'ಹಾಲಿವುಡ್, ಬಾಲಿವುಡ್ ತಾರೆಯರಿಗಿಂತಲೂ 15 ವರ್ಷದ ವೈಭವ್ ಸೂರ್ಯವಂಶಿ ದೊಡ್ಡವರು': ಲಲಿತ್ ಮೋದಿ
ಸೂರ್ಯವಂಶಿ ಟಿ20 ಕ್ರಿಕೆಟ್ನಲ್ಲಿ ದ್ವಿಶತಕ ಗಳಿಸಬೇಕು. ಬಿಹಾರ ಮೂಲದ ಬ್ಯಾಟ್ಸ್ಮನ್ ಯಾವುದೇ ಚಲನಚಿತ್ರ ತಾರೆಗಿಂತ ದೊಡ್ಡ ಸೆಲೆಬ್ರಿಟಿಯಾಗಬಹುದು ಎಂದು ಅವರು ಹೇಳಿದ್ದಾರೆ.

ಐಪಿಎಲ್ 2025ರಲ್ಲಿ ಆರಂಭವಾದ 15 ವರ್ಷದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಕುರಿತ ಚರ್ಚೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಈ ಬ್ಯಾಟಿಂಗ್ ಸೆನ್ಸೇಶನ್, ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ಪರ ಹಲವಾರು ಅಭೂತಪೂರ್ವ ಇನಿಂಗ್ಸ್ಗಳನ್ನು ಆಡಿ ಬಹುತೇಕ ಎಲ್ಲ ಆಟಗಾರರನ್ನು ಹಿಂದಿಕ್ಕಿದರು. 16 ಪಂದ್ಯಗಳಲ್ಲಿ 776 ರನ್ಗಳೊಂದಿಗೆ, ಸೂರ್ಯವಂಶಿ ಪಂದ್ಯಾವಳಿಯ ಪ್ರಮುಖ ರನ್ ಸ್ಕೋರರ್ ಆದರು ಮತ್ತು ಆರೆಂಜ್ ಕ್ಯಾಪ್ ಮಾಲೀಕರಾದರು. ಅವರ ಬಗ್ಗೆ ಪ್ರಶಂಸೆ ಮತ್ತು ಭವಿಷ್ಯದ ಬಗ್ಗೆ ಮಾತುಗಳು ಕೇಳಿಬರುತ್ತಲೇ ಇವೆ. ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕೂಡ ಸೂರ್ಯವಂಶಿಯನ್ನು ಮೆಚ್ಚಿಕೊಂಡಿದ್ದಾರೆ.
Wisden ಜೊತೆ ಮಾತನಾಡಿದ ಮೋದಿ, ಸೂರ್ಯವಂಶಿ ಟಿ20 ಕ್ರಿಕೆಟ್ನಲ್ಲಿ ದ್ವಿಶತಕ ಗಳಿಸಬೇಕು. ಬಿಹಾರ ಮೂಲದ ಬ್ಯಾಟ್ಸ್ಮನ್ ಯಾವುದೇ ಚಲನಚಿತ್ರ ತಾರೆಗಿಂತ ದೊಡ್ಡ ಸೆಲೆಬ್ರಿಟಿಯಾಗಬಹುದು ಎಂದು ಅವರು ಹೇಳಿದ್ದಾರೆ.
'ಆ ದಿನಕ್ಕಾಗಿ (ಸೂರ್ಯವಂಶಿ ಅವರ ದ್ವಿಶತಕ) ನಾನು ಕಾತರದಿಂದ ಕಾಯುತ್ತಿದ್ದೇನೆ. ನೀವು 200 ರನ್ ಗಳಿಸುವಿರಿ. ನಾನು ನಿಮಗೆ ಭರವಸೆ ನೀಡುತ್ತೇನೆ. ಹಣದ ಮತ್ತು ನಿಮ್ಮ ತಲೆಗೆ ಏರಲು ಬಿಡಬೇಡಿ. ನೀವು ಭೂಮಿಯ ಮೇಲಿನ ನಂಬರ್ ಒನ್ ಸೂಪರ್ಸ್ಟಾರ್ ಆಗುತ್ತೀರಿ. ಭೂಮಿಯ ಮೇಲಿನ ಯಾವುದೇ ಹಾಲಿವುಡ್ ಮತ್ತು ಬಾಲಿವುಡ್ ತಾರೆಗಿಂತ ನೀವು ದೊಡ್ಡವರು' ಎಂದು ಮೋದಿ ಹೇಳಿದರು.
