ಕ್ರಿಕೆಟ್

WPL 2026 Final: RCBಯ ರಾಧಾ ಯಾದವ್ ಹಿಟ್ ವಿಕೆಟ್ ವಿವಾದ, ಇಷ್ಟಕ್ಕೂ ಆಗಿದ್ದೇನು? ಅಂಪೈರ್ ಯಾಕೆ ಔಟ್ ನೀಡಲಿಲ್ಲ?

WPL ಇತಿಹಾಸದಲ್ಲೇ ಮೊದಲ ಬಾರಿಗೆ ಗರಿಷ್ಠ ರನ್ ಚೇಸ್ ಮಾಡಿ ದಾಖಲೆಯ ಸಹಿತ ಈ ಪಂದ್ಯವನ್ನು ಗೆದ್ದುಕೊಂಡಿತು.

WPL 2026 Final: RCBಯ ರಾಧಾ ಯಾದವ್ ಹಿಟ್ ವಿಕೆಟ್ ವಿವಾದ, ಇಷ್ಟಕ್ಕೂ ಆಗಿದ್ದೇನು? ಅಂಪೈರ್ ಯಾಕೆ ಔಟ್ ನೀಡಲಿಲ್ಲ?
ರಾಧಾ ಯಾದವ್ ಹಿಟ್ ವಿಕೆಟ್ ವಿವಾದ
Published On :

ವಡೋದರಾ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮಹಿಳಾ ಪ್ರೀಮಿಯರ್ ಟೂರ್ನಿ ಫೈನಲ್ ಪಂದ್ಯದಲ್ಲಿ ಜಯಭೇರಿ ಬಾರಿಸಿ 2ನೇ ಬಾರಿಗೆ ಚಾಂಪಿಯನ್ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮತ್ತೊಂದು ವಿವಾದ ಕೇಳಿಬಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಎರಡನೇ ಬಾರಿಗೆ ವುಮನ್ಸ್ ಪ್ರೀಮಿಯರ್ ಲೀಗ್ ಅಲ್ಲಿ ಚಾಂಪಿಯನ್ ಆಗಿ ಟ್ರೋಫಿಗೆ ಮುತ್ತಿಟ್ಟಿದ್ದು, WPL ಇತಿಹಾಸದಲ್ಲೇ ಮೊದಲ ಬಾರಿಗೆ ಗರಿಷ್ಠ ರನ್ ಚೇಸ್ ಮಾಡಿ ದಾಖಲೆಯ ಸಹಿತ ಈ ಪಂದ್ಯವನ್ನು ಗೆದ್ದುಕೊಂಡಿತು.

ಬೃಹತ್ ಮೊತ್ತದ ಹೊರತಾಗಿಯೂ ಅದ್ಭುತ ರನ್ ಚೇಸ್ ಮೂಲಕ ಆರ್​​ಸಿಬಿ ಮತ್ತೊಮ್ಮೆ ಕಪ್​​​ನ ತನ್ನದಾಗಿಸಿಕೊಂಡಿತು.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಮ್ಮೆ ಫೈನಲ್​​ಗೆ ಬಂದು ಸೋತಿದ್ದು ಈ ಮಧ್ಯೆ ಆರ್​​ಸಿಬಿ ಕಳ್ಳಾಟ ಆಡಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಈಗ ಸ್ಪಷ್ಟನೆ ಕೂಡ ಸಿಕ್ಕಿದೆ.

ಟಾಸ್ ಗೆದ್ದ ಆರ್ ಸಿಬಿ ಬೌಲಿಂಗ್ ಆಯ್ಕೆ

ಟಾಸ್​ ಗೆದ್ದ ಆರ್​​ಸಿಬಿ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಡೆಲ್ಲಿ ಉತ್ತಮ ಆರಂಭ ಕಂಡಿತು. ಸಂಘಟಿತ ಆಟದಿಂದ ಡೆಲ್ಲಿ ತಂಡ ಅಂತಿಮವಾಗಿ 20 ಓವರ್​​ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 203 ರನ್​​​ ಕಲೆ ಹಾಕಿತು. ಈ ಬೃಹತ್ ಮೊತ್ತ ಬೆನ್ನು ಹತ್ತಿದ ಆರ್​​ಸಿಬಿಗೆ ಆರಂಭಿಕ ಆಘಾತ ಎದುರಾಯಿತು. ತಂಡದ ಮೊತ್ತ 9 ರನ್ ಇದ್ದಾಗ ಗ್ರೇಸ್ ಹ್ಯಾರಿಸ್ ಅವರು ವಿಕೆಟ್ ಒಪ್ಪಿಸಿದರು. ನಂತರ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವಾಲ್ ಅವರ ಜೊತೆ ದಾಖಲೆಯ ಜೊತೆಯಾಟದಿಂದ ಆರ್​​ಸಿಬಿ ಗೆಲುವಿನ ಹಾದಿ ಹಿಡಿಯಿತು.

