India vs Afghanistan: 2 ಎಸೆತದಲ್ಲಿ 3 ವಿಕೆಟ್; 36 ಓವರ್ ನಲ್ಲೇ ಆಪ್ಘನ್ ಹೆಡೆಮುರಿ ಕಟ್ಟಿದ ಭಾರತ; Gill ಪಡೆಗೆ ಇನ್ನಿಂಗ್ಸ್ ಜಯ
ಕೇವಲ 112 ರನ್ ಗಳಿಗೆ ಆಲೌಟ್ ಮಾಡಿದ ಭಾರತ ಆ ಮೂಲಕ ಅಫ್ಗನ್ನರ ವಿರುದ್ಧ ಇನ್ನಿಂಗ್ಸ್ ಮತ್ತು 300 ರನ್ ಗಳ ಅಂತರದ ಭರ್ಜರಿ ಜಯ ಸಾಧಿಸಿತು.

ನ್ಯೂಚಂಡೀಗಢ: ಆಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 300 ರನ್ ಗಳ ಅಂತರದ ಭರ್ಜರಿ ಜಯ ಸಾಧಿಸಿದೆ.
ನ್ಯೂ ಚಂಡೀಗಢದ ಮುಲ್ಲನ್ ಪುರ್ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಆಫ್ಘಾನಿಸ್ತಾನವನ್ನು ಕೇವಲ 112 ರನ್ ಗಳಿಗೆ ಆಲೌಟ್ ಮಾಡಿದ ಭಾರತ ಆ ಮೂಲಕ ಅಫ್ಗನ್ನರ ವಿರುದ್ಧ ಇನ್ನಿಂಗ್ಸ್ ಮತ್ತು 300 ರನ್ ಗಳ ಅಂತರದ ಭರ್ಜರಿ ಜಯ ಸಾಧಿಸಿತು.
ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ನೀಡಿದ್ದ 564 ರನ್ ಗಳಿಗೆ ಉತ್ತರ ನೀಡಲು ಅಫ್ಘಾನಿಸ್ತಾನ ತನ್ನ ಎರಡೂ ಇನ್ನಿಂಗ್ಸ್ ನಲ್ಲಿ ತಿಣುಕಾಡಿತು. ಭಾರತೀಯ ಬೌಲರ್ ಗಳ ಪಾರಮ್ಯದ ಎದುರು ರನ್ ಗಳಿಸಲು ಹರಸಾಹಸ ಪಟ್ಟ ಆಪ್ಘನ್ನರು ಮೊದಲ ಇನ್ನಿಂಗ್ಸ್ ನಲ್ಲಿ 152 ರನ್ ಗಳಿಸಿ ಆಲೌಟ್ ಆದರೆ, 2ನೇ ಇನ್ನಿಂಗ್ಸ್ ನಲ್ಲಿ ಕೇವಲ 112 ರನ್ ಗಳಿಗೆ ಆಲೌಟ್ ಆಯಿತು.
2ನೇ ಇನ್ನಿಂಗ್ಸ್ ನಲ್ಲಿ ಆಫ್ಘನ್ ಆರಂಭಿಕ ಆಟಗಾರ ಸೆದಿಖುಲ್ಲಾ ಅಟಲ್ ಗಳಿಸಿದ್ದ 42 ರನ್ ಗಳೇ ಆ ತಂಡದ ಬ್ಯಾಟರ್ ಒಬ್ಬರ ವೈಯುಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು.
ಉಳಿದಂತೆ ಅಬ್ದುಲ್ ಮಲಿಕ್ 8, ರೆಹ್ಮಾನುಲ್ಲಾ ಗುರ್ಬಾಜ್ 24, ರಹಮತ್ ಶಾ 13, ಹಷ್ಮತುಲ್ಲಾ ಶಾಹಿದಿ 5, ಅಸ್ಫರ್ ಝಝೈ 8, ಅಜ್ಮತುಲ್ಲಾ ಒಮರ್ಝೈ 4, ಖರೋಟೆ 6 ರನ್ ಗಳಿಸಿದರೆ, ರಹ್ಮಾನ್ ಷರಿಫ್, ಸಲೀಂ ಸಫಿ ಮತ್ತು ಶರಾಫುದ್ದೀನ್ ಅಶ್ರಫ್ ಶೂನ್ಯ ಸುತ್ತಿ ತಂಡಕ್ಕೆ ನಿರಾಶೆ ಮೂಡಿಸಿದರು.
ಅಂತಿಮವಾಗಿ ಆಫ್ಘಾನಿಸ್ತಾನ ತಂಡ ಎರಡನೇ ಇನ್ನಿಂಗ್ಸ್ ನಲ್ಲೂ 112 ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರತದ ಎದುರು ಇನ್ನಿಂಗ್ಸ್ ಮತ್ತು 300 ರನ್ ಗಳ ಅಂತರದಲ್ಲಿ ಹೀನಾಯ ಸೋಲುಕಂಡಿತು. ಭಾರತದ ಪರ ವಾಷಿಂಗ್ಟನ್ ಸುಂದರ್ 4 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 3 ಮತ್ತು ಮಾನವ್ ಸುತರ್ ಮತ್ತು ಮಹಮದ್ ಸಿರಾಜ್ ತಲಾ 1 ವಿಕೆಟ್ ಪಡೆದರು.
2 ಎಸೆತದಲ್ಲಿ 3 ವಿಕೆಟ್
ಆಫ್ಘಾನಿಸ್ತಾನದ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಆ ತಂಡ ಕೇವಲ 2 ಎಸೆತಗಳ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಂಡಿತು. ಇನ್ನಿಂಗ್ಸ್ ನ 36ನೇ ಓವರ್ ನಲ್ಲಿ 2 ಎಸೆತಗಳಲ್ಲಿ ಮೂರು ವಿಕೆಟ್ ಬಿತ್ತು. 36ನೇ ಓವರ್ ನ 4 ಮತ್ತು 5ನೇ ಎಸೆತಗಳಲ್ಲಿ ಮೂರು ವಿಕೆಟ್ ಬಿತ್ತು.
ಓವರ್ ನ 4ನೇ ಎಸೆತದಲ್ಲಿ ಕುಲದೀಪ್ ನಂಗೆಯಲಿಯಾ ಖರೋಟೆ ಅವರನ್ನು ಔಟ್ ಮಾಡದರೆ, ನಂತರದ ಎಸೆತದಲ್ಲೇ ಮಹಮದ್ ಸಲೀಂ ಶಫಿ ಕೂಡ ಸಾಯಿ ಸುದರ್ಶನ್ ಗೆ ಕ್ಯಾಚ್ ನೀಡಿ ಹೊರ ನಡೆದರು.
ಆದರೆ ನಂತರದ ಎಸೆತ ಬರುವಮುನ್ನಲೇ ಆಫ್ಘನ್ ಕೊನೆಯ ಬ್ಯಾಟರ್ ಹೊಟ್ಟೆ ಗಾಯದಿಂದಾಗಿ ರಿಟೈರ್ಡ್ ಹರ್ಟ್ ಆದರು. ಹೀಗಾಗಿ ಅವರನ್ನೂ ಔಟ್ ಎಂದು ಘೋಷಣೆ ಮಾಡಲಾಯಿತು. ಆ ಮೂಲಕ ಭಾರತ ಇನ್ನಿಂಗ್ಸ್ ಮತ್ತು 300 ರನ್ ಗಳ ಅಂತರದಲ್ಲಿ ಅಮೋಘ ಜಯ ದಾಖಲಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



