ಕ್ರಿಕೆಟ್

T20 World Cup 2026: ಸೂಪರ್ 8 ಹಂತದ ಗ್ರೂಪ್ 1ರ ವೇಳಾಪಟ್ಟಿ ಪ್ರಕಟ; ಫೆಬ್ರುವರಿ 22ರಂದು ಭಾರತ- ದಕ್ಷಿಣ ಆಫ್ರಿಕಾ ಮುಖಾಮುಖಿ!

ಇದೀಗ, ಏಳು ತಂಡಗಳು ಸೂಪರ್ 8ಗೆ ಪ್ರವೇಶ ಪಡೆದಿವೆ. ಗ್ರೂಪ್ ಎ ನಲ್ಲಿ ಕೇವಲ ಒಂದು ಸ್ಥಾನ ಮಾತ್ರ ಉಳಿದಿದ್ದು, ಬಹುಶಃ ಪಾಕಿಸ್ತಾನ ತಂಡವು ಮುನ್ನಡೆ ಸಾಧಿಸುವ ಸಾಧ್ಯತೆಯಿದೆ. ಸೂಪರ್ 8 ಫೆಬ್ರುವರಿ 21 ರಿಂದ ಪ್ರಾರಂಭವಾಗಲಿದೆ.

T20 World Cup 2026: ಸೂಪರ್ 8 ಹಂತದ ಗ್ರೂಪ್ 1ರ ವೇಳಾಪಟ್ಟಿ ಪ್ರಕಟ; ಫೆಬ್ರುವರಿ 22ರಂದು ಭಾರತ- ದಕ್ಷಿಣ ಆಫ್ರಿಕಾ ಮುಖಾಮುಖಿ!
ಟೀಂ ಇಂಡಿಯಾ ಆಟಗಾರರು
Published On :

ಮಂಗಳವಾರ ಕ್ಯಾಂಡಿಯಲ್ಲಿ ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ 32ನೇ ಪಂದ್ಯ ಮಳೆಯಿಂದ ರದ್ದಾಗಿದೆ. ಒಂದು ಚೆಂಡನ್ನು ಬೌಲ್ ಮಾಡದೆಯೇ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ಎರಡೂ ತಂಡಗಳಿಗೆ ತಲಾ ಒಂದು ಅಂಕ ದೊರೆಯಿತು. ಈ ಮೂಲತ ಜಿಂಬಾಬ್ವೆ ತಂಡವು ಶ್ರೀಲಂಕಾ ಜೊತೆಗೆ ಗ್ರೂಪ್ ಬಿಯಿಂದ ಸೂಪರ್ 8ಗೆ ಅರ್ಹತೆ ಪಡೆದರೆ, ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್ ಪಂದ್ಯಾವಳಿಯಿಂದಲೇ ಹೊರಬಿದ್ದಿದೆ.

ಆಸ್ಟ್ರೇಲಿಯ ತಂಡವು T20 ವಿಶ್ವಕಪ್‌ನಲ್ಲಿ ಎರಡನೇ ಸುತ್ತಿಗೆ ಮುನ್ನಡೆಯಲು ವಿಫಲವಾಗಿರುವುದು ಎರಡನೇ ಬಾರಿ ಮತ್ತು ಮೊದಲ ಬಾರಿಗೆ 2009ರಲ್ಲಿಯೂ ತಂಡವು ಹೊರಬಿದ್ದಿತ್ತು. ಇದು ಮಿಚೆಲ್ ಮಾರ್ಷ್ ನೇತೃತ್ವದ ತಂಡದ ಫಾರ್ಮ್ ಕೊರತೆಯನ್ನು ತೋರಿಸುತ್ತದೆ. ಫೆಬ್ರುವರಿ 13 ರಂದು ಜಿಂಬಾಬ್ವೆ ವಿರುದ್ಧ ಮತ್ತು ಫೆಬ್ರುವರಿ 16 ರಂದು ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಸೋಲು ಕಂಡಿತು. ಮತ್ತೊಂದೆಡೆ, ಜಿಂಬಾಬ್ವೆ ಪಂದ್ಯಾವಳಿಯ ಎರಡನೇ ಸುತ್ತಿಗೆ ಅರ್ಹತೆ ಪಡೆದಿರುವುದು ಇದು ಎರಡನೇ ಬಾರಿಯಾಗಿದೆ. 2022 ರಲ್ಲಿ ಅವರು ಸೂಪರ್ 12 ಗೆ ತಲುಪಿದ್ದರು.

