ಕ್ರಿಕೆಟ್

'MS Dhoni won an era': 'ಥಲಾ'ನ 45ನೇ ಹುಟ್ಟುಹಬ್ಬಕ್ಕೆ ರೈನಾ, ಚೋಪ್ರಾ ಸೇರಿದಂತೆ ಹಲವರ ಶುಭಾಶಯ!

ಧೋನಿ ಅವರ ಕ್ರಿಕೆಟ್ ಜೀವನ ಸ್ಪೂರ್ತಿದಾಯಕವಾಗಿದೆ. ಹಿಂದೊಮ್ಮೆ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡಿದ್ದ ಅವರು, ಭಾರತಕ್ಕೆ ಹೆಚ್ಚಿನ ಟ್ರೋಫಿ ತಂದುಕೊಟ್ಟ ಯಶಸ್ವಿ ನಾಯಕರಾಗಿದ್ದರು.

'MS Dhoni won an era': 'ಥಲಾ'ನ 45ನೇ ಹುಟ್ಟುಹಬ್ಬಕ್ಕೆ ರೈನಾ, ಚೋಪ್ರಾ ಸೇರಿದಂತೆ ಹಲವರ ಶುಭಾಶಯ!
ಮಹೇಂದ್ರ ಸಿಂಗ್ ಧೋನಿ
Published On :

ನವದೆಹಲಿ: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ 45ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ, ಮುನಾಫ್ ಪಟೇಲ್ ಮತ್ತು ಆಕಾಶ್ ಚೋಪ್ರಾ ಶುಭಾಶಯ ಕೋರಿದ್ದಾರೆ.

ಧೋನಿ ಅವರ ಕ್ರಿಕೆಟ್ ಜೀವನ ಸ್ಪೂರ್ತಿದಾಯಕವಾಗಿದೆ. ಹಿಂದೊಮ್ಮೆ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡಿದ್ದ ಅವರು, ಭಾರತಕ್ಕೆ ಹೆಚ್ಚಿನ ಟ್ರೋಫಿ ತಂದುಕೊಟ್ಟ ಯಶಸ್ವಿ ನಾಯಕರಾಗಿದ್ದರು. ಅವರ ನಾಯಕತ್ವದ ತಂಡ 2007ರ ಐಸಿಸಿ ವಿಶ್ವಕಪ್, 2011 ಐಸಿಸಿ ವಿಶ್ವಕಪ್, 2013 ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು.

ಅಸಂಖ್ಯಾತ ಜನರಿಗೆ ಸ್ಫೂರ್ತಿ ಮತ್ತು ಅಸಂಖ್ಯಾತ ದಾಖಲೆಯನ್ನು ಬಿಟ್ಟು ಹೋಗಿದ್ದಕ್ಕಾಗಿ ಸುರೇಶ್ ರೈನಾ ಅವರು ಧೋನಿಯನ್ನು ಶ್ಲಾಘಿಸಿದ್ದಾರೆ. ಧೋನಿ ಜೊತೆ ಆಡುವುದನ್ನು ಅವರು ನೆನಪಿಸಿಕೊಂಡಿಸಿದ್ದಾರೆ.

ಜನ್ಮದಿನದ ಶುಭಾಶಯಗಳು, ಮಹಿ ಭಾಯ್! ನಿಮ್ಮ ದಾಖಲೆಯನ್ನು ವ್ಯಾಖ್ಯಾನಿಸಲಾಗುವುದಿಲ್ಲ, ಆದರೆ ಅಸಂಖ್ಯಾತ ಜನರಿಗೆ ನೀವು ಸ್ಫೂರ್ತಿಯಾಗಿದ್ದೀರಿ. ನಿಮ್ಮೊಂದಿಗೆ ಈ ಜರ್ನಿ ಹಂಚಿಕೊಂಡಿದ್ದಕ್ಕೆ ಸಂತೋಷವಾಗುತ್ತಿದೆ. ಯಾವಾಗಲೂ ಸಂತೋಷ, ಉತ್ತಮ ಆರೋಗ್ಯ ಹಾಗೂ ಸುಖವಾಗಿರಿ ಎಂದು ರೈನಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನೂ ಆಕಾಶ್ ಚೋಪ್ರಾ, "ಥಾಲಾ" ಎಂದು ಕರೆಯುವ ಮೂಲಕ ಶುಭ ಹಾರೈಸಿದ್ದಾರೆ. ಪಂದ್ಯಗಳು ಮತ್ತು ಟ್ರೋಫಿಗಳನ್ನು ಗೆದ್ದಿದ್ದಲ್ಲದೆ, ಕ್ರಿಕೆಟ್‌ನ ಇಡೀ ಒಂದು ಯುಗವನ್ನೇ ಗೆದಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ. ಕೆಲವು ಆಟಗಾರರು ಪಂದ್ಯ ಗೆಲ್ತಾರೆ, ಕೆಲವರು ಟ್ರೋಫಿ ಗೆಲ್ತಾರೆ, ಎಂಎಸ್ ಧೋನಿ ಒಂದು ಯುಗವನ್ನೆ ಗೆದಿದ್ದಾರೆ ಎಂದು ಚೋಪ್ರಾ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.