T20 World Cup 2026: ಹ್ಯಾಂಡ್ ಶೇಕ್ ವಿವಾದ; ಟೀಂ ಇಂಡಿಯಾ ವಿರುದ್ದ ಸಂಜಯ್ ಮಂಜ್ರೇಕರ್ ಕಿಡಿ! ನೆಟ್ಟಿಗರ ತರಾಟೆ
ಈ ಮಧ್ಯೆ ಭಾರತ ಹ್ಯಾಂಡ್ ಶೇಕ್ ಮಾಡದಿರಲು ನಿರ್ಧರಿಸಿದೆ ಎಂದು ವರದಿ ಮಾಡಿದೆ. ಈ ಬೆನ್ನಲ್ಲೆ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ನೋ ಹ್ಯಾಂಡ್ ಶೇಕ್ ಅಭಿಯಾನದ ಬಗ್ಗೆ ಕಿಡಿಕಾರಿದ್ದಾರೆ.

ಕೊಲಂಬೊ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ - ಪಾಕಿಸ್ತಾನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಉಭಯ ತಂಡಗಳ ನಾಯಕರು ಹ್ಯಾಂಡ್ ಶೇಕ್ ಮಾಡುತ್ತಾರೆಯೋ ಇಲ್ಲವೋ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಈ ಮಧ್ಯೆ ಭಾರತ ಹ್ಯಾಂಡ್ ಶೇಕ್ ಮಾಡದಿರಲು ನಿರ್ಧರಿಸಿದೆ ಎಂದು ವರದಿ ಮಾಡಿದೆ. ಈ ಬೆನ್ನಲ್ಲೆ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ನೋ ಹ್ಯಾಂಡ್ ಶೇಕ್ ಅಭಿಯಾನದ ಬಗ್ಗೆ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಸಂಜಯ್ ಮಂಜ್ರೇಕರ್, ಭಾರತ ಆರಂಭಿಸಿರುವ ಈ ನೋ ಹ್ಯಾಂಡ್ ಶೇಕ್ ಎಂಬುದು ತುಂಬಾ ಮೂರ್ಖತನದಿಂದ ಕೂಡಿದ ಕೆಲಸ. ನಮ್ಮಂತಹ ರಾಷ್ಟ್ರಕ್ಕೆ ಇದು ಯೋಗ್ಯ ಅಲ್ಲ. ಆಟದ ಉತ್ಸಾಹದಲ್ಲಿ ಸರಿಯಾಗಿ ಆಟವಾಡಿ ಅಥವಾ ಆಟವಾಡಲೇಬೇಡಿ " ಎಂದು ಕಿಡಿಕಾರಿದ್ದಾರೆ.
ಸಂಜಯ್ ಮಂಜ್ರೇಕರ್ ಟ್ವೀಟ್ ವಿರುದ್ಧ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.ಈತ ಯಾವಾಗಿನಿಂದ ಪಾಕಿಸ್ತಾನಕ್ಕೆ ಬೆಂಬಲ ಕೊಡಲು ಆರಂಭಿಸಿದ", "ಭಯೋತ್ಪಾದಕರ ಜತೆ ಕೈಕುಲುಕುವುದಕ್ಕೆ ನಮಗೇನು ಬುದ್ದಿಕೆಟ್ಟಿದೆಯಾ " ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಪಾಕಿಸ್ತಾನ ತಂಡದ ಜತೆ ನಿಂತಿರುವ ಫೋಟೋಗಳು, ವ್ಯಂಗ್ಯ ಚಿತ್ರಗಳನ್ನು ರಚಿಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



