರನ್; ವಿಚಿತ್ರ ದಾಖಲೆ!
ಆಫ್ಘಾನಿಸ್ತಾನ ಇನ್ನಿಂಗ್ಸ್ ನಲ್ಲಿ ನಾಯಕ ಹಶ್ಮತುಲ್ಲಾ (102) ಶತಕ, ಮತ್ತು ಅಜ್ಮತುಲ್ಲಾ ಒಮರ್ಝೈ (50) ಅರ್ಧಶತಕ ಸಿಡಿಸಿ ನಿರ್ಣಾಯಕ ಪಾತ್ರ ವಹಿಸಿದರು.

ಚೆನ್ನೈ: ಭಾರತದ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಫ್ಘಾನಿಸ್ತಾನ ಮಹಾ ಎಡವಟ್ಟು ಮಾಡಿಕೊಂಡಿದ್ದು, ಅಂಪೈರ್ ಗಳು ತಂಡಕ್ಕೆ ಬರೊಬ್ಬರಿ 5 ರನ್ ಪೆನಾಲ್ಟಿ ನೀಡಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ 44.2 ಓವರ್ ನಲ್ಲಿ 218 ರನ್ ಗಳಿಸಿ ಆಲೌಟ್ ಆಯಿತು.
ಆಫ್ಘಾನಿಸ್ತಾನ ಇನ್ನಿಂಗ್ಸ್ ನಲ್ಲಿ ನಾಯಕ ಹಶ್ಮತುಲ್ಲಾ (102) ಶತಕ, ಮತ್ತು ಅಜ್ಮತುಲ್ಲಾ ಒಮರ್ಝೈ (50) ಅರ್ಧಶತಕ ನಿರ್ಣಾಯಕ ಪಾತ್ರ ವಹಿಸಿದರು.
ಆಫ್ಘಾನಿಸ್ತಾನಕ್ಕೆ 5 ರನ್ ಪೆನಾಲ್ಟಿ
ಇನ್ನು ಆಫ್ಘನ್ ಬ್ಯಾಟಿಂಗ್ ವೇಳೆ ಆ ತಂಡದ ನಾಯಕ ಹಶ್ಮತುಲ್ಲಾ ಪದೇ ಪದೇ ಪಿಚ್ ನ ಡೇಂಜರ್ ಝೋನ್ ನಲ್ಲಿ ಓಡಿದ್ದರಿಂದ ಅಂಪೈರ್ ಗಳ ಕಂಗಣ್ಣಿಗೆ ಗುರಿಯಾದರು. ಮೊದಲ ಬಾರಿ ಓಡಿದಾಗ ಎಚ್ಚರಿಕೆ ನೀಡಿದ ಅಂಪೈರ್ ಗಳು 2ನೇ ಬಾರಿಯೂ ಅದೇ ತಪ್ಪು ಮರುಕಳಿಸಿದಾಗ ಮುಲಾಜಿಲ್ಲದೇ 5 ರನ್ ಪೆನಾಲ್ಟಿ ನೀಡಿದರು.
ಆಗಿದ್ದೇನು?
ಆಫ್ಘನ್ ಬ್ಯಾಟಿಂಗ್ ವೇಳೆ ಹಷ್ಮತ್ 39 ಓವರ್ ನ ಅಂತಿಮ ಎಸೆತದಲ್ಲಿ ಪಿಚ್‌ನ ಅಪಾಯಕಾರಿ ಪ್ರದೇಶದ ಮೇಲೆ ಓಡಿದರು. ಇದನ್ನು ಗಮನಿಸಿದ ಅಂಪೈರ್ ಗಳು ಓವರ್‌ಗಳ ನಡುವಿನ ವಿರಾಮದಲ್ಲಿ ಅವರಿಗೆ ಎಚ್ಚರಿಕೆ ನೀಡಿದರು.
ಹಷ್ಮತ್ ಮತ್ತೆ ಮುಂದಿನ ಓವರ್ ನ ಮೊದಲ ಎಸೆತದಲ್ಲೇ ಮತ್ತದೇ ತಪ್ಪು ಮಾಡಿದರು. ಹೀಗಾಗಿ ಅಂಪೈರ್ ಗಳು ಪಿಚ್ ಮೇಲ್ಮೈ ಹಾಳು ಮಾಡಿದ ತಪ್ಪಿಗಾಗಿ ಅವರು ಗಳಿಸಿದ್ದ ಒಂದು ರನ್ ರದ್ದು ಮಾಡಿದ್ದು ಮಾತ್ರವಲ್ಲದೇ 5 ರನ್ ಪೆನಾಲ್ಟಿ ನೀಡಿದರು.
ಮೊದಲ ಓವರ್ ನಲ್ಲೇ ಭಾರತ 23 ರನ್
ಇನ್ನು 5 ರನ್ ಗಳ ಬೋನಸ್ ನೊಂದಿಗೆ ಚೇಸಿಂಗ್ ಆರಂಭಿಸಿದ ಭಾರತ ತಂಡ ಮೊದಲ ಓವರ್ ನಲ್ಲಿ 18 ರನ್ ಚಚ್ಚಿತು. ಆ ಮೂಲಕ ಒಟ್ಟಾರೆ ಓವರ್ ನಲ್ಲಿ 23ರನ್ ಕಲೆಹಾಕಿ ದಾಖಲೆ ನಿರ್ಮಿಸಿತು. 2 ವೈಡ್, 2 ನೋಬಾಲ್, 3 ಬೌಂಡರಿ, 2 ರನ್ ಸಹಿತ 18 ರನ್ ಕಲೆಹಾಕಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮೊದಲ ಓವರ್ ನಲ್ಲಿ ಗರಿಷ್ಠ ರನ್ ಕಲೆಹಾಕಿತು.
ಇದಕ್ಕೂ ಮೊದಲು 2004ರಲ್ಲಿ ಕೊಲಂಬೋದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 22 ರನ್ ಕಲೆಹಾಕಿತ್ತು. ಇದು ಇಷ್ಟು ದಿನ ಭಾರತ ಮೊದಲ ಓವರ್ ನಲ್ಲಿ ಕಲೆಹಾಕಿದ್ದ ಗರಿಷ್ಠ ಮೊತ್ತವಾಗಿತ್ತು. ಇದಾದ ಬಳಿಕ 2020ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಓವರ್ ನಲ್ಲೇ 20 ರನ್ ಕಲೆಹಾಕಿತ್ತು.
Most runs by India in the 1st over of an innings in ODIs
23 vs Afg Chennai 2026 *
22 vs Ban Colombo SSC 2004
20 vs Aus Sydney 2020
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