ಸತತ 2ನೇ ಬಾರಿಗೆ ಆರ್ ಬಿಅದ್ಭುತ ಬ್ಯಾಟಿಂಗ್

ಸುಲಭದಲ್ಲಿ ಕಪ್ ನಮ್ಮದಾಯಿತು ಎನ್ನುವಾಗ ಮತ್ತೆ ಸಂಕಷ್ಟ ಎದುರಾಯಿತು. ತಂಡದ ಮೊತ್ತ 174 ರನ್ ಇರುವಾಗ ಆರ್​ಸಿಬಿ 2ನೇ ವಿಕೆಟ್ ಕಳೆದುಕೊಂಡಿತು. ಜಾರ್ಜಿಯಾ ವಾಲ್(54 ಬಾಲ್​​ಗೆ 79 ರನ್) ಔಟ್ ಆದರು. ನಂತರ ರಿಚಾ ಘೋಷ್ ಕೇವಲ 6 ರನ್​​ಗೆ ವಿಕೆಟ್ ಒಪ್ಪಿಸಿದರು. ಸ್ಮೃತಿ ಕೂಡ ಔಟ್ ಆದರು. ತಂಡದ ಮೊತ್ತ 191 ಇರುವಾಗ ನಾಲ್ಕು ವಿಕೆಟ್ ಬಿದ್ದಿತ್ತು.

ಕೊನೆಯ ಓವರ್ ಹೈಡ್ರಾಮಾ

ಕೊನೆಯ ಓವರ್​​ನಲ್ಲಿ ಬೇಕಿದ್ದಿದ್ದು 10 ರನ್​​ಗಳು. ಆಗ, ಮೊದಲ ಎರಡು ಬಾಲ್, ಎರಡು ಸಿಂಗಲ್ ಬಂತು. ಕ್ರೀಜ್​​ನಲ್ಲಿ ಇದ್ದ ರಾಧಾ ಅವರು ಮೂರನೇ ಬಾಲ್​​ನ ಬೌಂಡರಿಗೆ ಅಟ್ಟಿದರು. ನಾಲ್ಕನೇ ಬಾಲ್​ ಕೂಡ ಬೌಂಡರಿ ಹೋಯಿತು. ಈ ವೇಳೆ ರಾಧಾ ಅವರ ಬ್ಯಾಟ್ ಸ್ಟಂಪ್​​ಗೆ ತಾಗಿ ಬೇಲ್ಸ್ ಎಗರಿದೆ ಎಂದು ಹೇಳಲಾಗಿದೆ. ಈ ಕುರಿತ ವಿಡಿಯೋಗಳೂ ವೈರಲ್ ಆಗುತ್ತಿವೆ.

ಆದರೆ ಅಸಲಿಗೆ ಇದು ಹಿಟ್ ವಿಕೆಟ್ ಅಲ್ಲವೇ ಅಲ್ಲ. ಬದಲಿಗೆ ಡೆಲ್ಲಿ ವಿಕೆಟ್ ಕೀಪರ್ ಕೈಯಿಂದ ಬೇಲ್ಸ್ ಗಳು ಎಗರಿವೆ. ಈ ಕುರಿತು ವಿಡಿಯೋಗಳು ವೈರಲ್ ಆಗುತ್ತಿವೆ. ಅಸಲಿಗೆ ಸ್ಟಂಪ್​​ಗೆ ತಾಗಿದ್ದು ಕೀಪರ್ ಕೈ. ವಿಡಿಯೋದಲ್ಲಿ ಅದು ಸ್ಪಷ್ಟವಾಗಿ ಕಾಣಿಸಿದೆ. ಆದಾಗ್ಯೂ ಕೆಲವರು ಈ ರೀತಿಯಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.