ಟೆಸ್ಟ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ಗಿಂತ ಫ್ರಾಂಚೈಸಿ ಮತ್ತು ದೇಶೀಯ ಲೀಗ್ಗಳತ್ತ ಯುವ ಆಟಗಾರರು ಒಲವು ತೋರುತ್ತಿರುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ ಮೋದಿ, 'ಇದು ಸರಿಯಾದ ಕ್ರಮ. ಇದಕ್ಕೆ ಉದಾಹರಣೆಯಾಗಿ ಬ್ಯಾಸ್ಕೆಟ್ಬಾಲ್ನಲ್ಲಿ NBA ಮತ್ತು ಫುಟ್ಬಾಲ್ನಲ್ಲಿ ಪ್ರೀಮಿಯರ್ ಲೀಗ್ನಂತಹವುಗಳು ಕಣ್ಣುಂದೆ ಇವೆ' ಎಂದರು.
'ಇದು ತುಂಬಾ ಸರಳ. ಶೇ 100ರಷ್ಟು ಇದು ಒಳ್ಳೆಯದೇ. ನೀವು ನನ್ನನ್ನು ದ್ವೇಷಿಸಬಹುದು ಆದರೆ, ನನಗೆ ಅದರ ಬಗ್ಗೆ ಕಾಳಜಿ ಇಲ್ಲ. ಆದರೆ, ಇದು ಭವಿಷ್ಯ. ಯುನೈಟೆಡ್ ಸ್ಟೇಟ್ಸ್ ಬ್ಯಾಸ್ಕೆಟ್ಬಾಲ್ ತಂಡಕ್ಕೆ ಆಡುವ ಬಗ್ಗೆ ಯಾರೂ ಮಾತನಾಡುವುದಿಲ್ಲ. ಅವರು NBA ಗಾಗಿ ಆಡಲು ಬಯಸುತ್ತಾರೆ. ಯಾರೂ ಮೊದಲು ಇಂಗ್ಲೆಂಡ್ ಪರ ಆಡುವ ಬಗ್ಗೆ ಮಾತನಾಡುವುದಿಲ್ಲ, ಮ್ಯಾಂಚೆಸ್ಟರ್ ಸಿಟಿಗಾಗಿ ಅಲ್ಲ. ಇದುವೇ ಮುಖ್ಯವಾಗುತ್ತದೆ' ಎಂದು ಅವರು ಹೇಳಿದರು.
ಈಮಧ್ಯೆ, ಭಾರತದ ಮಾಜಿ ತಾರೆ ಸಂಜಯ್ ಮಂಜ್ರೇಕರ್ ಅವರು ವಿದೇಶಿ ಪರಿಸ್ಥಿತಿಗಳಲ್ಲಿ ಆಡುವಾಗ ವೈಭವ್ ಸೂರ್ಯವಂಶಿ ಅವರನ್ನು ತಕ್ಷಣವೇ ಭಾರತ ತಂಡಕ್ಕೆ ಆಯ್ಕೆ ಮಾಡದಂತೆ ಸಲಹೆ ನೀಡಿದರು.
'ಈಗ ಭಾರತ ತಂಡಕ್ಕೆ ಆಯ್ಕೆಯಾದರೆ, ವೈಭವ್ ಐಪಿಎಲ್ನಂತೆಯೇ ಬ್ಯಾಟಿಂಗ್ ಪರಿಸ್ಥಿತಿಯಲ್ಲಿ ಆಡುವುದನ್ನು ನಾನು ನೋಡಲು ಬಯಸುತ್ತೇನೆ. ಅವರನ್ನು ನೇರವಾಗಿ ವಿದೇಶಿ ಪಿಚ್ನಲ್ಲಿ ಆಡಿಸುವುದು ಒಳ್ಳೆಯದಲ್ಲ. ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾದಂತಹ ವಿದೇಶಿ ಪಿಚ್ನಲ್ಲಿ ಆಡಿಸುವುದು ಸರಿಯಲ್ಲ. ಅವರು ಅಲ್ಲಿಗೆ ಹೋಗಿ ಐಪಿಎಲ್ನಲ್ಲಿ ಮಾಡಿದ್ದನ್ನು ಪುನರಾವರ್ತಿಸಬಹುದು' ಎಂದು ಮಂಜ್ರೇಕರ್ ಸ್ಪೋರ್ಟ್ಸ್ಸ್ಟಾರ್ಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



