CSK ಯಲ್ಲಿ ಶೇ. 25 ರಷ್ಟು ಪಾಲು ಕೇಳಿದ್ದಾರೆಯೇ ಧೋನಿ? 3,820 ಕೋಟಿ ರೂ ಕ್ಲೈಮ್ ಹಿಂದಿರುವ ಸತ್ಯವೇನು?
ಇಂತಹ ಯಾವುದೇ ಪಾಲುದಾರಿಕೆ ಮಾತುಕತೆಗಳ ಬಗ್ಗೆ ಧೋನಿ ಅಥವಾ ಸಿಎಸ್‌ಕೆ ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸ್‌ನಲ್ಲಿ ಎಂ.ಎಸ್. ಧೋನಿ ಶೇ.25 ರಷ್ಟು ಪಾಲನ್ನು ಕೇಳಿದ್ದಾರೆ ಎಂಬ ವರದಿಯು ಹೊಸ ಊಹಾಪೋಹಗಳಿಗೆ ಕಾರಣವಾಗಿದೆ. ಇದೇ ಫ್ರಾಂಚೈಸಿ ಹಾಗೂ ಧೋನಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸಿದೆ ಎಂಬ ವದಂತಿಗಳು ಹರಡಿವೆ. ಆದರೆ, ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಇದೆಲ್ಲಾ ಕಟ್ಟು ಕಥೆ ಎಂದಿದ್ದಾರೆ.
ವರದಿಯಾದ ಅಂಕಿಅಂಶಗಳು ವಾಸ್ತವಿಕವಾಗಿಲ್ಲ ಎಂದು ಹೇಳಿರುವ ಅವರು, ಇದು ಉದ್ದೇಶಪೂರ್ವಕವಾಗಿ ಹಬ್ಬಿಸಿದ ಸುದ್ದಿಯಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಯಾವುದೇ ಪಾಲುದಾರಿಕೆ ಮಾತುಕತೆಗಳ ಬಗ್ಗೆ ಧೋನಿ ಅಥವಾ ಸಿಎಸ್‌ಕೆ ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.
ವರದಿಗಳ ಪ್ರಕಾರ ಧೋನಿ ಸಿಎಸ್‌ಕೆಯಲ್ಲಿ ಶೇ.25 ರಷ್ಟು ಪಾಲನ್ನು ಕೇಳಿದ್ದಾರೆ. ಮಾತುಕತೆಯ ಸಮಯದಲ್ಲಿ ಈ ಅಂಕಿಅಂಶ ಬದಲಾಗಿದೆ ಎಂದು ಹೇಳಲಾಗಿದೆ. ನಂತರದ ಹಂತದಲ್ಲಿ ಫ್ರಾಂಚೈಸಿ ಶೇ. 5.5 ರಷ್ಟು ಪಾಲಿನ ಬಗ್ಗೆ ಚರ್ಚಿಸಿದೆ ಅಥವಾ ಅದನ್ನು ನೀಡಲು ಮುಂದಾಯಿತು ಎಂಬ ಮಾತುಗಳೂ ಕೇಳಿಬಂದಿವೆ. ಇದಕ್ಕೆ ಧೋನಿ ಮತ್ತು ಸಿಎಸ್‌ಕೆ ಆಡಳಿತ ಮಂಡಳಿಯ ನಡುವೆ ಭಿನ್ನಾಭಿಪ್ರಾಯವಿರಬಹುದು ಎಂಬ ಊಹಾಪೋಹಗಳಿಗೂ ಪುಷ್ಪಿ ನೀಡಿದೆ. ಆದರೆ, ಚೋಪ್ರಾ ಈ ವಾದಗಳನ್ನು ಬಲವಾಗಿ ಪ್ರಶ್ನಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಭಾರತದ ಮಾಜಿ ಬ್ಯಾಟರ್, ಸಿಎಸ್‌ಕೆಯ ಮೌಲ್ಯವನ್ನು ಉಲ್ಲೇಖಿಸಿ, ಶೇ.25 ರಷ್ಟು ಪಾಲನ್ನು ಪಡೆಯಲು ಭಾರಿ ಆರ್ಥಿಕ ಬದ್ಧತೆಯ ಅಗತ್ಯವಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಸಿಎಸ್‌ಕೆಯ ಮೌಲ್ಯ ಸುಮಾರು 1.8 ಬಿಲಿಯನ್ ಡಾಲರ್ ಆಗಿದ್ದರೆ, ಶೇ.25 ರಷ್ಟು ಪಾಲಿನ ಮೌಲ್ಯ ಸುಮಾರು 450 ಮಿಲಿಯನ್ ಡಾಲರ್ ಆಗುತ್ತದೆ. 3,820 ಕೋಟಿ ರೂ ಮೊತ್ತದ ಕ್ಲೈಮ್ ಪಡೆಯಲು ಫ್ರಾಂಚೈಸಿಯಲ್ಲಿ ಹೆಚ್ಚಾಗಿ ಭಾರಿ ಹೂಡಿಕೆಯ ಅಗತ್ಯವಿರುತ್ತದೆ ಎಂದು ಹೇಳಿದರು.