ಇದೀಗ, ಏಳು ತಂಡಗಳು ಸೂಪರ್ 8ಗೆ ಪ್ರವೇಶ ಪಡೆದಿವೆ. ಗ್ರೂಪ್ ಎ ನಲ್ಲಿ ಕೇವಲ ಒಂದು ಸ್ಥಾನ ಮಾತ್ರ ಉಳಿದಿದ್ದು, ಬಹುಶಃ ಪಾಕಿಸ್ತಾನ ತಂಡವು ಮುನ್ನಡೆ ಸಾಧಿಸುವ ಸಾಧ್ಯತೆಯಿದೆ. ಸೂಪರ್ 8 ಫೆಬ್ರುವರಿ 21 ರಿಂದ ಪ್ರಾರಂಭವಾಗಲಿದ್ದು, ವೇಳಾಪಟ್ಟಿ ಪ್ರಕಟವಾಗಿದೆ.

ಟಿ20 ವಿಶ್ವಕಪ್ ಸೂಪರ್ 8, ಗ್ರೂಪ್ 1 ವೇಳಾಪಟ್ಟಿಗೆ ಬಂದರೆ, ಭಾರತ ಫೆಬ್ರುವರಿ 22 ರಂದು ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಫೆಬ್ರುವರಿ 26 ರಂದು ಜಿಂಬಾಬ್ವೆ ವಿರುದ್ಧ ತಮ್ಮ ಎರಡನೇ ಪಂದ್ಯವನ್ನು ಆಡಲಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ವಿರುದ್ಧ ತಮ್ಮ ಅಂತಿಮ ಪಂದ್ಯವನ್ನು ಆಡಲಿದ್ದಾರೆ.

ಪಾಕಿಸ್ತಾನ ತಂಡವು ಗ್ರೂಪ್ ಎನಿಂದ ಅರ್ಹತೆ ಪಡೆದು, ಸೆಮಿಸ್/ಫೈನಲ್ ತಲುಪಿ, ಮತ್ತೆ ಭಾರತ ವಿರುದ್ಧ ಆಡುವ ಅವಕಾಶ ಇನ್ನೂ ಇದೆ. ಆದರೆ, ಅದು ಸದ್ಯಕ್ಕೆ ಸ್ವಲ್ಪ ದೂರದಲ್ಲಿದೆ.

ಟಿ20 ವಿಶ್ವಕಪ್ ಸೂಪರ್ 8, ಗ್ರೂಪ್ 1 ವೇಳಾಪಟ್ಟಿ

  • ಫೆಬ್ರುವರಿ 26ರಂದು ಭಾರತ vs ದಕ್ಷಿಣ ಆಫ್ರಿಕಾ - ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

  • ಫೆಬ್ರುವರಿ 23ರಂದು ಜಿಂಬಾಬ್ವೆ vs ವೆಸ್ಟ್ ಇಂಡೀಸ್ - ವಾಂಖೆಡೆ ಕ್ರೀಡಾಗಂದ, ಮುಂಬೈ

  • ಫೆಬ್ರುವರಿ 26ರಂದು ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ - ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

  • ಫೆಬ್ರುವರಿ 26ರಂದು ಭಾರತ vs ಜಿಂಬಾಬ್ವೆ - ಎಂಎ ಚಿದಂಬರಂ ಕ್ರೀಡಾಂಗಣ, ಚೆನ್ನೈ

  • ಮಾರ್ಚ್ 1ರಂದು ಜಿಂಬಾಬ್ವೆ vs ದಕ್ಷಿಣ ಆಫ್ರಿಕಾ - ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ

  • ಮಾರ್ಚ್ 1ರಂದು ಭಾರತ vs ವೆಸ್ಟ್ ಇಂಡೀಸ್ - ಈಡನ್ ಗಾರ್ಡನ್ಸ್, ಕೋಲ್ಕತ್ತಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.