"ಇದು ವಾಸ್ತವಿಕವಲ್ಲ. ಇದು ಸಾಧ್ಯವಿಲ್ಲ. ಯಾರೂ ಯಾರಿಗೂ 400 ದಶಲಕ್ಷ ಡಾಲರ್ ನೀಡುವುದಿಲ್ಲ. ವಾಸ್ತವವಾಗಿ ಶೇ. 25 ರಷ್ಟು ಪಾಲು ಪಡೆಯಲು ನೀವು 400 ದಶಲಕ್ಷ ಡಾಲರ್ ಹೂಡಿಕೆ ಮಾಡಬೇಕಾಗುತ್ತದೆ. ಸಿಎಸ್‌ಕೆ (CSK) ಯಂತಹ ದೊಡ್ಡ ಫ್ರಾಂಚೈಜಿಯಲ್ಲಿ ಅತ್ಯಲ್ಪ ಪಾಲನ್ನು ಪಡೆಯುವುದಕ್ಕೂ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಬೇಕಾಗಿರುತ್ತದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಶೇಕಡಾ 3.5 ಮತ್ತು 5.5 ರಷ್ಟು ಪಾಲಿನ ಕುರಿತಾದ ವರದಿಗಳು ಹರಿದಾಡುತ್ತಿವೆಯಾದರೂ, ಸಿಎಸ್‌ಕೆ ಅಥವಾ ಧೋನಿ ಈ ವಿವರಗಳನ್ನು ಸಾರ್ವಜನಿಕವಾಗಿ ದೃಢಪಡಿಸಿಲ್ಲ.
ಇದು ಉದ್ದೇಶಪೂರ್ವಕವಾಗಿ ಹಬ್ಬಿಸಲಾದ ಸುದ್ದಿ ಎಂದು ನನಗೆ ಅನ್ನಿಸುತ್ತದೆ. ಇದನ್ನು ಯಾರು ಹಬ್ಬಿಸಿದ್ದಾರೆಂದು ನನಗೆ ತಿಳಿದಿಲ್ಲ. ಇದೇ ವೇಳೆ ತಮ್ಮ ಬಳಿ ಪರಿಶೀಲಿಸಿದ ಮಾಹಿತಿ ಇಲ್ಲದ ಕಾರಣ ಈ ವರದಿಯನ್ನು 'ಸುಳ್ಳು' ಎಂದು ಕರೆಯಲು ಸಾಧ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
'ಒಮ್ಮೆ ಅವರ ಕೊಠಡಿ ಬಾಗಿಲು ಮುಚ್ಚಿದರೆ, ಯಾರಿಗೂ ಪ್ರವೇಶವಿರುತ್ತಿರಲಿಲ್ಲ': ಎಂಎಸ್ ಧೋನಿ ಕುರಿತು ಅಜಿಂಕ್ಯ ರಹಾನೆ
ಫ್ರಾಂಚೈಸಿ ಅಮಾನತುಗೊಂಡಿದ್ದ 2016 ಮತ್ತು 2017ರ ಸೀಸನ್‌ಗಳನ್ನು ಹೊರತುಪಡಿಸಿ, ತಮ್ಮ ಬಹುತೇಕ ಐಪಿಎಲ್ (IPL) ವೃತ್ತಿಜೀವನದುದ್ದಕ್ಕೂ ಧೋನಿ ಸಿಎಸ್‌ಕೆ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರು ಐಪಿಎಲ್‌ನಲ್ಲಿ 5,439 ರನ್‌ಗಳನ್ನು ಗಳಿಸಿದ್ದಾರೆ ಮತ್ತು ಸಿಎಸ್‌ಕೆ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಧೋನಿ ಐಪಿಎಲ್ 2026 ರಲ್ಲಿ ಆಡಲಿಲ್ಲವಾದರೂ, ಫ್ರಾಂಚೈಸಿೊಂದಿಗಿನ ಅವರ ಒಡನಾಟವು ಗಮನಾರ್ಹ ಗಮನವನ್ನು ಸೆಳೆಯುತ್ತಲೇ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


